Belagavi

ಅಬ್ಯಾಸದೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸಿ-ಮರ್ದಿ


ಮೂಡಲಗಿ: ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ಕೋವಿಡ್-೧೯ರ ನಿಯಮಗಳನ್ನು ಪಾಲಿಸುತ್ತಾ ಆರೋಗ್ಯ ಮತ್ತು ಅಭ್ಯಾಸಗಳಲ್ಲಿಯೂ ಯÀಶಸ್ವಿಯಾಗಬೇಕೆಂದು ತುಕ್ಕಾನಟ್ಟಿ ಗ್ರಾ.ಪಂ. ಅಧ್ಯಕ್ಷರಾದ ಕುಮಾರ ಮರ್ದಿ ಹೇಳಿದು.
ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ ಮತ್ತು ೮ ನೇ ತರಗತಿಯ ವಿದ್ಯಾರ್ಥಿಗಳನ್ನು ಇಲಾಖೆಯ ನಿಯಮಾವಳಿಯ ಪ್ರಕಾರ ಬರಮಾಡಿಕೊಂಡು ಮಾತನಾಡಿ, ಸರ್ಕಾರ ಹಾಗೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭ ಮಾಡಿರುವದರಿಂದ ವಿದ್ಯಾರ್ಥಿಗಳು ಶಾಲೆಗೆ ನಿಯಮಿತವಾಗಿ ಶಾಲೆಗೆ ಹಾಜರಾಗಬೇಕೆಂದು ಮನವಿ ಮಾಡಿದರು.
ಮುಖ್ಯ ಅಧ್ಯಾಪಕ ಎ.ವ್ಹಿ. ಗಿರೆಣ್ಣವರ ಮಾತನಾಡಿ, ವಿದ್ಯಾರ್ಥಿಗಳ ಅಭ್ಯಾಸ ಹಾಗೂ ಆರೋಗ್ಯ ಎರಡೂ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಪಾಲಕರು ಕೈ ಜೋಡಿಸಬೇಕೆಂದರು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳು ಅಸಾಧ್ಯವಾಗಿರುವಾಗ ಸರ್ಕಾರ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಆರಂಭ ಮಾಡಿರುವದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ವಾದ್ಯಮೆಳಗಳೊಂದಿಗೆ ಗುರುಬಳಗ ಮಕ್ಕಳಿಗೆ ಆರತಿ ಬೆಳಗಿ, ಲಾಡು, ಕಡಲೇ ಕಾಳು, ಸಾವಯವ ಬೆಲ್ಲ ನೀಡಿ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರಾದ ಸುನಂದಾ ಭಜಂತ್ರಿ, ತಿಪ್ಪಣ್ಣ ಹುಲಕುಂದÀ, ರವಿ ಗದಾಡಿ, ಗೋವಿಂದ ನಾವಿ ಉಪಸ್ಥಿತರಿದ್ದರು. ಶಿಕ್ಷಕರಾದ ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಶಂಕರ ಲಮಾಣಿ, ಕಿರಣ ಭಜಂತ್ರಿ, ಶೀಲಾ ಕುಲಕರ್ಣಿ,ಸಂಗೀತಾ ತಳವಾರ,ಮಾದೇವ ಗೋಮಾಡಿ ಮಂಜುನಾಥ ಕಮ್ಮಾರ ಮತ್ತಿತರು ಇದ್ದರು.


Leave a Reply