Koppal

ರಾಜ್ಯ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದ ಕುಷ್ಟಗಿಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ


ಕುಷ್ಟಗಿ:  ತಾಲೂಕಿನ ಹನುಮಸಾಗರ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಸಹಶಿಕ್ಷಕರಾಗಿರುವ ಶ್ರೀ ಕಿಶನ್ ರಾವ್ ಕುಲಕರ್ಣಿ ಅವರು ಪ್ರಸ್ತುತ ಸಾಲಿನ “ರಾಜ್ಯ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿರುವ ಸಂತೋಷದ ವಿಷಯವಾಗಿದೆ.

ಗ್ರಾಮೀಣ ಪ್ರದೇಶದ ವರಾಗಿ ಗ್ರಾಮೀಣ ಭಾಗದಲ್ಲಿ ಕಳೆದ 25 ವರ್ಷಗಳಿಂದ ವೈವಿಧ್ಯಮಯವಾದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೋಧನೆಯ ಜೊತೆಗೆ ಲೇಖಕರಾಗಿ ಈ ಭಾಗದ ಸಾಧಕರನ್ನು ಮತ್ತು ಸಾಧನೆಯನ್ನು ಪತ್ರಿಕೆಯ ಮೂಲಕ ಪರಿಚಯಿಸಿ ಹಲವಾರು ಕೃತಿಗಳನ್ನು ಪ್ರಕಟಿಸಿರುತ್ತಾರೆ.

“ಕೊಪ್ಪಳ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ” ಪ್ರೌಢಶಾಲಾ ವಿಭಾಗದಿಂದ ಹನುಮಸಾಗರ ಬಾಲಕಿಯರ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕರಾದ ಶ್ರೀ ಹಬೀಬ್ ಪಾಷಾ ಮತ್ತು ಪ್ರಾಥಮಿಕ ಶಾಲಾ ವಿಭಾಗದಿಂದ ಮಿಯಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಸದಾಶಿವಯ್ಯ ಶಿರೂರು” ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿರುವ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಪರಿಶ್ರಮ ಅಪಾರವಾದದ್ದು, ವೃತ್ತಿಜೀವನದಲ್ಲಿ ಮಕ್ಕಳೊಂದಿಗೆ ಬೆರೆತು, ಬೋಧಿಸಿದ, ಬೋಧನೆಯ ತೃಪ್ತಿ ಅನುಭವಿಸಿದವರಿಗೆ ಮಾತ್ರ ಗೊತ್ತು.

ಹಾಗಾಗಿ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಮುಂದಿನ ಪೀಳಿಗೆಯನ್ನು ಅಕ್ಷರಸ್ಥರನ್ನಾಗಿ ಮಾಡಿ ಉತ್ತಮ ಸಮಾಜ ನಿರ್ಮಿಸುವ ಸದಾ ಶ್ರಮಿಸುತ್ತಿರುವ ಗುರುಪರಂಪರೆಗೆ ಅಭಿನಂದನೆಗಳು. ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ತಾಲೂಕಿನ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆ ಶುಭಾಶಯಗಳನ್ನು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ರವರು ಕೋರಿದ್ದಾರೆ.

ಆರ್ ಶರಣಪ್ಪಗುಮಗೇರಾ
ಕೊಪ್ಪಳ


Leave a Reply