BelagaviUncategorized

ಕಾನೂನು ‌ಸುವ್ಯವಸ್ಥೆ ಕಾಪಾಡುವ ಪೊಲೀಸರೂ ಸೈನಿಕರಿದ್ದಂತೆ: ಅರಗಜ್ಞಾನೇಂದ್ರ


ಬೆಳಗಾವಿ: ದೇಶದ ಗಡಿಯಲ್ಲಿ ಸೈನಿಕರು ಗಡಿ ಕಾಯುವ ಮಾಡುವ ಕೆಲಸ ಮಾಡಿದರೆ ದೇಶದ ಒಳಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಹಾಗಾಗಿ ಪೊಲೀಸರೂ ಸೈನಿಕರೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ನಗರದ ಕಂಗ್ರಾಳಿ(ಕೆಎಚ್)ನ ಕೆಎಸ್‍ಆರ್ ಪಿ
ವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀದ್ ತರಬೇತಿ ಶಾಲೆಯ ಮೊದಲನೇ ತಂಡದ 171 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ದುಷ್ಟರು ಆಧುನಿಕ ಉಪಕರಣ ಬಳಸಿ ಶಾಂತಿ ಸುವ್ಯವಸ್ಥೆ ಹದಗೆಡಿಸುತ್ತಿದ್ದು, ನಮ್ಮ ಪೊಲೀಸರಿಗೂ ಆಧುನಿಕ ಶಸ್ತ್ರಾಸ್ತ್ರ ಕೊಟ್ಟು ಅಪರಾಧ ಚಟುವಟಿಕೆ ಮಟ್ಟ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ಈಗ ಹೊರ ಹೋಗುತ್ತಿರುವ 171 ಜನರಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದವರು ಇಲಾಖೆಗೆ ಬಂದಿದ್ದು, ದೇಶ ಭಕ್ತಿ ಹಾಗೂ ಪ್ರಾಮಾಣಿಕ ಕೆಲಸ ಮಾಡಿ ನಮ್ಮ ಇಲಾಖೆ ಗೌರವ ಹೆಚ್ಚಿಸಬೇಕು. ಸ್ವಾತಂತ್ರ್ಯ ನಂತರ ಬ್ರಿಟಿಷರು ನಮಗೆ ಆಡಳಿತ ನಡೆಸಲು ಬರುವುದಿಲ್ಲ ಎಂಬ ಕುಹಕ ಆಡಿದ್ದರು. ಆದರೆ ನಮ್ಮ ಭಾರತ ಯಾವುದಕ್ಕೂ ಕಡಿಮೆ ಇಲದಂತೆ ಆಡಳಿತ ನಡೆಸಿ ಜಗತ್ತಿನ ಗಮನ ಸೆಳೆಸಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್ ಪಿ ಎಡಿಜಿಪಿ ಅಲೋಕ್‍ಕುಮಾರ್ ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಆದರೂ ಕೂಡ ಬಹಳ ಧೈರ್ಯದಿಂದ ನಮ್ಮ ಪ್ರಶಿಕ್ಷಣಾರ್ಥಿಗಳು ಉತ್ತಮ ಕವಾಯತ್ತು ಪ್ರದರ್ಶಿಸಿದ್ದಾರೆ. 171 ಪ್ರಶಿಕ್ಷಣಾರ್ಥಿಗಳು 8 ತಿಂಗಳು ಇಲ್ಲಿ ಉತ್ತಮ ತರಬೇತಿ ಪಡೆದುಕೊಂಡಿದ್ದಾರೆ. ಈ ವರ್ಷ ಕೆಎಸ್‍ಆರ್‍ಪಿಯಲ್ಲಿ ಸುಮಾರು 700 ಸಿಎಆರ್, ಡಿಎಆರ್, ಕೆಎಸ್‍ಆರ್‍ಪಿ ಸಿಬ್ಬಂದಿಗಳಿಗೆ ವೃತ್ತಿಪರ ಕೌಶಲ್ಯ ಸೇರಿ ಎಲ್ಲ ರೀತಿಯ ತರಬೇತಿ ನೀಡಿದ್ದೇವೆ. ತಮ್ಮ ವೃತ್ತಿಪರ ಜೀವನಕ್ಕೆ ಕಾಲಿಡುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಶುಭಾಶಯ ಕೋರಿದರು.
ಇನ್ನು ವಿವಿಧ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜಯಶಾಲಿಗಳಾದ ಶರತ್ ಎಸ್.ವಿ, ನಿಂಗಪ್ಪ ಮಾನಗಾವಿ, ಶ್ರೀಧರ ಕೋಟಿ, ವಿಶಾಲ ಕತ್ತಿ, ಚಂದನ ಎಂ.ಸಿ., ಮಲ್ಲಿನಾಥ ಜಮಾದಾರ, ಧರ್ಮೆಶ್, ರಾವುತ್ತಪ್ಪ ಕೋಲಕಾರ ಅವರಿಗೆ ಪ್ರಶಸ್ತಿ, ಟ್ರೋಫಿ ನೀಡಿ ಗೃಹ ಸಚಿವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಶಾಸಕ ಅನಿಲ ಬೆನಕೆ, ಉತ್ತರ ವಲಯ ಐಜಿಪಿ ಸತೀಶಕುಮಾರ, ಕೆಎಸ್‍ಆರ್‍ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ ಬೋರಗಾವೆ, ನಗರ ಪೆÇಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply