Koppal

ಶಿಕ್ಷಕರ ದಿನಾಚರಣೆ ಯ ಶುಭಾಶಯ ಕೋರಿದ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಚ್ ಪಾಟೀಲ್


ಕೊಪ್ಪಳ:ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:

ತ್ರಿಮೂರ್ತಿಗಳಾದ ಸ್ವರೂಪಿಯಾಗಿ ಶಿಕ್ಷಕ, ಎಂದರೆ ಶಿವನ ಸ್ವರೂಪಿಯಾದ ಕ್ಷಮಾ ಗುಣವುಳ್ಳ ಕರ್ಮಯೋಗಿಯೇ ಶಿಕ್ಷಕ

ಒಂದು ದೀಪವು ತಾನು ಉರಿದು ಇತರರಿಗೆ ಬೆಳಕಾಗಿ ಇನ್ನೊಂದು ಮತ್ತೊಂದು ನೂರಾರು ದೀಪಗಳನ್ನು ಹೊತ್ತಿಸುವ ಅಗಾಧ ಜ್ಞಾನ ಶಕ್ತಿಯೇ ಶಿಕ್ಷಕ ನಾಗಿರುತ್ತಾನೆ.

ಶಿಕ್ಷಕರು ಸದಾ ವಿದ್ಯಾರ್ಥಿ ಯಾಗಿರುತ್ತಾರೆ ಎನ್ನುವುದು ಮಹಾನ್ ಕವಿ ವಾರ್ಶನಿಕ ರೂ ಆಗಿರುವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರು ಹೇಳಿರುವ ಅನುಭವದ ಮಾತು.

ಮಹಾತ್ಮ ಗಾಂಧೀಜಿ ಅವರು ಹೇಳುವಂತೆ ದೇಶದ ಭವಿಷ್ಯವು ನಮ್ಮ ಶಾಲೆಗಳ ತರಗತಿಯಲ್ಲಿ ರೂಪಗೊಳ್ಳುತ್ತದೆ .ಶಾಲೆಗಳು ಆಯಾ ಗ್ರಾಮಗಳ ದೇವಸ್ಥಾನಗಳು, ಮಕ್ಕಳೇ ದೇವರು, ಶಿಕ್ಷಕರಿಗೆ ಪ್ರತಿನಿತ್ಯ ಪೂಜಿಸುವ ಪೂಜಾರಿಯವರು ಎಂದಿದ್ದಾರೆ .ಶಾಲೆ ಮುಂದೆ ” ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂದು ಬರೆಯಲಾಗುತ್ತಿದೆ ಎಂದಿದ್ದಾರೆ.

ಹೀಗೆ ಹಲವಾರು ರೀತಿಯಲ್ಲಿ ಶಿಕ್ಷಕರು ಎಲ್ಲರಿಗೂ ಮಾರ್ಗದರ್ಶಕರು ಮತ್ತು ಗುರುಗಳು ಆಗಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡುವ ಪ್ರಯತ್ನ ಗುರುವೃಂದ ಮಾಡಿದೆ.

ಹಾಗಾಗಿ ಇಂದಿನ ದಿನದಂದು ಶಿಕ್ಷಕರ ದಿನಾಚರಣೆ ಶುಭಾಶಯಗಳನ್ನು ಕೋರುವುದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ದೊಡ್ಡನಗೌಡ ಎಚ್ ಪಾಟೀಲ್ ಶುಭಾಶಯಗಳನ್ನು ಕೋರಿದ್ದಾರೆ.

ಆರ್ ಶರಣಪ್ಪಗುಮಗೇರಾ
ಕೊಪ್ಪಳ


Leave a Reply