Koppal

ಕುಷ್ಟಗಿ ಪಟ್ಟಣದ ವಿವಿಧ ಶಾಲೆಗಳಿಗೆ ಬೇಟಿ ನೀಡಿದ ನ್ಯಾಯಾಧೀಶರು


ಕುಷ್ಟಗಿ: 6 ರಿಂದ 10 ನೇ ತರಗತಿಯವರೆಗೆ ಶಾಲಾ ಪ್ರಾರಭೋತ್ಸವ ಹಿನ್ನಲೆ ಕುಷ್ಟಗಿ ಪ್ರೌಢಶಾಲೆಗಳಿಗೆ ನಾಯಾಧೀಶರು, ಬೇಟಿ ನೀಡಿದರು. ಮಕ್ಕಳ ಆರೋಗ್ಯಕ್ಕೆ ಒತ್ತು ಕೊಟ್ಟು ಶಾಲಾ ಅಭಿವೃದ್ಧಿಗೆ ಶ್ರಮವಹಿಸಿ ಮತ್ತು ತಪ್ಪದೇ ಕೊವೀಡ್ ನಿಯಮ ಪಾಲನೆ ಮಾಡುವಂತೆ ಬಿ.ಓ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ಖಡಕ್ ಸೂಚನೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕುಷ್ಟಗಿ ನ್ಯಾಯಾಲಯದ ನ್ಯಾಯಾಧೀಶರುಗಳು ಕುಷ್ಟಗಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢ ಶಾಲೆ, ಶ್ರೀ ಗವಿಸಿದ್ದೇಶ್ವರ ಪ್ರೌಢ, ಸರಕಾರಿ ಉರ್ದು ಪ್ರೌಢ ಶಾಲೆ, ಸರಕಾರಿ ಪದವಿ ಜೂನಿಯರ್‌ ಕಾಲೇಜಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯರೊಂದಿಗೆಮತ್ತು ಕ್ಷೇತ್ರ ಶಿಕ್ಷಾಧಿಕಾರಿಗಳಾದ ಎಂ.ಚನ್ನಬಸಪ್ಪ ವಗ್ಗರೊಂದಿಗೆ ಚರ್ಚಿಸಿ ಶಾಲಾ ಸ್ವಚ್ಚತೆ, ಶಾಲಾ ಅಭಿವೃದ್ಧಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ, ಸಮಾಜಿಕ ಹಂತರ, ಪ್ರತಿನಿತ್ಯದ ಕಲಿಕೆ, ಪಾಠದ ಕೊವೀಡ್-19 ನಿಯಮಪಾಲನೆ ಪರಿಶೀಲನೆ ಬಗ್ಗೆ ಪರಿಶೀಲನೆ ಮಾಡಿ ಶಾಲಾ ಸುಧಾರಣೆ ಬಗ್ಗೆ ಸೂಚನೆ ನೀಡಿದರು.

ಮಾಸ್ಕ್ ಇಲ್ಲದೆ ಶಾಲೆಗೆ ಬಂದ ಮಕ್ಕಳನ್ನು ಮಾಸ್ಕ್ ಹಾಕುವಂತೆ ತಿಳಿಸಿದ ನ್ಯಾಯಾಧೀಶರು

ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಮಾಸ್ಕ್ ಇಲ್ಲದೇ 8 ರಿಂದ 10 ಮಕ್ಕಳು ಪಾಠ ಕಲಿಯುತ್ತಿದ್ದ ಮಕ್ಕಳನ್ನು ನೋಡಿ ಶಾಲಾ ಉಪನ್ಯಾಸಕರನ್ನು ಮತ್ತು ಮುಖ್ಯೋಪಾಧ್ಯಾಯರನ್ನು ಕ್ಲಾಸ್ ತೆಗೆದುಕೊಂಡರು.
ನಂತರ ಶಾಲಾ ಸುಧಾರಣೆ ಒತ್ತು ನೀಡುವಂತೆ ಮತ್ತು ಕೊವೀಡ್- 19 ನಿಯಮವನ್ನ ಮಕ್ಕಳು ತಪ್ಪದೆ ಪಾಲನೆ ಪಾಲಿಸುವಂತೆ ಹೇಳಬೇಕು ಎಂದು ಖಡಕ್ ಸೂಚನೆ ನೀಡಿದರು.

ನಂತರ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಲ್ ಹೊನ್ನ ಸ್ವಾಮಿ ಮಾತನಾಡಿ ಹೈಕೋರ್ಟ್ ಆದೇಶದ ಮೇರೆಗೆ ಮತ್ತು ಸರ್ಕಾರ 6 ರಿಂದ 10ನೇ ತರಗತಿಯವರೆಗೆ ಶಾಲಾ ಪ್ರಾರಂಭ ಮಾಡಿದ್ದು ಶಾಲಾ ಸುಧಾರಣೆಗಾಗಿ ಶಾಲಾ ಸ್ವಚ್ಛತೆ ಮಕ್ಕಳ ಕಲಿಕೆ, ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಹೈಕೋರ್ಟ್ ಆದೇಶದ ಮೇರೆಗೆ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಆದರೆ ಶಾಲಾ ಶಿಕ್ಷಕರು ಮತ್ತು ಮಕ್ಕಳು ಸರಕಾರದ ಆದೇಶವನ್ನ ಪಾಲನೆ ಮಾಡಬೇಕು ಕೊವೀಡ್- 19 ಕೊರೋನಾ ವೈರಸ್ ಹೊಗಲಾಡಿಸಲು ಎಲ್ಲಾ ಪ್ರೌಢ ಶಾಲೆ ಮತ್ತು ಪ್ರಾಥಮಿಕ‌ ಶಾಲೆ ಹಾಗೂ ಕಾಲೇಜ ಶಾಲಾ ಶಿಕ್ಷಕರು ಮತ್ತು ಮುಂಜಾಗ್ರತೆಯ ಕ್ರಮವನ್ನು ವಹಸಿ ಮಕ್ಕಳ ಕಲಿಕೆಗೆ ಮಕ್ಕಳ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಆರ್.ಸಿ ಸಮನ್ವಯ ಅಧಿಕಾರಿಗಳಾದ ಶ್ರೀಶೈಲ್ ಸೋಮನಕಟ್ಟಿ, ನ್ಯಾಯಾಂಗ ಇಲಾಖೆಯ ಸಹಾಯಕ ಸುನಿಲ್, ಬಿ.ಆರ್ ಸಿ. ಬಿ ಆರ್ ಪಿ, ಅಧಿಕಾರಿಗಳು ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

 

 

ಆರ್ ಶರಣಪ್ಪಗುಮಗೇರಾ

ಕೊಪ್ಪಳ


Leave a Reply