Belagavi

385 ಅಭ್ಯರ್ಥಿಗಳ ಹಣೆಬರಹ ಇವಿಎಂ ಮಷೀನ್‌ನಲ್ಲಿ ಭದ್ರ

ಮಹಾನಗರ ಪಾಲಿಕೆ ಚುನಾವಣೆ-ಶಾಂತಿಯುತ, ನೀರಸ ಮತದಾನ


ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಆದರೆ, ಪ್ರಚಾರದ ವೇಳೆ ಇದ್ದಷ್ಟು ಅಬ್ಬರ ಮತದಾನದ ವೇಳೆ ಕಂಡುಬರಲಿಲ್ಲ. ಬಹುತೇಕ ವಾರ್ಡ್ಗಳಲ್ಲಿ ನೀರಸ ಮತದಾನ ನಡೆಯಿತು.
ಬೆಳಗ್ಗೆಯಿಂದಲೇ ನಗರದಲ್ಲಿ ನೀರಸ ಮತದಾನ ಆರಂಭವಾಯಿತು. ಮಧ್ಯಾಹ್ನದವರೆಗೂ ಒಬ್ಬೊಬ್ಬರಾಗಿ ಮತದಾರರು ಮತಕೇಂದ್ರಗಳತ್ತ ಆಗಮಿಸಿ ಮತ ಚಲಾಯಿಸುತ್ತಿರುವುದು ಕಂಡು ಬಂತು. ೫೮ ವಾರ್ಡ್ಗಳ ಪೈಕಿ ಯಾವುದೇ ಬೂತ್‌ನಲ್ಲೂ ಮತದಾರರ ಸಾಲು ಕಾಣಿಸಲೇ ಇಲ್ಲ. ಬಹುತೇಕ ಕಡೆ ಚುನಾವಣೆ ಸಿಬ್ಬಂದಿ ಮತದಾರರ ದಾರಿ ಕಾಯುತ್ತ ಕುಳಿತಂತೆ ಕಂಡುಬAತು. ಬೆಳಗ್ಗೆಯಿಂದ ಮಧ್ಯಾಹ್ನ ೪ ಗಂಟೆಯವರೆಗೆ ಹೆಚ್ಚಿನ ಮತದಾರರು ಮತಕೇಂದ್ರಗಳತ್ತ ಸುಳಿಯಲಿಲ್ಲ. ಮಧ್ಯಾಹ್ನ ೩.೩೦ರವರೆಗೆ ಶೇ.೩೩.೮೭ರಷ್ಟು ಮತದಾನವಾಗಿತ್ತು. ಸಂಜೆ ೫ ಗಂಟೆ ನಂತರ ಕೆಲವು ವಾರ್ಡ್ಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಚಣೆ ಮಾಡುತ್ತಿರುವುದು ಕಂಡುಬAತು. ವಾರ್ಡ್ ನಂ.೪೮ರಲ್ಲಿ ಸ್ವಲ್ಪ ಮಟ್ಟಿಗೆ ತುರುಸಿನ ಮತದಾನ ನಡೆಯಿತು. ಇಲ್ಲಿ ಮಧ್ಯಾಹ್ನ ೩ ಗಂಟೆವರೆಗೆ ಶೇ.೫೦.೬೭ರಷ್ಟು ಮತದಾನವಾಗಿತ್ತು. ವಾರ್ಡ್ ನಂ.೨೬ರಲ್ಲಿ ಅತ್ಯಂತ ನೀರಸ ಅಂದರೆ ಶೇ.೧೪.೯೩ರಷ್ಟು ಮಾತ್ರ ಮತದಾನ ನಡೆಯಿತು.
ಮತದಾನ ಕೇಂದ್ರದ ಹೊರಗೆ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಾದರೂ ಮತಕೇಂದ್ರದೊಳಗೆ ಹೋದರೆ ಮತದಾರರಿಲ್ಲದೇ ಬಣ ಬಣ ಎನ್ನುತ್ತಿದ್ದವು. ಮತದಾನ ಕಡಿಮೆ ಆಗಲು ಕೊರೊನಾ ಭಯ ಹಾಗೂ ಹಿಂದುಗಳಲ್ಲಿ ಬಹುತೇಕ ಮಹಿಳೆಯವರು ಶುಕ್ರಗೌರಿ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರಿAದ ಮಧ್ಯಾಹ್ನದವರೆಗೆ ಮತಕೇಂದ್ರಗಳತ್ತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಆದರೆ, ಸಂಜೆ ೫ ಗಂಟೆಯ ನಂತರ ಮಹಿಳೆಯವರು ಹೆಚ್ಚಿನ ಪ್ರಮಾಣದಲ್ಲಿ ಮತಕೇಂದ್ರಗಳತ್ತ ಆಗಮಿಸುತ್ತಿರುವುದು ಕಂಡುಬAತು.
ಮೂರ್ನಾಲ್ಕು ದಿನಗಳಿಂದ ಭರ್ಜರಿ ಪ್ರಚಾರ ನಡೆಸಿ ಅತ್ಯಂತ ಹುರುಪಿನಲ್ಲಿದ್ದ ಅಭ್ಯರ್ಥಿಗಳು ಮತದಾನ ದಿನ ಮತಕೇಂದ್ರಗಳತ್ತ ಹೆಚ್ಚಿನ ಜನರು ಆಗಮಿಸದಿರುವುದನ್ನು ಕಂಡು ನಿರಾಸೆಯ ಭಾವ ಎದ್ದು ಕಾಣುತ್ತಿತ್ತು. ಅಭ್ಯರ್ಥಿಗಳ ಬೆಂಬಲಿಗರು ಓಣಿಗಳಲ್ಲಿ ಸುತ್ತು ಹಾಕುತ್ತ ಮತದಾನ ಮಾಡಲು ಬನ್ನಿ ಎಂದು ಕರೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಮತದಾನ ಪ್ರಮಾಣ ಕಡಿಮೆಯಾಗಿರುವುದು ಅಭ್ಯರ್ಥಿಗಳ ಲೆಕ್ಕಾಚಾರ ಬುಡಮೇಲು ಮಾಡಿದೆ. ಹೆಚ್ಚುಕಡಿಮೆ ಒಂದು ವಾರ್ಡಿನಲ್ಲಿ ಸಾವಿರದ ಆಸುಪಾಸು ಮತದಾರರಿದ್ದು, ಪ್ರತಿ ಕ್ಷೇತ್ರಕ್ಕೆ ಐದರಿಂದ ೧೦ರವರೆಗೆ ಅಭ್ಯರ್ಥಿಗಳು ಇದ್ದು, ಕಡಿಮೆ ಮತದಾನ ಆಗಿರುವುದರಿಂದ ಗೆಲುವಿಗೆ ೧೦೦೦ ರಿಂದ ೧೫೦೦ ಮತಗಳಿಸಿದವರು ವಿಜಯದ ಪತಾಕೆ ಹಾರಿಸುವ ಸಾಧ್ಯತೆ ಇದೆ. ಏನೇ ಆದರೂ ಸೆ.೬ರಂದು ಮತ ಏಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.

 


Leave a Reply