Belagavi

ಶಾಸಕರ ಮೇಲೆ ಹೂಮಳೆಗರೆದ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್


ಬೆಳಗಾವಿ: ಕಿತ್ತೂರು ಶಾಸಕರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಶಾಸಕರ ಮೇಲೆ ಹೂವಿನ ಮಳೆಗರೆದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಶುಕ್ರವಾರ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಶಾಸಕರ ನಿವಾಸಕ್ಕೆ ತೆರಳಿದ್ದ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ ಐ ಶೀಗಿಹಳ್ಳಿ, ಎಸ್.ಐ. ವಿಶ್ವನಾಥ ಮಲ್ಲಣ್ಣವರ ಸೇರಿದಂತೆ ಪೊಲೀಸ್ ಸಿಬ್ಬಂದಿ ಶಾಸಕರು ಹಾಗೂ ಅವರ ಪತ್ನಿಯನ್ನು ರಾಜ-ರಾಣಿಯಂತೆ ಕೂರಿಸಿ ಇಬ್ಬರ ಮೇಲೆ ಹೂವಿನ ಮಳೆಗರೆದಿದ್ದರು.
ಈ ಕುರಿತ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದ್ದು, ಅಮಾನತು ಶಿಕ್ಷೆಯ ತೂಗುಗತ್ತಿ ಈ ಅಧಿಕಾರ ಮೇಲೆ ನೇತಾಡುತ್ತಿದೆ.


Leave a Reply