Koppal

ಸಾರ್ವಜನಿಕ ರ ಆರೋಗ್ಯ ಮತ್ತು ಸುಗಮ ಸಂಚಾರಕ್ಕಾಗಿ ವಿವಿಧ ಸಂಘಟನೆಗಳಿಂದ ಹೋರಾಟ


ಕುಷ್ಟಗಿ: ನಗರದ ಸಾರ್ವಜನಿಕರ ಆರೋಗ್ಯ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ,
ಹೈದರಾಬಾದ್ ಕರ್ನಾಟಕ ಯುವಶಕ್ತಿ(ರಿ) ,

ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆ,
ಪ್ರಗತಿಪರ ಚಿಂತಕರ ನೇತೃತ್ವದಲ್ಲಿ ,
ಇಂದು ದಿ : 09-09-2021ರ ಗುರುವಾರ,
ಬೆಳಗ್ಗೆ 11 ಘಂಟೆಗೆ ಶ್ರೀ ಕನಕದಾಸ ವೃತ್ತದಿಂದ ಪ್ರತಿಭಟನೆ ಹೋರಾಟ ಹಮ್ಮಿಕೊಳ್ಳಲಾಗಿದೆ.

ಶ್ರೀಕನಕದಾಸ ವೃತ್ತದಿಂದ ,ಶ್ರೀ ಬಸವೇಶ್ವರ ವೃತ್ತದವರೆಗೆ ರಸ್ತೆಯೂದ್ದಕ್ಕೂ ಸಸಿ ನೆಡುವ ಮೂಲಕ ಪ್ರತಿಭಟನೆಯ ಹೋರಾಟ.ಲೋಕೋಪಯೋಗಿ ಇಲಾಖೆಯ ಕುಷ್ಟಗಿ ನಗರದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಪ್ರಮುಖ ರಾಜ್ಯ ಹೆದ್ದಾರಿ ರಸ್ತೆಗಳ, ಏಕಕಾಲಕ್ಕೆ ಸಂಪೂರ್ಣ ದುರಸ್ಥಿ ಮಾಡುವಂತೆ ಮತ್ತು ಧೂಳು ನಿಯಂತ್ರಣಕ್ಕೆ ಒತ್ತಾಯಿಸಿ, ವಿಭಿನ್ನ ರೀತಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು

ಹೈದರಾಬಾದ್ ಕರ್ನಾಟಕ ಯುವಶಕ್ತಿ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ   ಬಸವರಾಜ ಗಾಣಿಗೇರ ತಿಳಿಸಿದ್ದಾರೆ.

ಆರ್ ಶರಣಪ್ಪಗುಮಗೇರಾ
ಕೊಪ್ಪಳ


Leave a Reply