Koppal

ಸರ್ಕಾರದ ನಿಯಮಗಳ ಪ್ರಕಾರ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿ


ಕುಷ್ಟಗಿ: ಕುಷ್ಟಗಿ ಪೋಲಿಸ್ ಠಾಣೆಯ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿ ಎಸ್ ಪಿ ರುದ್ರೇಶ ಉಜ್ಜನಕೊಪ್ಪ ರವರು ಕೋವಿಡ್ ಮೂರನೇ ಅಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಆರೋಗ್ಯ ದ ದೃಷ್ಟಿಯಿಂದ ಈ ಎಲ್ಲಾ ಸರ್ಕಾರದ ಆದೇಶ ವನ್ನು ತಪ್ಪದೇ ಎಲ್ಲರೂ ಪಾಲಿಸಬೇಕು. ವಾಡ್೯ ಗೆ ಒಂದರಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಆಚರಣೆ ಮಾಡಿ ಕೊಳ್ಳಲು ಅನುಮತಿ ನೀಡಲಾಗುವುದು ಎಂದರಯ.

ನಗರ ಪ್ರದೇಶದಲ್ಲಿ ವಾಡ್೯ ಗೆ ಒಂದರಂತೆ, ಗ್ರಾಮೀಣ ಭಾಗದಲ್ಲಿ ಊರಿಗೆ ಅಥವಾ ಗ್ರಾಮಕ್ಕೆ ಒಂದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ತಹಶೀಲ್ದಾರ ಕಛೇರಿ,ಕೆಇಬಿ,ಹಾಗೂ ಅಗ್ನಿಶಾಮಕ ಠಾಣೆಗಳ ಅನುಮತಿ ಪಡೆದು ಕೊಳ್ಳಬೇಕು.

ಗಣೇಶ ಮೂರ್ತಿ ಗಳನ್ನು ಕೂಡಿಸಲು ಸಮಿತಿಯವರಿಗೆ ಸೂಚನೆಗಳು ಈ ಕೆಳಗಿನಂತಿವೆ.

೧) ಮೂರ್ತಿಗಳನ್ನು ಕೂಡಿಸಲು ಸಮಿತಿಯವರು ಮುಂಚಿತವಾಗಿ ಪೋಲಿಸರಿಗೆ ಮಾಹಿತಿ ನೀಡಬೇಕು.

2) ಗಣೇಶ್ ಸರಳ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನದ ಒಳಗಡೆ ಮತ್ತು ಮನೆಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಜನಸಂಖ್ಯೆಯೊಂದಿಗೆ ಆಚರಿಸ ತಕ್ಕದ್ದು.

3)ಸಾರ್ವಜನಿಕ ಸ್ಥಳದಲ್ಲಿ 4ಅಡಿ ಮೀರದಂತೆ ಮತ್ತು ಮನೆಯಲ್ಲಿ 2ಅಡಿ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದು.

4) ಪೆಂಡಾಲ್ ಗಳನ್ನು ಹಾಕುವ ಮುಂಚೆ ಸ್ಥಳದ ಮಾಲೀಕರು ನಗರಸಭೆಯನ್ನು ಅನುಮತಿ ಪಡೆಯತಕ್ಕದ್ದು.

5)ಉತ್ಸವ ಸಮಿತಿಯವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.

6)ಧ್ವನಿವರ್ಧಕ ಡಿಜೆ ಸಿಸ್ಟಮ್ ಗಳನ್ನು ಬಳಸುವಂತಿಲ್ಲ.

7)ಪೆಂಡಲ್ ಶಾಮಿಯಾನ್ ಇರುವ ಜಾಗದಲ್ಲಿ ಸಿಸಿಟಿವಿಯನ್ನು ರೆಕಾರ್ಡಿಂಗ್ ಸಮೇತ ಅಳವಡಿಸಿಕೊಳ್ಳಬೇಕು.

8)ಪೊಲೀಸ್ ಇಲಾಖೆಗೆ ಲಿಖಿತವಾಗಿ ಬರೆದು ಕೊಟ್ಟ ದಿನಾಂಕದಂದು ಮಾತ್ರವೇ ವಿಸರ್ಜನೆ ಮಾಡಬೇಕು.

9) ಪಟಾಕಿ ಸುಡುವುದಾಗಲಿ , ಏರು ಧ್ವನಿಯಲ್ಲಿ ಧ್ವನಿವರ್ಧಕ ನಡೆಸುವುದಾಗಲೀ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವುದಾಗಲಿ ಅಥವಾ ಕೋಮು ಸೌಹಾರ್ದತೆಗೆ ಯಾವುದೇ ಕೃತ್ಯಗಳನ್ನು ಮಾಡತಕ್ಕದ್ದಲ್ಲ.

10)ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆಯಲ್ಲಿ ಮೆರವಣಿಗೆ ಮಾಡುವಂತಿಲ್ಲ.

ಹೀಗೆ ಹತ್ತಾರು ನಿಯಮಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಿದೆ, ಇದನ್ನೆಲ್ಲಾ ಸಾರ್ವಜನಿಕರು ಪಾಲಿಸಬೇಕು.ಕಾನೂನು ಬಾಹೀರ ಚಟುವಟಿಕೆಗಳಿಗೆ ಯಾರು ಆಸ್ಪದ ಮಾಡಿ ಕೊಡದೇ ಸರಳವಾಗಿ ಆಚರಣೆ ಮಾಡಬೇಕೆಂದು,ಡಿ ಎಸ್ ಪಿ ರುದ್ರೇಶ ಉಜ್ಜನಕೊಪ್ಪ ರವರು ಹೇಳಿದರು.

ಈ ಸಂದರ್ಭದಲ್ಲಿ ಡಿಎಸ್ ಪಿ ರುದ್ರೇಶ ಉಜ್ಜನಕೊಪ್ಪ,ಕುಷ್ಟಗಿ ಉಪ ತಹಶೀಲ್ದಾರ ಮುರುಳಿ,ಪಿ ಎಸ್ ಐ ಗಳಾದ ಕೆ ತಿಮ್ಮಪ್ಪ,ಮಾನಪ್ಪ ನಾಯಕ ,ಪುರಸಭೆ ಮುಖ್ಯಾಧಿಕಾರಿ,ಉಮೇಶ ಹಿರೇಮಠ, ಅಗ್ನಿಶಾಮಕ ಠಾಣೆಯ ಅಧಿಕಾರಿ,ರಾಜು, ಕುಷ್ಟಗಿ ಕನ್ನಡ ಪರ ಸಂಘಟನೆ ಗಳ ಮುಖಂಡರು, ಹೋರಾಟ ಗಾರರು,ವ್ಯಾಪಾರ ಸ್ಥರು ವಿವಿಧ ಗ್ರಾಮದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ರು ಉಪಸ್ಥಿತರಿದ್ದರು.

ಅರ್ ಶರಣಪ್ಪಗುಮಗೇರಾ
ಕೊಪ್ಪಳ.


Leave a Reply