Belagavi

ಹೆಲ್ಪಿಂಗ ಹ್ಯಾಂಡ್ಸ್ ವತಿಯಿಂದ ಪರಿಸರ ಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾ


 

 

ಬೈಲಹೊಂಗಲ ೧೧: ನಗರದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಸದಸ್ಯರಿಂದ ಪರಿಸರ ಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ವೀರ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಾಜಿ ಪುತ್ತಳಿಗೆ ಮಾಲರ‍್ಪಣೆ ಮಾಡುವುದರ ಮುಖಾಂತರ ಜಾಥಾ ಗೆ ಚಾಲನೆ ನೀಡಲಾಯಿತು. ನಗರದ ಇಂಚಲ ಕ್ರಾಸ್, ಬಸ್ ನಿಲ್ದಾಣದ ಮುಂಬಾಗದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಕರ‍್ಯರ‍್ತರು ಮಾಲಿನ್ಯ ಅಳಿಸಿ,ಪರಿಸರ ಉಳಿಸಿ,ಎಂಬ ಘೋಷಣೆ ಕೂಗುತ್ತ ಸರ‍್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದರು.

ಸಿಪಿಐ ಯು,ಏಚ್, ಸಾತೆನಹಳ್ಳಿ ನಗರದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ರಾಯನ್ನನವರ ಪುತ್ತಳಿಗೆ ಮಾಲರ‍್ಪಣೆ ಮಾಡಿ, heಟಠಿiಟಿg hಚಿಟಿಜs ತಂಡದ ವತಿಯಿಂದ ಸರ‍್ವಜನಿಕರಿಗೆ ಸಸಿ ವಿತರಣೆ ಕರ‍್ಯಕ್ರಮದಲ್ಲಿ ಭಾಗವಹಿಸಿ ಸರ‍್ವಜನಿಕರಿಗೆ ಸಸಿ ವಿತರಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ತಂಡದ ಸದಸ್ಯರಾದ ಯೋಗಗುರು ಡಾ. ಸಂಗಮೇಶ್ ಸವದತ್ತಿಮಠ ಮಾತನಾಡಿ, ಮನುಷ್ಯರು ರೋಗರುಜಿನ ಬಂದಮೇಲೆ ಪರಿಹಾರ ಹುಡುಕುವುದಕ್ಕಿಂತ ರೋಗರುಜಿನಗಳು ಬರುವ ಮೊದಲೇ ಜಾಗೃತಿ ವಹಿಸಬೇಕು.ಹಾಗೂ ಪರಿಸರ ಸ್ನೇಹಿ ಗಣಪತಿಗಳನ್ನು ಪೂಜಿಸುವಂತೆ ಸಲಹೆ ನೀಡಿದರು.

ಪರಿಸರ ಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾದಲ್ಲಿ ತಂಡದ ಸದಸ್ಯರಾದ ಶಾಂತವೀರೇಶ ಹಿರೇಮಠ, ಗೌತಮ್ ಇಂಚಲ, ಸೂರಜ್ ಮತ್ತಿಕೊಪ್ಪ, ಪ್ರಫುಲ್ ಉಳ್ಳೇಗಡ್ಡಿ, ಶರಣು ಹೂಲಿ, ರ‍್ಜುನ ಕಲಕುಟಕರ, ವಿನಯ್ ಬೋಳಣ್ಣವರ, ರ‍್ಷ ಪೂಜೇರಿ, ಸೋಮನಾಥ ಸೊಪ್ಪಿಮಠ, ವಿನಯ್ ಪರಿಟ್, ಶೊಯೆಬ್ ಸಂಗೊಳ್ಳಿ, ಧೀಮಂತ ಪಾಟೀಲ್, ಪ್ರಕಾಶ್ ಕಮ್ಮಾರ, ಈಶ್ವರ ಶಿಲ್ಲೇದಾರ, ಸತೀಶ ಅರವಳ್ಳಿ, ವೀರೇಶ ಪಾಟೀಲ, ಉಪಸ್ಥಿತರಿದ್ದರು.


Leave a Reply