Ballarykaranataka

ಕೂಡ್ಲಿಗಿ:ಹಿರಿಯ ಪತ್ರಕರ್ತ ಬೆಳ್ಳಗಟ್ಟೆ ಕೃಷ್ಣಪ್ಪ  ನಿಧನ


ಕೂಡ್ಲಿಗಿ  : ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರಿಯ ಪತ್ರಕರ್ತರು ಹಾಗೂ, ಕರ್ನಾಟಕ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷರು ಮತ್ತು ಬಯಲು ಸೀಮೆ ಸಮತೋಲನ ವಾರಪತ್ರಿಕೆ ಸಂಪಾದಕರಾದ ಬೆಳ್ಳಗಟ್ಟೆ ಕೃಷ್ಣಪ್ಪ(50).ಸೆ4ರಂದು ಬೆಳಗಿನ ಜಾವ ಬೆಳ್ಳಗಟ್ಟೆ ಗ್ರಾಮದ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ, ಅವರು ಬಹುದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತಿದ್ದರು.

ಅವರು ವಾರಪತ್ರಿಕೆ ಸಂಪಾದಕರಾಗಿ ಹಲವು ದಶಕಗಳ ಕಾಲ ತಮ್ಮ ಮೊನಚಾದ ವರದಿಗಳಿಂದ ಹಾಗೂ ಮನ ಮೋಹಕ ಅಂಕಣ ಬರಹಗಳಿಂದ ಹೆಸರಾಗಿದ್ದರು,
ಗೊಲ್ಲ ಸಮುದಾಯದ ಹಿರಿಯರಾಗಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸಿದ್ದರು. ಪತ್ರಿಕೋಧ್ಯಮದ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು,ಮತ್ತು ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪತ್ರಕರ್ತರೊಂದಿಗೆ ‍ಅವಿನಾಭಾವ ಸಂಬಂಧ ಹೊಂದಿದ್ದರು. ಈ ಮೂಲಕ ಅವರು ಪತ್ರಿಕಾ ಲೋಕದ ದಿಗ್ಗಜರೊಂದಿಗೆ ತಮ್ಮನ್ನು ಗುರುತಿಸಿಕೊಂಡು,ರಾಜ್ಯದ ಪ್ರಭಾವಿ ಪತ್ರಕರ್ತರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಕೂಡ್ಲಿಗಿ ಪತ್ರಕರ್ತರಾಗಿದ್ದರು.
ಅವರು ಪತ್ನಿ,ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು, ಪತ್ರಕರ್ತ ಮಿತ್ರರರನ್ನು ಅಗಲಿದ್ದಾರೆ.
*ಸಂತಾಪ*-ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷರಾದ ಮುರುಗೇಶ ಶಿವಪೂಜೆ ಸೇರಿದಂತೆ, ಸಂಘದ ರಾಜ್ಯ ಪದಾಧಿಕಾರಿಗಳು ಹಾಗೂ ಸಂಘದ ಜಿಲ್ಲಾ,ವಿವಿದ ತಾಲೂಕುಗಳ ಪದಾಧಿಕಾರಿಗಳು ಹಿರಿಯ ಪತ್ರಕರ್ತರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ,ಜಿಲ್ಲೆ ಹಾಗೂ ಕೂಡ್ಲಿಗಿ ತಾಲೂಕು ಪದಾಧಿಕಾರಿಗಳು.
ಗೊಲ್ಲ ಸಮುದಾಯ ಸೇರಿದಂತೆ ವಿವಿದ ಸಮುದಾಯಗಳ ಮುಖಂಡರು,ವಿವಿದ ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಹಾಗೂ
ವಿವಿದ ಕ್ಷೇತ್ರಗಳ ಪ್ರಮುಖರು.
ವಿವಿದ ಪತ್ರಿಕೆಗಳ ಸಂಪಾದಕರು ಹಾಗೂ ಪತ್ರಕರ್ತರು ಬೆಳ್ಳಗಟ್ಟೆ ಕೃಷ್ಣಪ್ಪರ ಅಗಲಿಕೆಗೆ ಸಂತಾಪ ವ್ಯಕ್ತಪಡಸಿದ್ದಾರೆ.
*ಅಂತ್ಯ ಕ್ರಿಯೆ-* ಮೃತ ಬೆಳ್ಳಗಟ್ಟೆ ಕೃಷ್ಣಪ್ಪರ ಅಂತ್ಯಕ್ರಿಯೆ ಬೆಳ್ಳಗಟ್ಟೆ ಗ್ರಾಮದಲ್ಲಿ,ಸೆ4ರಂದು ಶನಿವಾರ ಮಧ್ಯಾಹ್ನ 1ಗಂಟೆಗೆ ಗ್ರಾಮದ ರುದ್ರ ಭೂಮಿಯಲ್ಲಿ ಜರುಗಲಿದೆ.


Leave a Reply