Koppal

ಗಂಗಾವತಿ ವಿಜಯ ವೃಂದ ಗೆಳೆಯರ ಬಳಗ ಗಣಪತಿ


ಗಂಗಾವತಿ:ಗಂಗಾವತಿಯ ವಿಜಯ ವೃಂದ ಗೆಳೆಯರ ಬಳಗ ಕೂಡಿಸುವ ಗಣಪತಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮಹಾರಾಜ ಗಣಪತಿ ಎಂದೇ ಹೆಸರು ಪಡೆದಿದೆ.ಪ್ರತಿವರ್ಷ ಗಣೇಶನ ಮೂರ್ತಿ ವಿಧವಿಧ ಆಕಾರಗಳ ಕೊಡಿಸುವುದರ ಜತೆಗೆ  DJ ಮೂಲಕ ಅದ್ಧೂರಿಯಾಗಿ ಗಣೇಶನ ಮೆರವಣಿಗೆ ಮಾಡುತ್ತಿದ್ದರು.

ಆದರೆ ಕೋವಿಡ್ ಇರುವುದರಿಂದ ಸರ್ಕಾರದ ಆದೇಶದಂತೆ ಪರಿಸರ ಪ್ರೇಮಿ ಮಣ್ಣಿನ 5 ಅಡಿ ಗಣಪ್ಪ ಕೂಡಿಸಿ ವಿಘ್ನೇಶ್ವರನಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರು. 

ಪೂಜೆಯಲ್ಲಿ  ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್ ಆರ್ ಶ್ರೀನಾಥ್ ಅವರು ಭಾಗಿಯಾಗಿದ್ದರು. 

ಗಣಪತಿ ನೋಡಲು ಬರುವಂಥ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ  ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ಅಂತರವನ್ನು ಕಾಪಾಡುವಂತೆ ಸಂಘದ ಪದಾಧಿಕಾರಿಗಳು ಸೂಚಿಸುತ್ತಿದ್ದಾರೆ.

ಟೆಂಗಿನಕಾಯಿ ಶಾಂತಕುಮಾರ್, ಸತೀಶ್ , ಶಿವು ಸಾಗರ್ ನಾಯಕ್ , ಶ್ರೀ  ರಾಮು  , ಶರಣ ಮಳಗಿ   ಬಸವರಾಜ ಮಳಗಿ , ಗುರುರಾಜ್  ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರು ಪಾಲ್ಗೊಂಡಿದ್ದರು

(ಹನುಮೇಶ ಬಟಾರಿ)


Leave a Reply