Belagavi

ಶಿವಾಪೂರ(ಹ)ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ


ಮೂಡಲಗಿ: ತಾಲೂಕಿನ ಶಿವಾಪೂರ(ಹ) ಗಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಗ್ರಾಮ ಪಂಚಾಯತ ಸಹಯೋಗದೊಂದಿಗೆ ನಿರ್ಮಿಸಿರುವ ಶುದ್ಧ ಕುಡಿಯು ನೀರಿನ ಘಟಕವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಿಕ ಉದ್ಘಾಟಿಸಿ ಚಾಲನೆ ನೀಡಿದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟಿನ ಗೋಕಾಕ ವ್ಯಾಪ್ತಿಯ ನಿರ್ದೇಶ ಕೇಶವ ದೇವಾಂಗ ಮಾತನಾಡಿ ಜನಸಾಮಾನ್ಯರಿಗೆ ಆರೋಗ್ಯಧ ದೃಷ್ಠಿತಿಯಿಂದ ಉತ್ತಮ ಶುದ್ಧ ಕುಡಿಯುವ ನೀರು ಸಿಗಬೇಕು ಎಂಬ ಭಾವಣೆಯಿಂದ ಶಿವಾಪೂರ ಗ್ರಾ.ಪಂ ದವರು ಯೋಜನೆಯೊಂದಿಗೆ ಕೈಜೋಡಿಸಿದ್ದಾರೆ. ಒಬ್ಬರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಲ್ಲರೂ ಒಗ್ಗಟಾಗಿ, ಇದು ನಮ್ಮದು ಎನ್ನುವು ಭಾವನೆಯಿಂದ ಶ್ರಮಿಸಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದ ಅವರು ಪೂಜ್ಯ ಡಾ: ವಿರೇಂದ್ರ ಹೆಗಡೆ ಅವರು ಸಮಾಜ ಜನರ ಒಳತಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿರುವರು. ಮೂಡಲಗಿ ತಾಲೂಕಿನಲ್ಲಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರದಡಿಯಲ್ಲಿ ನಿರ್ಗತಿಕರಿಗೆ ಹಾಸಿಗೆ-ಹೊದಿಕೆ, ಅಡುಗೆಯಪಾತ್ರೆ, ಬಟ್ಟೆಗಳನ್ನು ವಿತರಿಸಲಾಗಿದೆ ಎಂದರು.
ಧಾನರ್ಮಿಕ ಜಾಗೃತಿಗಾಗಿ, ದುಶ್ಚಟ ಮುಕ್ತ ಸಮಾಜಕ್ಕಾಗಿ ಸ್ವಸ್ಥö್ಯ ಸಂಕಲ್ಪ ಕಾರ್ಯಕ್ರಮ, ಮಾಸಾಶನ ಮತ್ತು ವಿಕಲಚೇತನರಿಗೆ ವ್ಹೀಲ್ಚೇರ್ ಮತ್ತು ವಿವಿಧ ಸಲಕರಣೆಗಳ ವಿತರಣೆ ಹಾಗೂ ಕೃಷಿಕರಿಗೆ ತರಬೇತಿ, ಸಮಾಜಕ್ಕೆ ಪೂರಕವಾದ ವಿವಿಧ ಕಾರ್ಯಕ್ರಮಗಳು ಶ್ರೀ ಕ್ಷೇತ್ರಧರ್ಮಸ್ಥಳ ಯೋಜನೆಯಿಂದ ನಡೆಯುತ್ತಿವೆ ಎಂದರು.
ಸಮಾರAಭದಲ್ಲಿ ಶಾಸಕರ ಆಪ್ತ ಸಹಾಯಕ ದಾಸಪ್ಪ ನಾಯಿಕ, ಗ್ರಾ.ಪಂ ಪಿಡಿಒ ಶ್ರೀಶೈಲ್ ತಡಸನ್ನವರ, ಜೆ.ಜೆ.ಕೊ ನಿರ್ದೇಶಕ ಎಸ್.ಎಸ್.ಪಾಟೀಲ, ತಾ.ಪಂಸದಸ್ಯ ಎಸ್.ವಾಯ್.ಜುಂಜರವಾಡ, ಹಣಮಂತ ತೇರದಾಳ, ಎಸ್.ಡಿ.ಪಾಟೀಲ, ಟ್ರಸ್ಟಿನ ಯೀಜನಾಧಿಕಾರಿ ದೇವರಾಜ್ ನಾಯಕ, ಎಮ್.ಎಸ್.ಪಾಟೀಲ, ಕೆ.ಬಿ.ಮುಧೋಳ, ಕೆ.ಜಿ.ಮುದೋಳ, ಸುರೇಶ ಡಬ್ಬನವರ, ಎ.ಜಿ.ಗಿರೆಣ್ಣವರ, ಸಿದ್ದು ದುರದುಂಡಿ, ಯಲ್ಲಾಲಿಂಗ ವಾಳದ, ಯೋಜನೆಯ ಮಾನಸಿ ಪಾಟಿಲ ಮತ್ತಿತರರು ಭಾಗವಹಿಸಿದರು.


Leave a Reply