Belagavi

ಮಹಾನಗರಪಾಲಿಕೆಯಲ್ಲಿ ಅತಂತ್ರ ಸ್ಥಿತಿ ಬಹುತೇಕ ಖಚಿತ | ಪಕ್ಷೇತರ, ಅಲ್ಪಸಂಖ್ಯಾತ ಅಭ್ಯರ್ಥಿಗಳೇ ನಿರ್ಣಾಯಕ ಮುಗಿದ ಮತಸಮರ, ಆರಂಭಯಾಯ್ತು ಗದ್ದುಗೆ ಲೆಕ್ಕಾಚಾರ


ಬೆಳಗಾವಿ: ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಪಕ್ಷಗಳ ಚಿಹ್ನೆಯಡಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಕುತೂಹಲ ಕೆರಳಿದ್ದು, ಚುನಾವಣೆ ರಾಜ್ಯದ ಗಮನ ಸೆಳೆದಿದೆ.
ಪಾಲಿಕೆಯಲ್ಲಿ ಎಂಇಎಸ್ ಪ್ರಾಬಲ್ಯದಿಂದಾಗಿ ಈವರೆಗೆ ಪಕ್ಷದ ಚಿಹ್ನೆಯಡಿ ಕಣಕ್ಕಿಳಿಯಲು ರಾಜಕೀಯ ಪಕ್ಷಗಳು ಪಕ್ಷದ ಚಿಹ್ನೆಯಡಿ ಕಣಕ್ಕಿಳಿಯುವ ಸಾಹಸ ಮಾಡಿರಲಿಲ್ಲ. ಆದರೆ, ಇತ್ತೀಚಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಲವರ್ಧನೆಯಾಗಿ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿ, ಎಂಇಎಸ್ ಬಲ ಕಳೆದುಕೊಂಡಿದ್ದರಿAದ ಬಿಜೆಪಿ ಪಕ್ಷದ ಚಿಹ್ನೆಯಡಿ ಚುನಾವಣೆ ಎದುರಿಸುವ ದಾಳ ಉರುಳಿಸಿತು. ಬಿಜೆಪಿ ನಡೆಯಿಂದ ಅನಿವಾರ್ಯತೆಗೆ ಬಿದ್ದ ಕಾಂಗ್ರೆಸ್, ಜೆಡಿಎಸ್, ಆಫ್, ಸೇರಿ ಇತರ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಕಬ್ಬಿಣದ ಕಡಲೆಯಾದ ಫಲಿತಾಂಶ ವಿಶ್ಲೇಷಣೆ
ವಾರ್ಡ್ ವಿಂಗಡನೆ, ಮೀಸಲಾತಿ ಬದಲಾವಣೆ ಹಾಗೂ ದಿಢೀರ್ ಚುನಾವಣೆ ಘೋಷಣೆಯಿಂದಾಗಿ ಯಾವುದೇ ಪೂರ್ವ ತಯಾರಿಯಿಲ್ಲದೇ ಪಕ್ಷಗಳು, ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅಪರಿಚಿತ ಅಭ್ಯರ್ಥಿಗಳು, ಕೊರೊನಾ ಭೀತಿಯಿಂದಾಗಿ ಮತದಾನ ಪ್ರಮಾಣವೂ ಕ್ಷೀಣಿಸಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಕಠಿಣವಾಗಿಸಿದೆ. ಈ ಬಾರಿ ಫಲಿತಾಂಶ ವಿಶ್ಲೇಷಿಸುವುದು ಪಕ್ಷಗಳಷ್ಟೆ ಅಲ್ಲ ರಾಜಕೀಯ ಪಂಡಿತರಿಗೂ ಕಬ್ಬಿಣದ ಕಡಲೆಯಾಗಿದೆ. ಯಾವ ಪಕ್ಷ ಎಷ್ಟು ಸೀಟು ಪಡೆಯಲಿದೆ ಎಂಬ ಅಂದಾಜು ಹಾಕಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಪ್ರತಿ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಪಕ್ಷಗಳ ರಂಗಪ್ರವೇಶದಿAದ ಎಂಇಎಸ್ ಮೊದಲ ಬಾರಿಗೆ ಇಂಗುತಿAದ ಮಂಗನAತಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ನಾಲ್ಕು ಗುಂಪುಗಳ ಮಧ್ಯೆ ಪೈಪೋಟಿ
೫೮ ಸದಸ್ಯ ಸ್ಥಾನಗಳನ್ನು ಹೊಂದಿರುವ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಲು ೩೦ ಸ್ಥಾನಗಳ ಅವಶ್ಯಕತೆ ಇದೆ. ಮೇಲ್ನೋಟಕ್ಕೆ ನೋಡಿದರೆ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತದ ಹತ್ತಿರ ಸುಳಿಯುವ ವಿಶ್ವಾಸವೂ ಇಲ್ಲ. ಬಿಜೆಪಿ, ಎಂಇಎಸ್, ಕಾಂಗ್ರೆಸ್ ಹಾಗೂ ಪಕ್ಷೇತರರ ಮಧ್ಯೆ ನೇರ ಪೈಪೋಟಿ ಇದೆ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ, ಎಂಇಎಸ್ ಮಧ್ಯೆ ನೇರ ಸ್ಪರ್ಧೆ ಇದ್ದರೆ, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರ ಮಧ್ಯೆ ನೇರ ಪೈಪೋಟಿ ಕಂಡುಬರುತ್ತಿದೆ. ಇಲ್ಲಿ ಪಕ್ಷೇತರರು ಮೇಲುಗೈ ಸಾಧಿಸುವ ಸಾಧ್ಯತೆ ಇದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವ ಸಾಧ್ಯತೆಯಿದೆ. ಮೊದಲ ಸ್ಥಾನದಲ್ಲಿ ಪಕ್ಷೇತರರು ಇರÀಲಿದ್ದು, ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಡುವ ಸಾಧ್ಯತೆ ಇದೆ. ಒಟ್ಟಾರೆ ಪಕ್ಷೇತರರು ೧೦-೧೨, ಎಂಇಎಸ್-೧೦-೧೨, ಬಿಜೆಪಿ ೧೫-೧೮, ಕಾಂಗ್ರೆಸ್ ೬-೮, ಜೆಡಿಎಸ್-೨-೩, ಆಪ್ ೧, ಐಎಂಐ ೨-೩ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.
ಅಲ್ಪಸಂಖ್ಯಾತರ ಸದಸ್ಯರೇ ನಿರ್ಣಾಯಕ:
ಮತದಾನ ಕಡಿಮೆಯಾಗಿರುವುದು ಹಾಗೂ ವಾರ್ಡ ವಿಂಗಡಣೆಯ ಲೆಕ್ಕ ನೋಡಿದರೆ ಹಿಂದಿನ ಬಾರಿಗಿಂತಲೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ. ೧೦-೧೨ ಅಲ್ಪಸಂಖ್ಯಾತ ಅಭ್ಯರ್ಥಿಗಳು ಆಯ್ಕೆಯಾಗುವ ಸಾಧ್ಯತೆ ಇದ್ದು, ಮುಂದೆ ಮೇಯರ್ ಸ್ಥಾನದ ಚುನಾವಣೆಯಲ್ಲಿ ಈ ಸದಸ್ಯರು ನಿರ್ಣಾಯಕ ಸ್ಥಾನ ನಿಭಾಯಿಸುವ ಸಾಧ್ಯತೆ ನಿಚ್ಚಳವಾಗಿದೆ.
ಹೇಗಿದೆ ಗದ್ದುಗೆಯೇರುವ ಲೆಕ್ಕಾಚಾರ:
ಬಿಜೆಪಿ, ಎಂಇಎಸ್, ಕಾಂಗ್ರೆಸ್ ಸೇರಿ ಯಾವುದೇ ಗುಂಪಿಗೂ ಸ್ಪಷ್ಟ ಬಹುಮತ ಸಿಗುವುದು ದೂರದ ಮಾತು. ಅತಂತ್ರ ಫಲಿತಾಂಶ ಬರುವುದು ನಿಚ್ಚಳವಾಗಿದೆ. ಮುಂಚೂಣಿ ಸ್ಥಾನಕ್ಕೆ ಬಿಜೆಪಿ, ಎಂಇಎಸ್ ಮಧ್ಯೆ ಪೈಪೋಟಿ ಇದೆ. ಒಂದು ವೇಳೆ ಲೆಕ್ಕಾಚಾರದಂತೆ ೧೮-೨೦ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡರೆ ಅಧಿಕಾರ, ಹಣಬಲ ಬಳಸಿ ಪಕ್ಷೇತರರನ್ನು ಸೆಳೆದು ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಮತ್ತೊಂದು ಕಡೆ ೧೫-೨೦ ಸ್ಥಾನಗಳಲ್ಲಿ ಎಂಇಎಸ್ ಸದಸ್ಯರು ಆಯ್ಕೆಯಾದರೆ ಮಹಾರಾಷ್ಟçದಲ್ಲಿ ಒಂದುಗೂಡಿದAತೆ ಎಂಇಎಸ್, ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ಸೇರಿ ಸಂಯುಕ್ತ ವೇದಿಕೆ ರಚನೆಗೊಂಡು ಅಧಿಕಾರ ಹಂಚಿಯ ಸೂತ್ರ ಸಿದ್ಧಪಡಿಸಿಕೊಂಡು ಪಾಲಿಕೆಯ ಚುಕ್ಕಾಣಿ ಹಿಡಿಯಬಹುದಾಗಿದೆ. ಇದೇ ಸೂತ್ರ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ.
ಹಿನ್ನೆಲೆಗೆ ಸರಿದ ಭಾಷಾ ರಾಜಕೀಯ:
ಬೆಳಗಾವಿ ಮಹಾನಗರ ಪಾಲಿಕೆ ಎಂದರೆ ಥಟ್ಟನೆ ನೆನಪಿಗೆ ಬರುವುದು ಕನ್ನಡ, ಮರಾಠಿ ಭಾಷಾ ವೈಷಮ್ಯ, ಗಲಾಟೆ, ಪ್ರತಿಭಟನೆಗಳು. ಅದರಲ್ಲೂ ಚುನಾವಣೆ ಬಂತೆAದೆರೆ ಭಾಷಾ ವಿವಾದ ಕೆದಕಿ ಮರಾಠಿಗರನ್ನು ಎತ್ತಿಕಟ್ಟುವ ಖಯಾಲಿ ಬೆಳೆಸಿಕೊಂಡಿದ್ದರು. ಸಣ್ಣ ವಿಷಯಕ್ಕೂ ಭಾಷಾ ವಿಷಯ ಬೆರೆಸಿ ಕನ್ನಡಪರ ಸಂಘಟನೆಗಳನ್ನು ಪ್ರಚೋದಿಸುವುದು, ಕನ್ನಡಪರ ಸಂಘಟನೆಗಳು ರಸ್ತೆಗಿಳಿಯುವುದು, ಸಣ್ಣ ವಿಷಯವೂ ರಾಜ್ಯಮಟ್ಟದಲ್ಲಿ ಸದ್ದು ಮಾಡಿ ಬೆಂಗಳೂರಿನ ಕನ್ನಡ ಹೋರಾಟಗಾರರು ಬೆಳಗಾವಿಗೆ ಬರುವುದು, ಇತ್ತ ಮಹಾರಾಷ್ಟç ನಾಯಕರು ಬೆಳಗಾವಿಗೆ ಬರಲು ಪರಯತ್ನಿಸುವ ಮೂಲಕ ನಗರದ ಶಾಂತಿಗೆ ಭಂಗ ತಂದು ಅನ್ಯೋನ್ಯವಾಗಿದ್ದ ಕನ್ನಡ-ಮರಾಠಿಗರನ್ನು ಪ್ರಚೋದಿಸಿ ಬೇಳೆ ಬೇಯಿಸಿಕೊಳ್ಳುವುದು ಎಂಇಎಸ್ ಖಯಾಲಿ ಮಾಡಿಕೊಂಡಿತ್ತು.
ಆದರೆ, ಯಾವಾಗ ಮರಾಠಿ ಭಾಷಿಕರಿಗೆ ಎಂಇಎಸ್ ನಾಟಕ ಅರಿವಾಗತೊಡಗಿ ಭಾಷಾ ವೈಷಮ್ಯದಿಂದ ಹೊರಬಂದು, ಹಿಂದುತ್ವದತ್ತ ಒಲುವು ಬೆಳೆಸಿಕೊಂಡು ಬಿಜೆಪಿಯತ್ತ ವಾಲಿತೊಡಗಿದಾಗ ಎಂಇಎಸ್ ಬುಡ ಅಲ್ಲಾಡತೊಡಗಿತು. ಐದು ಶಾಸಕರಿಂದ ಶೂನ್ಯಕ್ಕೆ ಇಳಿದಿರುವ ಎಂಇಎಸ್‌ಗೆ ಈಗ ಅಸ್ತಿತ್ವ ಉಳಿಸಿಕೊಳ್ಳಲು ಪಾಲಿಕೆಯೊಂದೇ ಉಳಿದಿರುವ ಏಕೈಕ ಮಾರ್ಗ. ಇದೂ ಅದರ ಕೈಬಿಟ್ಟರೆ ಶಾಶ್ವತವಾಗಿ ಮೂಲೆಗುಂಪಾಗುವ ಭೀತಿ ಎಂಇಎಸ್ ನಾಯಕರನ್ನು ಕಾಡುತ್ತಿದೆ. ಹಾಗಾಗಿ ಹೇಗಾದರೂ ಮಾಡಿ ಪಾಲಿಕೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಮುಸ್ಲಿಂ ಸದಸ್ಯರ ಮೊರೆ ಹೋಗುವ ತೀರ್ಮಾನಕ್ಕೆ ಬಂದಿದೆ.
ಒಟ್ಟಿನಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಲಿದೆ ಎಂಬುದು ಬಹುತೇಕರಿಗೆ ಖಚಿತವಾಗಿದ್ದು, ಪಾಲಿಕೆ ಗದ್ದುಗೆ ಹಿಡಿಯಲು ಲೆಕ್ಕಾಚಾರಗಳು ಆರಂಭಗೊAಡಿವೆ.


Leave a Reply