Belagavi

10 ದಿನಗಳ ಗಣೇಶೋತ್ಸವಕ್ಕೆ ಸೋಮವಾರ ಆದೇಶ: ಸಚಿವ ಗೋವಿಂದ ಕಾರಜೋಳ


ಬೆಳಗಾವಿ: ಬೆಳಗಾವಿಯಲ್ಲಿ ಗಣೇಶೋತ್ಸವ 10 ದಿನಗಳ ಕಾಲ ಆಚರಣೆ ಮಾಡಬೇಕೆಂದು ಯುವಕರು, ಹಿಂದು ಸಂಘಟನೆಗಳ ಒತ್ತಾಯವಿತ್ತು. ಹೀಗಾಗಿ 10 ದಿನಗಳ ಆಚರಣೆಗೆ ಸೋಮವಾರ ಆದೇಶ ಬರಲಿದೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬೆಳಗಾವಿಯಲ್ಲಿ ಹತ್ತು ದಿನಗಳ ಗಣೇಶೋತ್ಸವ ಮಾಡಲು ಅವಕಾಶ ಕೊಡುತ್ತೇವೆ. ಸೋಮವಾರ ದಿನ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಲಿದೆ ಎಂದು ಭರವಸೆ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೊಡಿಮಠದ ಶ್ರೀಗಳ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ನಾವು ಸಿದ್ದರಾಮಯ್ಯನವರು ನಾಸ್ತಿಕ ಎಂದು ತಿಳಿದುಕೊಂಡಿದ್ದೇವು. ಆದರೆ, ಆದಷ್ಟು ಬೇಗ ಮುಖ್ಯಮಂತ್ರಿ ಆಗಬೇಕೆಂದು ಜ್ಯೋತಿಷ್ಯ ಕೇಳುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಶಾಸಕ ಅಭಯ ಪಾಟೀಲ್‍ಗೆ ಮಂತ್ರಿಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ 17 ಜನ ಶಾಸಕರು ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶ ನೀಡಬೇಕಾಗಿದ್ದರಿಂದ ಕೆಲವು ಸಾರಿ ನಮ್ಮ ಲೆಕ್ಕಾಚಾರ ತಪ್ಪಿವೆ. ಮುಂದಿನ ಬಾರಿಗೆ ಎಲ್ಲವನ್ನು ಸರಿ ಮಾಡ್ತೀವಿ. ಸಂವಿಧಾನದಲ್ಲಿ ಶೇ.15ರಷ್ಟು ಜನರನ್ನು ಮಂತ್ರಿ ಮಾಡಲು ಅವಕಾಶವಿದೆ. ನಮ್ಮಲ್ಲಿ 224 ಜನರು ಶಾಸಕರಿದ್ದಾರೆ. ಒಂದೊಂದು ಸಾರಿ ಒಂದೊಂದು ಅವಕಾಶ ಬರುತ್ತವೆ ಕಾಯಬೇಕು ಎಂದರು.


Leave a Reply