Koppal

ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡುವವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು


ಕುಷ್ಟಗಿ:ಸರಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ವಾಡ್೯ ನಲ್ಲಿ ಒಂದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.

ಸ್ಥಳೀಯ ಹಾಗೂ ತಾಲೂಕಾಡಳಿತದಿಂದ ಪರವಾನಿಗೆ ಪಡೆದು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.

ಲಸಿಕೆಯನ್ನು ಹಾರಿಸಿಕೊಂಡವರಿಗೆ ಮಾತ್ರ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಲಾಗುವುದು.

ಲಸಿಕೆ ಹಾಕಿಸಿ ಕೊಳ್ಳುವುದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್,ಹಾಗೂ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಸ್ಥಳಿಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮುಖಂಡರು ನೋಡಿ ಕೊಳ್ಳಬೇಕು.

ಸರಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕೆಂದು ಕುಷ್ಟಗಿ ತಹಶಿಲ್ದಾರ ಎಂ ಸಿದ್ದೇಶರವರು ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿದ್ದಾರೆ.

ಆರ್ ಶರಣಪ್ಪಗುಮಗೇರಾ
ಕೊಪ್ಪಳ


Leave a Reply