Belagavi

385 ಅಭ್ಯರ್ಥಿಗಳ ಹಣೆಬರಹ ಇವಿಎಂ ಮಷೀನ್‌ನಲ್ಲಿ ಭದ್ರ

ಮಹಾನಗರ ಪಾಲಿಕೆ ಚುನಾವಣೆ-ಶಾಂತಿಯುತ, ನೀರಸ ಮತದಾನ


ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಆದರೆ, ಪ್ರಚಾರದ ವೇಳೆ ಇದ್ದಷ್ಟು ಅಬ್ಬರ ಮತದಾನದ ವೇಳೆ ಕಂಡುಬರಲಿಲ್ಲ. ಬಹುತೇಕ ವಾರ್ಡ್ಗಳಲ್ಲಿ ನೀರಸ ಮತದಾನ ನಡೆಯಿತು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗ್ಗೆ ೭ ಗಂಟೆಗೆ ವಾಡ್ ನಂ.೧೩ರ ೧೪೬ ಬೂತ್‌ನಲ್ಲಿ ಪತ್ನಿ ಜೊತೆಗೆ ಆಗಮಿಸಿ ಮತಚಲಾಯಿಸಿದರು.
ಬೆಳಗ್ಗೆಯಿಂದಲೇ ನಗರದಲ್ಲಿ ನೀರಸ ಮತದಾನ ಆರಂಭವಾಯಿತು. ಮಧ್ಯಾಹ್ನದವರೆಗೂ ಒಬ್ಬೊಬ್ಬರಾಗಿ ಮತದಾರರು ಮತಕೇಂದ್ರಗಳತ್ತ ಆಗಮಿಸಿ ಮತ ಚಲಾಯಿಸುತ್ತಿರುವುದು ಕಂಡು ಬಂತು. ೫೮ ವಾರ್ಡ್ಗಳ ಪೈಕಿ ಯಾವುದೇ ಬೂತ್‌ನಲ್ಲೂ ಮತದಾರರ ಸಾಲು ಕಾಣಿಸಲೇ ಇಲ್ಲ. ಬಹುತೇಕ ಕಡೆ ಚುನಾವಣೆ ಸಿಬ್ಬಂದಿ ಮತದಾರರ ದಾರಿ ಕಾಯುತ್ತ ಕುಳಿತಂತೆ ಕಂಡುಬAತು. ಬೆಳಗ್ಗೆಯಿಂದ ಮಧ್ಯಾಹ್ನ ೪ ಗಂಟೆಯವರೆಗೆ ಹೆಚ್ಚಿನ ಮತದಾರರು ಮತಕೇಂದ್ರಗಳತ್ತ ಸುಳಿಯಲಿಲ್ಲ. ಮಧ್ಯಾಹ್ನ ೩.೩೦ರವರೆಗೆ ಶೇ.೩೩.೮೭ರಷ್ಟು ಮತದಾನವಾಗಿತ್ತು. ಸಂಜೆ ೫ ಗಂಟೆ ನಂತರ ಕೆಲವು ವಾರ್ಡ್ಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಚಣೆ ಮಾಡುತ್ತಿರುವುದು ಕಂಡುಬAತು. ವಾರ್ಡ್ ನಂ.೪೮ರಲ್ಲಿ ಸ್ವಲ್ಪ ಮಟ್ಟಿಗೆ ತುರುಸಿನ ಮತದಾನ ನಡೆಯಿತು. ಇಲ್ಲಿ ಮಧ್ಯಾಹ್ನ ೩ ಗಂಟೆವರೆಗೆ ಶೇ.೫೦.೬೭ರಷ್ಟು ಮತದಾನವಾಗಿತ್ತು. ವಾರ್ಡ್ ನಂ.೨೬ರಲ್ಲಿ ಅತ್ಯಂತ ನೀರಸ ಅಂದರೆ ಶೇ.೧೪.೯೩ರಷ್ಟು ಮಾತ್ರ ಮತದಾನ ನಡೆಯಿತು.
ಮತದಾನ ಕೇಂದ್ರದ ಹೊರಗೆ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಾದರೂ ಮತಕೇಂದ್ರದೊಳಗೆ ಹೋದರೆ ಮತದಾರರಿಲ್ಲದೇ ಬಣ ಬಣ ಎನ್ನುತ್ತಿದ್ದವು. ಮತದಾನ ಕಡಿಮೆ ಆಗಲು ಕೊರೊನಾ ಭಯ ಹಾಗೂ ಹಿಂದುಗಳಲ್ಲಿ ಬಹುತೇಕ ಮಹಿಳೆಯವರು ಶುಕ್ರಗೌರಿ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರಿAದ ಮಧ್ಯಾಹ್ನದವರೆಗೆ ಮತಕೇಂದ್ರಗಳತ್ತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಆದರೆ, ಸಂಜೆ ೫ ಗಂಟೆಯ ನಂತರ ಮಹಿಳೆಯವರು ಹೆಚ್ಚಿನ ಪ್ರಮಾಣದಲ್ಲಿ ಮತಕೇಂದ್ರಗಳತ್ತ ಆಗಮಿಸುತ್ತಿರುವುದು ಕಂಡುಬAತು.
ಮೂರ್ನಾಲ್ಕು ದಿನಗಳಿಂದ ಭರ್ಜರಿ ಪ್ರಚಾರ ನಡೆಸಿ ಅತ್ಯಂತ ಹುರುಪಿನಲ್ಲಿದ್ದ ಅಭ್ಯರ್ಥಿಗಳು ಮತದಾನ ದಿನ ಮತಕೇಂದ್ರಗಳತ್ತ ಹೆಚ್ಚಿನ ಜನರು ಆಗಮಿಸದಿರುವುದನ್ನು ಕಂಡು ನಿರಾಸೆಯ ಭಾವ ಎದ್ದು ಕಾಣುತ್ತಿತ್ತು. ಅಭ್ಯರ್ಥಿಗಳ ಬೆಂಬಲಿಗರು ಓಣಿಗಳಲ್ಲಿ ಸುತ್ತು ಹಾಕುತ್ತ ಮತದಾನ ಮಾಡಲು ಬನ್ನಿ ಎಂದು ಕರೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಮತದಾನ ಪ್ರಮಾಣ ಕಡಿಮೆಯಾಗಿರುವುದು ಅಭ್ಯರ್ಥಿಗಳ ಲೆಕ್ಕಾಚಾರ ಬುಡಮೇಲು ಮಾಡಿದೆ. ಹೆಚ್ಚುಕಡಿಮೆ ಒಂದು ವಾರ್ಡಿನಲ್ಲಿ ಸಾವಿರದ ಆಸುಪಾಸು ಮತದಾರರಿದ್ದು, ಪ್ರತಿ ಕ್ಷೇತ್ರಕ್ಕೆ ಐದರಿಂದ ೧೦ರವರೆಗೆ ಅಭ್ಯರ್ಥಿಗಳು ಇದ್ದು, ಕಡಿಮೆ ಮತದಾನ ಆಗಿರುವುದರಿಂದ ಗೆಲುವಿಗೆ ೧೦೦೦ ರಿಂದ ೧೫೦೦ ಮತಗಳಿಸಿದವರು ವಿಜಯದ ಪತಾಕೆ ಹಾರಿಸುವ ಸಾಧ್ಯತೆ ಇದೆ. ಏನೇ ಆದರೂ ಸೆ.೬ರಂದು ಮತ ಏಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.
ವಾರ್ಡ್ ನಂ.೨೫ರಲ್ಲಿ ಮತದಾರರ ಹೆಸರು ಮಾಯ: ವಾರ್ಡ್ ನಂ.೨೫ರ ೨೧೫ ಮತಕೇಂದ್ರದಲ್ಲಿ ಮತಪಟ್ಟಿಯಲ್ಲಿ ಹಲವರು ಹೆಸರು ಇಲ್ಲದಿರುವುದು ಗೊಂದಲಕ್ಕೆ ಕಾರಣವಾಯಿತು. ಮತಪಟ್ಟಿಯಲ್ಲಿ ಸಾವಿರಕ್ಕೂ ಹೆಚ್ಚು ಮತದಾರರು ಹೆಸರುಗಳು ನಾಪತ್ತೆಯಾಗಿವೆ ಎಂಬ ಆರೋಪ ಕೇಳಿಬಂತು. ಅಜಂನಗರದ ೨೧೫ರ ಮತಗಟ್ಟೆಯಲ್ಲಿ ಮತಚಲಾಯಿಸಲು ಮತಚೀಟಿ ಹಿಡಿದು ಬಂದರೆ ಮತಪಟ್ಟಯಲ್ಲಿ ಹೆಸರು ಇಲ್ಲದಿರುವುದು ಕಂಡು ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅಭ್ಯರ್ಥಿಗಳ ಬೆಂಬಲಿಗರು ಚುನಾವಣೆ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬೋಗಸ್ ಮತದಾನ ಆರೋಪ: ವಾರ್ಡ್ ನಂ.೩ರ ಪ್ರಾಥಮಿಕ ಶಾಲೆ ಬೂತ್ ನಂ.೩ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖೊಟ್ಟಿ ಮತದಾನ ಮಾಡಿಸಿದ್ದಾರೆ ಎಂದು ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಆರೋಪಿಸಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ ಬೆನಕೆ ಹಾಗೂ ಎಸಿಪಿ ಬರಮನಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಧಾನಿ ಭಾವಚಿತ್ರ, ಹೆಬ್ಬಾಳಕರ್ ಆಕ್ರೋಶ: ಕೆಲವು ಮತಕೇಂದ್ರಗಳಲ್ಲಿ ಬಿಜೆಪಿ ಬೆಂಬಲಿಗರು ಮತದಾರರಿಗೆ ಪ್ರಧಾನಿ ಮೋದಿ ಹಾಗೂ ಕಮಲ ಚಿತ್ರವಿರುವ ಚೀಟಿಯಲ್ಲಿ ವೋಟರ್ ನಂಬರ್ ಬರೆದುಕೊಟ್ಟಿದ್ದಾರೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ್ ಆರೋಪಿಸಿದರು. ಬಿಜೆಪಿ ಸೋಲುವ ಭೀತಿಯಿಂದ ಪ್ರಧಾನಿ ಭಾವಚಿತ್ರದ ಮೊರೆ ಹೋಗಿದೆ. ಆದರೆ ಮತದಾರರು ಪ್ರಬುದ್ಧರಾಗಿದ್ದು, ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Leave a Reply