Belagavi

ಎಂಇಎಸ್‌ಗೆ ಮುಳುವಾದ ಎಂ+ಎo ಸೂತ್ರ, ಬಿಜೆಪಿ ಒಗ್ಗಟ್ಟಿಗೆ ಒಲಿದ ಜಯ


ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿAದಲೂ ಕಿಂಗ್ ಆಗಿ ಮೆರೆದಿದ್ದ ಎಂಇಎಸ್‌ಗೆ ಇದೇ ಮೊದಲ ಬಾರಿಗೆ ತೀವ್ರ ಮುಖಭಂಗ ಅನುಭವಿಸಿದೆ. ಈ ಸೋಲಿಗೆ ಅದರ ಎಂ+ಎo ಸೂತ್ರ ಕಾರಣ ಎನ್ನಲಾಗುತ್ತಿದ್ದು, ಅದರೆ, ಚುನಾವಣೆಗೆ ಮುಂಚೆಯೇ ಸೋಲಿನ ಭೀತಿಯಿಂದ ಎಂಇಎಸ್ ಮುಖಂಡರು ಅಸ್ತಿತ್ವ ಉಳಿಸಿಕೊಳ್ಳಲು ಮುಸ್ಲಿಂ ಮತದಾರರ ಮೊರೆ ಹೋಗಿದ್ದು ತಿರುಗುಬಾಣವಾಯಿತು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಕಾಲ ಮೇಲೆ ಕಲ್ಲು ಚೆಲ್ಲಿಕೊಂಡ ಎಂಇಎಸ್: ಮೊದಲಿನಿಂದಲೂ ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಭಾಷಾ ವಿವಾದ ಕೆಣಕಿ ಮರಾಠಿಗರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದ್ದ ಎಂಇಎಸ್ ಅಸ್ತçವನ್ನು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪಕ್ಷದ ಚಿಹ್ನೆಯಡಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಮುಳೂವಾಯಿತು. ಒಂದು ವೇಳೆ ಪಕ್ಷದ ಚಿಹ್ನೆಯಿಲ್ಲದೇ ಸ್ವತಂತ್ರ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದರೆ, ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಕಾರ್ಯಕರ್ತರು ಮರಾಠಿ ವಿರೋಧಿ ಹಣೆಪಟ್ಟಿ ಕಟ್ಟಿಕೊಳ್ಳಬೇಕಾದೀತೆಂದು ಹೆದರಿ ಅನಿವಾರ್ಯವಾಗಿ ಎಂಇಎಸ್ ಬೆಂಬಲಿಸುತ್ತಿದ್ದರು. ಆದರೆ, ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಅನಿವಾರ್ಯವಾಗಿ ಅಧಿಕೃತ ಅಭ್ಯರ್ಥಿಗಳ ಪರ ನಿಲ್ಲಬೇಕಾಯಿತು. ಇದು ಬಿಜೆಪಿ ಗೆಲುವಿಗೆ ಪ್ಲಸ್ ಫಾಯಿಂಟ್ ಆಯಿತು. ಅಲ್ಲದೆ ಎಂಇಎಸ್‌ನ ಎಂ+ಎA ಸೂತ್ರವನ್ನು ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಪ್ರಚಾರದ ವೇಳೆ ಹೆಚ್ಚಾಗಿ ಪ್ರಸ್ತಾಪಿಸಿ ಮತದಾರರಲ್ಲಿ ಹಿಂದುತ್ವದ ಕಿಚ್ಚು ಹೊತ್ತಿಸಿದ್ದರಿಂದ ಹಿಂದುಮತಗಳು ಕ್ರೋಡೀಕರಣಗೊಂಡು ಬಿಜೆಪಿ ಗೆಲುವಿಗೆ ರಹದಾರಿಯಾಯಿತು.
ಬಿಜೆಪಿ ಒಗ್ಗಟ್ಟಿನ ಶ್ರಮಕ್ಕೆ ಸಿಕ್ಕ ಪ್ರತಿಫಲ: ಒಂದು ರೀತಿಯಿಂದ ವಿಚಾರ ಮಾಡಿದರೆ ಬಿಜೆಪಿ ವರಿಷ್ಠರು ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅದಕ್ಕೆ ತಕ್ಕಂತೆ ರಣತಂತ್ರ ರೂಪಿಸಿದರು. ಪಾಲಿಕೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯ ಶಾಸಕರಿಗೆ ಸಂಪೂರ್ಣ ಸ್ವಾತಂತ್ರö್ಯ ನೀಡಿv, ಗೆಲ್ಲಿಸಿಕೊಂಡು ಬರುವ ಹೆಣೆಯನ್ನೂ ಹೊರಿಸಿತು. ಈ ಜವಾಬ್ದಾರಿಯ ಕಾರಣದಿಂದ ಶಾಸಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಹಗಲಿರುಳು ಶ್ರಮಿಸಿದರು. ಜೊತೆಗೆ ಸ್ವತಃ ಪಕ್ಷದ ರಾಜ್ಯಾಧ್ಯಕ್ಷರು ಸೇರಿ ನಾಲ್ಕೆöÊದು ಸಚಿವರು, ಜಿಲ್ಲೆಯ ಅನೇಕ ಶಾಸಕರು, ಪ್ರಭಾವಿ ಮುಖಂಡರು ಬೆಳಗಾವಿಗೆ ಲಗ್ಗೆಯಿಟ್ಟು ಎಲ್ಲಿಲ್ಲಿ ಯರ‍್ಯಾರಿಗೆ ಎಷ್ಟು ಮತದಾರರ ಸೆಳೆಯಲು ಸಾರ್ಧಯವೋ ಸ್ವತಃ ಮುಖಂಡರು ಅಂತಹ ಮನೆಗಳಿಹೆ ಹೋಗಿ ಮತಗಳನ್ನು ಗಟ್ಟಿಗೊಳಿಸಿದರು. ಅಲ್ಲದೆ ಮಹಾರಾಷ್ಟçದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಬೆಳಗಾವಿಗೆ ಕರೆಸಿ ಮರಾಠಿಗರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
ಮೂರು ಬಣಗಳಾದ ಕಾಂಗ್ರೆಸ್: ಪಾಲಿಕೆಯಲ್ಲಿನ ಹೀನಾಯ ಸೋಲಿಗೆ ಆ ಪಕ್ಷದಲ್ಲಿ ಗುಂಪುಗರಿಕೆಯೇ ಕಾರಣವಾಯಿತು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಿಕಿಹೊಳಿಗೆ ಚುನಾವಣೆ ಜವಾಬ್ದಾರಿ ಹೊರಿಸಿದ್ದರೂ ಇತ್ತ ಫಿರೋಜ್ ಸೇಠ್, ಎ.ಬಿ. ಪಾಟೀಲ ಮತ್ತಿತರು ಟಿಕೆಟ್ ಹಂಚಿಕೆಯಲ್ಲಿ ಮೂಗು ತೂರಿಸಿ ತಮ್ಮ ಬೆಂಬಲಿಗರಿಗೆ ಮಣೆ ಹಾಕಿದ್ದರಿಂದ ಕಾಂಗ್ರೆಸ್ ಒಗ್ಗಟ್ಟು ಮುರಿದು, ಬಣಗಳು ಸೃಷ್ಟಿಯಾದವು. ಬೆಂಬಲಿಗರಿಗೆ ಟಿಕೆಟ್ ಸಿಗದಿದ್ದಾಗ ಬೆಂಬಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಒಳೇಟು ನೀಡಿದರು. ಇದರಿಂದ ಪಕ್ಷದ ಮತಗಳು ಚದುರಿಹೋಗಿ ಬಿಜೆಪಿಗೆ ವರವಾಯಿತು. ಅಲ್ಲದೆ, ಪಕ್ಷದ ವರಿಷ್ಠರೂ ಬಿಜೆಪಿಯಂತೆ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಸ್ಥಳೀಯ ಮುಖಂಡರಿಗೆ ಒಪ್ಪಿಸಿ ಸುಮ್ಮನಾದರು. ಕಾಟಾಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಿದ್ದು ಬಿಟ್ಟರೆ, ಮತಗಳನ್ನು ಸೆಳೆಯಬಲ್ಲ ಸಮುದಾಯಗಳ ಮುಖಂಡರಾರೂ ಬೆಳಗಾವಿಯತ್ತ ಸುಳಿಯಲಿಲ್ಲ. ಇದೂ ಸಹ ಕಾಂಗ್ರೆಸ್ ಪಾಲಿಕೆ ಮೈನಸ್ ಆಯಿತು.
ವಾರ್ಡ್ ವಿಂಗಡಣೆ, ಮೀಸಲಾತಿ ಬದಲಾವಣೆ: ವಾರ್ಡ್ ಪುನರ್ವಿಂಗಡೆ, ಮೀಸಲಾತಿ ಬದಲಾವಣೆ ಜೊತೆಗೆ ದಿಢೀರ್ ಚುನಾವಣೆ ಘೋಷಣೆಯಾಗಿದ್ದರಿಂದ ಬಹುತೇಕ ವಾರ್ಡ್ಗಳಲ್ಲಿ ಹೊಸ ಮುಖಗಳ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಮತದಾರರನ್ನು ತಲುಪಲು ಸಾಧ್ಯವಾಗಲಿಲ್ಲ. ಮೊದಲಿನಿಂದಲೂ ವಾರ್ಡ್ ಮೇಲೆ ಪ್ರಭಾವ ಹೊಂದಿದ್ದ ನಾಯಕರಿಗೆ ಪುನರ್ವಿಂಗಡನೆ, ಮೀಸಲಾತಿ ಬದಲಾಗಿ ತಮ್ಮ ವಾರ್ಡ್ ಬೇರೆ ಮಾತು ಪಕ್ಕದ ವಾರ್ಡ್ನಲ್ಲೂ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಹೀಗಾಗಿಯೇ ಹಲವು ವರ್ಷಗಳಿಂದ ವಾರ್ಡನಲ್ಲಿ ವರ್ಚಸ್ಸು ಹೊಂದಿದ್ದ ಎಂಇಎಸ್‌ನ ಹಲವು ಘಟಾನುಘಟಿ ಮುಖಂಡರು ಸೋಲು ಅನುಭವಿಸಬೇಕಾಯಿತು.
ಪಾಲಿಕೆಯಲ್ಲಿ ಯುವಕರಿಗೆ ಮಣೆ: ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳು ಯುವಕರೆ ಆಗಿದ್ದಾರೆ. ಮತದಾರರು ಯುವಕರಿಗೆ ಮಣೆ ಹಾಕಿದ್ದು, ಮೊದಲಿನಿಂದಲೂ ಪಾಲಿಕೆಯನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಪಾಲಿಕೆಯನ್ನು ಖಜಾನೆಯಾಗಿ ಮಾಡಿಕೊಂಡಿದ್ದ ಅನೇಕ ಹಳೆಯ ಮುಖಗಳಿಗೆ ಮತದಾರರು ತಕ್ಕಪಾಠ ಕಲಿಸಿದ್ದು, ಹೊಸ ಮುಖಗಳಿಗೆ, ಅದರಲ್ಲೂ ಯುವಕರಿಗೆ ಮಣೆ ಹಾಕಿದ್ದಾರೆ. ಒಟ್ಟಾರೆ ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆ ಹಲವು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿ ಪ್ರಪ್ರಥಮ ಬಾರಿಗೆ ಪಾಲಿಕೆಯಲ್ಲಿ ಪಕ್ಷದವೊಂದು ಗದ್ದುಗೆ ಹಿಡಿದಿದೆ.


Leave a Reply