Belagavi

ಬೆಳಗಾವಿ ನಗರದ ಜನತೆಗೆ ದನ್ಯವಾದ : ಕಡಾಡಿ


ಮೂಡಲಗಿ: ಮೊದಲ ಬಾರಿಗೆ ಬಿಜೆಪಿ ತನ್ನ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದಾಗ ಬೆಳಗಾವಿ ಮಹಾನಗರದ ಜನತೆ ಅಭೂತಪೂರ್ವವಾದ ಬೆಂಬಲವನ್ನು ನೀಡಿದಕ್ಕಾಗಿ ಮಹಾನಗರದ ಜನತೆಗೆೆ ಹೃದಯ ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರದಂದು ಪತ್ರಿಕಾ ಹೇಳಿಕೆ ನೀಡಿದ ಈರಣ್ಣ ಕಡಾಡಿ ಅವರು ಕಳೆದ ಕೆಲ ದಶಕಗಳಿಂದ ಬರಿ ಜಾತಿ, ಮತ, ಭಾಷೆ ಆಧಾರದ ಮೇಲೆ ಚುನಾವಣೆ ಮಾಡುತ್ತಾ ಜನರ ದೈನಿಕ ಜೀವನಕ್ಕೆ ಬಹಳಷ್ಟು ತೊಂದರೆಗಳಾಗಿದ್ದ, ಅದಕ್ಕೆ ಮತದಾರರು ರೋಷಿ ಹೊಗಿದ್ದರು. ಅಭಿವೃದ್ಧಿ ಪರವಾದಂತಹ ಬಿಜೆಪಿಯ ವಿಚಾರಗಳಿಗೆ ಇವತ್ತು ಮತದಾರರು ಬಲ ತುಂಬಿದ್ದಾರೆ.
ಗೆದ್ದಿರುವAತಹ ಮಹಾನಗರ ಪಾಲಿಕೆ ಸದಸ್ಯರು ಬಹಳ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಇಲ್ಲಿ ತನಕ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಕೂಡಾ ಮಹಾನಗರ ಪಾಲಿಕೆ ನಮ್ಮ ಕೈಯಲ್ಲಿ ಇಲ್ಲದ ಕಾರಣದಿಂದ ಎಲ್ಲೋ ಕೆಲವು ಕಡೆ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಎನ್ನುವ ಕೊರಗು ಬಹಳಷ್ಟು ಜನರಿಗೆ ಇದೆ ಅದನ್ನು ನಿವಾರಣೆ ಮಾಡುವ ದೃಷ್ಠಿಯಲ್ಲಿ ಹೆಜ್ಜೆ ಇಡಬೇಕು ಎಂದರು.


Leave a Reply