Koppal

ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಿರಿ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸಲಹೆ


ಗಂಗಾವತಿ :ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು,ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತುಂಗ ಭದ್ರಾ ಕಾಡಾ ಅಧ್ಯಕ್ಷ ಬಿ.ಎಚ್. ಎಂ. ತಿಪ್ಪೇರುದ್ರಸ್ವಾಮಿ ಹೇಳಿದರು.
ನಗರದ ವಿರುಪಾಪುರದಲ್ಲಿನ ರಾಘವೇಂದ್ರ ಪಬ್ಲಿಕ್ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ‘ಸ್ಮಾರ್ಟ್ ಕ್ಲಾಸ್’ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣದತ್ತ ಸುಲಭವಾಗಿ ಪಠ್ಯಕ್ರಮಗಳು ಅರ್ಥ ಮಾಡಿಕೊಳ್ಳಲು ಸಾರ್ಟ್ ಕ್ಲಾಸ್ ನಡಿ ಸ್ಮಾರ್ಟ್ ಬೋರ್ಡ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶ ಪಡೆಯುವ ಮೂಲಕ ಸಂಸ್ಥೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು. ಇಂದಿನ ವಿದ್ಯಾರ್ಥಿಗಳೇ ನಾಡಿನ ಭವ್ಯ ಪ್ರಜೆಗಳು ಎಂದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕ ಶಿವರಾಮನಗೌಡ ಮಾತನಾಡಿ, ಮಕ್ಕಳು ದೇಶದ ನಿಜವಾದ ಸಂಪತ್ತು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಜಗತ್ತಿನಲ್ಲಿ ಕದಿಯಲಾಗದ ವಸ್ತು ಶಿಕ್ಷಣ ಮಾತ್ರ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಬಳಿಕ ಶಲಾ ಆವರಣದಲ್ಲಿ ಕೋಟಿ ವೃಕ್ಷ ಅಭಿಯಾನದಡಿ ಗಣ್ಯರು ಸಿಸಿ ನೆಟ್ಟರು. ಜಿಲ್ಲಾ ಸಂಘಟಕ ಮಂಜುನಾಥ, ಶಾಲಾ ಸಂಸ್ಥಾಪಕ ಪವನಕುಮಾರ್ ಗುಂಡೂರು, ಕಾರ್ಯದರ್ಶಿ ಅಲ್ಲಮಪ್ರಭು, ಶಾಲಾ ಆಡಳಿತ ಮಂಡಳಿ ಸದಸ್ಯ ಸತ್ಯನಾರಾಯಣ, ನಗರಸಭೆ ಸದಸ್ಯ ದೇವಪ್ಪ, ನಗರ ಸಂಚಾರಿ ಠಾಣೆ ಪೊಲೀಸ್ ಅಧಿಕಾರಿ ಪುಂಡ್ಲಿಕೊಪ್ಪ,
ಮುಖಂಡರಾದ ಸಂತೋಷ ಕೆಲೋಜಿ, ವಿರೇಶ್ ಸುಳೇಕಲ್, ದುರಗೇಶ್ ಹೊಸ್ಕೇರಾ ಸೇರಿ ಇತರರಿದ್ದರು.

(ಹನುಮೇಶ ಬಟಾರಿ)


Leave a Reply