Belagavi

ಪಾಲಿಕೆಯಲ್ಲಿ ಕಾಂಗ್ರೆಸ್ ಪ್ರದರ್ಶನ ತೃಪ್ತಿ ತಂದಿದೆ: ಸತೀಶ ಜಾರಕಿಹೊಳಿ


ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿದ್ದಷ್ಟೇ ಮತಗಳು ಬಿದ್ದಿವೆ. ಆದರೆ, ಪಕ್ಷದ ಮುಖಂಡರ ನಡುವಿನ ಹೊಂದಾಣಿಕೆ ಕೊರತೆಯಿಂದ ೮ ಸ್ಥಾನಗಳನ್ನು ಪಕ್ಷ ಕಳೆದುಕೊಳ್ಳಬೇಕಾಯಿತು. ಚನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆದ್ದಿದ್ದರೆ ಯಾರಿಗೆ ಲಾಭ ಆಗುತ್ತಿತ್ತೋ ಅವರು ಅದನ್ನು ಮಾಡಿಕೊಳ್ಳಲಿಲ್ಲ. ಇದಕ್ಕೆ ಬೇರೆಯವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಫಿರೋಜ್ ಸೇಠ್ ವಿರುದ್ಧ ಅಸಮಾಧಾನ ವ್ಯಕ್ತಿಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿಯ ಗೆಲುವು ಅಚ್ಚರಿ ಮೂಡಿಸಿಲ್ಲ. ಗೆಲ್ಲಬೇಕಾದವರು ತಮ್ಮಲ್ಲಿನ ಗೊಂದಲದಿAದ ಗೆಲ್ಲಲಿಲ್ಲ. ಅದರ ಲಾಭ ಬಿಜೆಪಿಗೆ ಆಯಿತು. ನಗರದಲ್ಲಿ ಕಾಂಗ್ರೆಸ್ ಮತಗಳು ಎಷ್ಟಿವಿಯೋ ಅಷ್ಟು ಮತಗಳು ಬಂದಿವೆ. ನಾವು ಪಕ್ಷದ ಅಧ್ಯಕ್ಷರು ಹಾಗೂ ವೀಕ್ಷಕರಿಗೆ ೧೫ ಸ್ಥಾನಗಳಲ್ಲಿ ಪಕ್ಷ ಹಾಗೂ ಐದು ಕಡೆ ಪಕ್ಷೇತರರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿಕೊಂಡಿದ್ದೆವು. ಅದರಂತೆ ನಮಗೆ ೧೦ ಸ್ಥಾನ ಬಂದಿವೆ. ಐವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಪಕ್ಷದಲ್ಲಿ ನಾಯಕರ ಹೊಂದಾಣಿಕೆ ಕೊರತೆಯಿಂದ ದಕ್ಷಿಣ ಭಾಗದಲ್ಲಿ ಮೂರು, ಉತ್ತರ ಭಾಗದಲ್ಲಿ ಐದು ಸ್ಥಾನಗಳನ್ನು ಕಳೆದುಕೊಂಡೆವು. ಹೀಗಾಗಿ ನಮ್ಮ ಲೆಕ್ಕಾಚಾರ ತಪ್ಪಿಲ್ಲ. ನಗರದಲ್ಲಿ ಪಕ್ಷದ ಶಕ್ತಿ ಸೀಮಿತವಾಗಿದೆ ಎಂಬುದು ನಮಗೆ ಗೊತ್ತು. ಪಾಲಿಕೆಯಲ್ಲಿ ಕಡಿಮೆ ಸ್ಥಾನ ಬರಲು ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ್ ಪಾತ್ರ ಏನೂ ಇಲ್ಲ. ಅವರ ಕ್ಷೇತ್ರ ಗ್ರಾಮೀಣಕ್ಕೆ ಸೀಮಿತವಾಗಿರುವುದರಿಂದ ಅವರನ್ನು ಹೊಣೆ ಮಾಡಲು ಬರುವುದಿಲ್ಲ ಎಂದರು.
ಬಿಜೆಪಿ ಗೆಲುವು ಅಚ್ಚರಿಯೇನಲ್ಲ. ಎಂಇಎಸ್ ಮಾಡಿಕೊಂಡ ಯಡವಟ್ಟಿನಿಂದ ಬಿಜೆಪಿಗೆ ಲಾಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಎಂಇಎಸ್ ಹಾಗೂ ಕಾಂಗ್ರೆಸ್ ಎಷ್ಟೆಷ್ಟು ಮತಗಳನ್ನು ಪಡೆದಿದ್ದವೋ ಅಷ್ಟೇ ಮತಗಳನ್ನು ಈಗಲೂ ಪಡೆದುಕೊಂಡಿವೆ. ಆದರೆ, ಎಂಇಎಸ್‌ನಲ್ಲಿನ ಹೊಂದಾಣಿಕೆ ಕೊರತೆಯಿಂದ ಒಂದು ಕ್ಷೇತ್ರದಲ್ಲಿ ಎರಡ್ಮೂರು ಜನರು ಸ್ಪರ್ಧಿಸಿದ್ದರಿಂದ ಹೊಡೆತ ಅನುಭವಿಸಿದೆ. ಇದರಲ್ಲಿ ಬಿಜೆಪಿಯೇನೂ ಮ್ಯಾಜಿಕ್ ಮಾಡಿಲ್ಲ ಎಂದರು.
ಪಕ್ಷದ ಅಭ್ಯರ್ಥಿಗಳು ಸೋತರೂ ಪ್ರತಿ ವಾರ್ಡಿನಲ್ಲಿ ಕಾಂಗ್ರೆಸ್‌ಗೆ ಉತ್ತಮ ಮತಗಳು ಬಂದಿವೆ. ಇದರಿಂದ ಪಕ್ಷಕ್ಕೆ ಬೇಸ್ ಸೃಷ್ಟಿಯಾಗಿದೆ. ಇದನ್ನೇ ಇಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


Leave a Reply