Belagavi

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕೇಸರಿ ಕಮಾಲ್


ಬೆಳಗಾವಿ: ಇದೇ ಪ್ರಥಮ ಬಾರಿಗೆ ಪಕ್ಷಗಳ ಚಿಹ್ನೆಯಡಿ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿರುವ ಬಿಜೆಪಿ ಭರ್ಜರಿ ಜಯಗಳಿಸಿದ್ದು, ಸ್ಪಷ್ಟ ಬಹುಮತ ಪಡೆದುಕೊಂಡಿದೆ.

ಮಹಾನಗರ ಪಾಲಿಕೆ ರಚನೆ ಆದಾಗಿನಿಂದಲೂ ಕಿಂಗ್ ಆಗಿ ಮೆರೆದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಮಕಾಡೆ ಮಲಗಿದ್ದು, ಕೇವಲ ನಾಲ್ಕು ಕ್ಷೇತ್ರಕ್ಕೆ‌ ಸೀಮಿತಗೊಂಡಿದೆ. ಕಾಂಗ್ರೆಸ್ ಸಹ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದು, ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎಂಐಎಂ ಮೊದಲ ಬಾರಿಗೆ ಖಾತೆ ತೆರೆದಿದ್ದು, ಪಕ್ಷೇತರ ಸದಸ್ಯರೇ ನಿರ್ಣಾಯಕರಾಗಲಿದ್ದಾರೆ ಎಂಬ ಲೆಕ್ಕಾಚಾರ ಉಲ್ಟಾ ಆಗಿ ಕೇವಲ 10 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಬಿಜೆಪಿಯ ದಿಗ್ವಿಜಯದ ಎದುರು ಎಂಇಎಸ್, ಕಾಂಗ್ರೆಸ್ , ಪಕ್ಷೇತರ ಅಭ್ಯರ್ಥಿಗಳು ತರೆಗಲೆಗಳಂತೆ ಉದುರಿ ಹೋಗಿದ್ದಾರೆ.
ಅಭಯ ಪಾಟೀಲ ಪ್ರತಿನಿಧಿಸುವ ದಕ್ಷಿಣ ಮತಕ್ಷೇತ್ರದ ವಾರ್ಡನಲ್ಲಿ
ಬಿಜೆಪಿ ಅಲೆಗೆ ಯಾವುದೇ ಪಕ್ಷಗಳು ನಿಲ್ಲಲು ಸಾಧ್ಯವಾಗಿಲ್ಲ.
ಬಿಜೆಪಿ ಅಧಿಕಾರ ಉರುಳಿಸಲು ಎಂ+ಎಂ (ಮರಾಠಾ+ಮುಸ್ಲಿಂ) ಸೂತ್ರ ಎಂಇಎಸ್ ಗೆ ತಿರುಗುಬಾಣವಾಗಿರುವುದು ಬಿಜೆಪಿ ಗೆಲುವಿಗೆ ನೆರವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಬಿಜೆಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ತನ್ನೆಲ್ಲ ಶಕ್ತಿ ಪಣಕ್ಕಿಟ್ಟಿತ್ತು.
ಪಕ್ಷದ ರಾಜ್ಯಾಧ್ಯಕ್ಷರಿಂದ ಹಿಡಿದು, ಆರೇಳು ಸಚಿವರು, ಶಾಸಕರು, ಪದಾಧಿಕಾರಿಗಳು ವಾರ್ಡಗಳಿಗೆ ದಾಂಗುಡಿ ಇಟ್ಟು ಪ್ರಚಾರದಲ್ಲಿ ತೊಡಗಿಸಿಕೊಂಡರು. ನಗರದ ಇಬ್ಬರೂ ಶಾಸಕರು ಹಗಲಿರುಳು ಕೆಲಸ ಮಾಡಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು, ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಒಟ್ಟಾರೆ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿ ಬಿಜೆಪಿ ಮೊದಲ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.

ಕಾರ್ಯಕರ್ತರ ವಿಜಯೋತ್ಸವ ಲಾಠಿ ಚಾರ್ಜ್:

ಮತ ಎಣಿಕೆ ಕೇಂದ್ರದ ಹೊರಗೆ 144 ಕಲಂ ಜಾರಿಯಾಗಿದ್ದರೂಕ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಗುಲಾಲು ಎರಚಿ, ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು. ಪೊಲೀಸರು ನೀಡಿದ ಎಚ್ಚರಿಕೆಗೂ ಕೇರ್ ಮಾಡದಿದ್ದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.

ಪಕ್ಷಗಳ ಬಲಾಬಲ

ಬಿಜೆಪಿ 36
ಕಾಂಗ್ರೆಸ್ 9
ಎಂಇಎಸ್ 2
ಎಂಐಎಂ 1
ಪಕ್ಷೇತರ 10

ವಾರ್ಡವಾರು ವಿಜೇತ ಅಭ್ಯರ್ಥಿಗಳು

ವಾರ್ಡ್ ನಂ. 1 ಪಕ್ಷೇತರ ಆಖಿರಾ ಮುಲ್ಲಾ
ವಾರ್ಡ್ ನಂ. 2 ಕಾಂಗ್ರೆಸ್ ಮುಜಮಿಲ್ ಡೋಣಿ
ವಾರ್ಡ್ ನಂ. 3 ಕಾಂಗ್ರೆಸ್ ಜ್ಯೋತಿ ಕಡೋಲ್ಕರ್
ವಾರ್ಡ್ ನಂ. 4 ಬಿಜೆಪಿ ಜಯತೀರ್ಥ ಸವದತ್ತಿ
ವಾರ್ಡ್ ನಂ. 5 ಕಾಂಗ್ರೆಸ್ ಅತ್ರಾಜ್ ಮುಲ್ಲಾ
ವಾರ್ಡ್ ನಂ. 6 ಬಿಜೆಪಿ ಸಂತೋಷ ಪಡ್ನೇಕರ
ವಾರ್ಡ್ ನಂ. 7 ಪಕ್ಷೇತರ ಸಂತೋಷ ಪಾಟೀಲ
ವಾರ್ಡ್ ನಂ. 8 ಕಾಂಗ್ರೆಸ್
ಮಹ್ಮದ ಸಂಗೊಳ್ಳಿ
ವಾರ್ಡ್ ನಂ. 9 ಪಕ್ಷೇತರ ಪೂಜಾ ಪಾಟೀಲ
ವಾರ್ಡ್ ನಂ. 10 ಎಂಇಎಸ್ ವೈಶಾಲಿ ಭಾತಖಾಂಡೆ
ವಾರ್ಡ್ ನಂ. 11 ಕಾಂಗ್ರೆಸ್ ಶಮಿಉಲ್ಲಾ ಮಾಡಿವಾಲೆ
ವಾರ್ಡ್ ನಂ. 12 ಪಕ್ಷೇತರ ಮೋದಿನ್ ಸಾಬ ಮತವಾಲೆ
ವಾರ್ಡ್ ನಂ. 13 ಕಾಂಗ್ರೆಸ್ ರೇಷ್ಮಾ ಭೈರಕದಾರ
ವಾರ್ಡ್ ನಂ. 14 ಎಂಇಎಸ್ ಶಿವಾಜಿ ಮಂಡೋಳಕರ
ವಾರ್ಡ್ ನಂ. 15 ಬಿಜೆಪಿ ನೇತ್ರಾವತಿ ಭಾಗವತ
ವಾರ್ಡ್ ನಂ. 16 ರಾಜು ಭಾತಖಾಂಡೆ
ವಾರ್ಡ್ ನಂ. 17 ಬಿಜೆಪಿ ಸವಿತಾ ಕಾಂಬಳೆ
ವಾರ್ಡ್ ನಂ. 18 ಎಂಐಎಂ ಶಾಹೀದಖಾನ್ ಪಠಾಣ
ವಾರ್ಡ್ ನಂ. 19 ಪಕ್ಷೇತರ ರಿಯಾಜ್ ಕಿಲ್ಲೇದಾರ
ವಾರ್ಡ್ ನಂ. 20 ಕಾಂಗ್ರೆಸ್ ಶಕೀಲಾ ಮುಲ್ಲಾ
ವಾರ್ಡ್ ನಂ. 21 ಬಿಜೆಪಿ ರೀತಿ ಕಾಮಕರ
ವಾರ್ಡ್ ನಂ. 22 ಬಿಜೆಪಿ ರವಿ ಸಾಂಬ್ರೆಕರ
ವಾರ್ಡ್ ನಂ. 23 ಬಿಜೆಪಿ ಜಯಂತ ಜಾಧವ
ವಾರ್ಡ್ ನಂ. 24 ಬಿಜೆಪಿ ಗಿರೀಶ ಧೋಂಗಡಿ
ವಾರ್ಡ್ ನಂ. 25 ಪಕ್ಷೇತರ ಜರೀನಾ ಫತ್ಹೆಖಾನ್
ವಾರ್ಡ್ ನಂ. 26 ಬಿಜೆಪಿ ರೇಖಾ ಮೋಹಣ ಹೂಗಾರ
ವಾರ್ಡ್ ನಂ. 27 ಎಂಇಎಸ್ ರವಿ ಸಾಳುಂಕೆ
ವಾರ್ಡ್ ನಂ. 28 ಬಿಜೆಪಿ ರವಿ ದೋತ್ರೆ
ವಾರ್ಡ್ ನಂ. 29 ಬಿಜೆಪಿ ನಿತಿನ್ ಜಾಧವ
ವಾರ್ಡ್ ನಂ. 30 ಬಿಜೆಪಿ ಬ್ರಹ್ಮಾನಂದ ಮಿರಜಕರ
ವಾರ್ಡ್ ನಂ. 31 ಬಿಜೆಪಿ ಮೀಣಾ ವಿಹಾಪುರೆ
ವಾರ್ಡ್ ನಂ. 32 ಬಿಜೆಪಿ ಸಂದೀಪ ಜಿರಗ್ಯಾಳ
ವಾರ್ಡ್ ನಂ. 33 ಬಿಜೆಪಿ ರೇಷ್ಮಾ ಪಾಟೀಲ
ವಾರ್ಡ್ ನಂ. 34 ಬಿಜೆಪಿ ಶ್ರೇಯಸ್ ನಾಕಾಡಿ
ವಾರ್ಡ್ ನಂ. 35 ಬಿಜೆಪಿ ಲಕ್ಷ್ಮೀ ರಾಠೋಡ
ವಾರ್ಡ್ ನಂ. 36 ಬಿಜೆಪಿ ರಾಜಶೇಖರ ಡೋಣಿ
ವಾರ್ಡ್ ನಂ. 37 ಕಾಂಗ್ರೆಸ್ ಶ್ಯಾಮ್ ಮೊಬಿಲ್ ಪಠಾಣ
ವಾರ್ಡ್ ನಂ. 38 ಪಕ್ಷೇತರ ಅಜೀಂ ಪಟವೇಕರ
ವಾರ್ಡ್ ನಂ. 39 ಬಿಜೆಪಿ ಉದಯಕುಮಾರ ಹುಪರಿ
ವಾರ್ಡ್ ನಂ. 40 ಬಿಜೆಪಿ ರೇಷ್ಮಾ ಕಾಮಕರ
ವಾರ್ಡ್ ನಂ. 41 ಬಿಜೆಪಿ ಮಂಗೇಶ ಪವಾರ
ವಾರ್ಡ್ ನಂ. 42 ಬಿಜೆಪಿ ಅಭಿಜಿತ ಜಾವಳಕರ
ವಾರ್ಡ್ ನಂ. 43 ಬಿಜೆಪಿ
ವಾಣಿ ವಿಲಾಸ ಜೋಷಿ
ವಾರ್ಡ್ ನಂ. 44 ಬಿಜೆಪಿ ಆನಂದ ಚವ್ಹಾಣ್
ವಾರ್ಡ್ ನಂ. 45 ಬಿಜೆಪಿ ರೂಪಾ ಸಂತೋಷ ಚಿಕ್ಕಲದಿನ್ನಿ
ವಾರ್ಡ್ ನಂ. 46 ಬಿಜೆಪಿ ಹಣಮಂತ ಕೊಂಗಾಳಿ
ವಾರ್ಡ್ ನಂ. 47 ಪಕ್ಷೇತರ
ಅಸ್ಮಿತಾ ಭೈರಗೌಡ ಪಾಟೀಲ
ವಾರ್ಡ್ ನಂ. 48 ಎಂಇಎಸ್ ಬಸವರಾಜ ಮೋದಗೇಕರ
,ವಾರ್ಡ್ ನಂ. 49 ಬಿಜೆಪಿ
ದೀಪಾಲಿ ಟೋಪಗಿ
ವಾರ್ಡ್ ನಂ. 50 ಬಿಜೆಪಿ ಸಾರಿಕಾ ಸಚಿನ್ ಪಾಟೀಲ
ವಾರ್ಡ್ ನಂ. 51 ಬಿಜೆಪಿ ಶ್ರೀಶೈಲ್ ಕಾಂಬಳೆ
ವಾರ್ಡ್ ನಂ.52 ಕಾಂಗ್ರೆಸ್ ಖುರ್ಷಿದಾ ಮುಲ್ಲಾ
ವಾರ್ಡ್ ನಂ. 53 ಬಿಜೆಪಿ ರಮೇಶ ಮಹಿಲ್ಯಾಗೋಳ
ವಾರ್ಡ್ ನಂ. 54 ಬಿಜೆಪಿ ಮಾಧವಿ ರಾಗೋಚೆ
ವಾರ್ಡ್ ನಂ.55 ಬಿಜೆಪಿ ಸವಿತಾ ಮುರುಘೇಂದ್ರಗೌಡ ಪಾಟೀಲ
ವಾರ್ಡ್ ನಂ. 56 ಕಾಂಗ್ರೆಸ್ ಲಕ್ಷ್ಮೀ ಲೋಕರಿ
ವಾರ್ಡ ನಂ. 57 ಬಿಜೆಪಿ ಶೋಭಾ ಸೋಮನಾಚೆ
ವಾರ್ಡ್ ನಂ.58 ಬಿಜೆಪಿ ಪ್ರೀಯಾ ಸಾತಗೌಡ


Leave a Reply