Koppal

ಕುಷ್ಟಗಿ: ತಳಿರು ತೋರಣಗಳನ್ನು ಕಟ್ಟಿ ಹೂ ಕುಂಚ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು


ಕುಷ್ಠಗಿ:ಸರಕಾರ ೬ ರಿಂದ ೮ ನೇ ತರಗತಿಯ ವರಗೆ ಶಾಲಾ ಪಾರಂಭರಕ್ಕೆ ಆದೇಶ ನೀಡಿದ ಹಿನ್ನಲೆ ಶಾಲಾ ಬಾಗಲಿಗೆ ತಳಿರು ತೋರಣಗಳನ್ನು ಕಟ್ಟಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಸಮಾಜಿಕ ಕಾಪಾಡಿಕೊಳ್ಳಲು ರಂಗೋಲಿ ಮೂಲಕ ಗೆರೆಯನ್ನು ಎಳೆದು ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಿ ಕುಂಚವನ್ನು ನೀಡಿ ಬಿ.ಆರ್.ಸಿ ಸಮನ್ವಯ ಅಧಿಕಾರಿಗಳಾದ ಶ್ರೀಶೈಲ ಸೋಮನಕಟ್ಟಿ ಶಾಲಾ ಮುಖ್ಯೋಪಾಧ್ಯಾಯರಾದ ಸರಸ್ವತಮ್ಮ ಹಾಗೂ ಬಿ.ಆರ್.ಪಿ ರಾಜೇಸಾಬ ನಧಾಫ್, ಸಿ.ಆರ್.ಪಿ ನಾಗರಾಜ ಚನ್ನಪ್ಪನವರ್ ಸೇರಿದಂತೆ ಶಾಲಾ ಶಿಕ್ಷಕರು ಬರಮಾಡಿಕೊಂಡರು.

ನಂತರ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್, ಸಮಾಜಿಕ ಹಂತರ ಕೊರೋನಾ ವೈರಸ್ ಬಗ್ಗೆ ಬಯ ಪಡೆದೆ ಶಾಲಾಗೆ ಬರುವಂತೆ ಮಕ್ಕಳ ಪಾಲಕರು ಯಾವುದೇ ರೀತಿಯಿಂದ ಮಕ್ಕಳ ಬಗ್ಗೆ ಬಯಪಡದೆ ಶಾಲೆಗೆ ಕಳಿಸಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಂಡು ಮಕ್ಕಳ ಆರೋಗ್ಯವನ್ನು ಕಾಪಾಡುತ್ತೇವೆ ಎಂದು ಮಕ್ಕಳಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಪಾರ್ವತೆವ್ವ, ಜಿ.ಡಿ ಪಾಟೀಲ, ಶ್ರೀಮಂತಿ ರತ್ನಾ ಹೂಗಾರ, ಶ್ರೀಮತಿ ವೀಣಾ ಸೋನ್ನದ್, ರತ್ನಾ ಪೂಜಾರ, ಚಂದ್ರಕಲಾ ಗೋಡಿ, ವೀಣಾ ಗುಡ್ಲಾನೂರ, ಸುನಿತಾ ಹಾವೇರಿ, ರಿಹಾನ್ ಬೇಗಂ ನಾಲಬಂದ, ವಿಜಯಲಕ್ಷ್ಮಿ ದೊಡ್ಡಮನಿ ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಶೇಖರ್ ಎಸ್ ಕನಸಾವಿ
ಕುಷ್ಠಗಿ


Leave a Reply