Belagavi

ಸರಕಾರದ ಅಭಿವೃದ್ಧಿ ಗಳೇ ಪಾಲಿಕೆ ಚುನಾವಣೆ ಗೆಲುವಿಗೆ ಕಾರಣ: ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ


ಬೆಳಗಾವಿ:ಈ ಬಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಮೊದಲೇ ಹೇಳಿದ್ದೆ.  ನಾನು ಪ್ರಚಾರ ಮಾಡಿದ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ತಿಳಿಸಿದ್ದಾರೆ.
ಬಿಜೆಪಿಗೆ ಮೂವತ್ತಾರು ಸೀಟುಗಳು ಬಂದಿರುವುದು ಸಂತಸದ ವಿಷಯ. ಕಾಂಗ್ರೆಸ್ ನೊಂದಿಗೆ ಎಂ ಇ ಎಸ್ ಮಾಡಿಕೊಂಡ ಒಳ ಒಪ್ಪಂದ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದ್ದು ಎಂಇಎಸ್ ಗೆ ಮುಳುವಾಗಿದ್ದು ಜಗ ಜ್ಜಾಹೀರವಾಗಿದೆ. ಮತದಾರರು ಎಂಇಎಸ್ ನ  ಮುಖವಾಡ ಕಳಚಿ; ಕಾಂಗ್ರೆಸನ್ನು ಮಣ್ಣುಮುಕ್ಕಿಸಿ   ಬಿಜೆಪಿ ಜೈ ಎಂದಿದ್ದಾರೆ.
ಹಿಂದೆ ನಡೆದ ಕೋರ್ ಸಮಿತಿ ಸಭೆಯಲ್ಲಿ ನಾನು ಹೈದ್ರಾಬಾದ್ ,ಮಹಾರಾಷ್ಟ್ರ ಪಾಲಿಕೆಯ ಉದಾಹರಣೆಗಳನ್ನು ತೆಗೆದುಕೊಂಡು ಪಕ್ಷದ ಚಿಹ್ನೆಯಡಿ ಪಾಲಿಕೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೆ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಪಕ್ಷದ ತತ್ವ ನಿಷ್ಠೆ ಕೇಂದ್ರದಲ್ಲಿ ಮೋದಿಯವರ ಪಾರದರ್ಶಕ ಆಡಳಿತ ಮತ್ತು ಮಾಜಿ ಮುಖ್ಯಮಂತ್ರಿ  ಬಿ.ಎಸ್.  ಯಡಿಯೂರಪ್ಪನವರ ಸರ್ವರಿಗೆ ಸಮಬಾಳು ಯೋಜನೆಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉತ್ತಮ ಆಡಳಿತಗಳೇ ಬಿಜೆಪಿ ಬಹುಮತ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಭಾರತೀಯ ಜನತಾ ಪಾರ್ಟಿಯ ಶಿಸ್ತಿನ ನಾಯಕತ್ವಕ್ಕೆ ಜನ ಮೆಚ್ಚುಗೆ ನೀಡಿರುವುದರಿಂದಲೇ  ಈ ಗೆಲುವು ಸಾಧ್ಯವಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶಿರ್ವದಿಸಿದ ಮತದಾರರಿಗೂ ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಡಿದ ಬಿಜೆಪಿ ಕಾರ್ಯಕರ್ತರಿಗೂ, ಶ್ರಮಿಸಿದ  ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲು ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply