Belagavi

ಕಾರಿಮನಿ, ಸಮುದಾಯ  ಭವನ ನಿರ್ಮಾಣಕ್ಕೆ  ಆಗ್ರಹಿಸಿ  ಮನವಿ  ಅರ್ಪಣೆ


 

 

ಬೈಲಹೊಂಗಲ  11 –  ಸಮೀಪದ ಕಾರಿಮನಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನ ಪಕ್ಕದಲ್ಲಿ ಹೊಸ ಸಮುದಾಯ ಭವನವನ್ನು

ನಿರ್ಮಿಸಲು ಆಗ್ರಹಿಸಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಮನವಿ ಅರ್ಪಿಸಲಾಯಿತು.

ಸಂಸದರ ಅನುದಾನದಡಿಯಲ್ಲಿ  ಸುಮಾರು 25 ರಿಂದ  30 ಲಕ್ಷ  ರೊ, ಗಳ  ಹಣ

ಮಂಜೂರು ಮಾಡಿಸಿ ದೇವಸ್ಥಾನ ಪಕ್ಕದಲ್ಲಿ ನೂತನ ಸಮುದಾಯ ಭವನ ನಿರ್ಮಿಸಿಕೊಡಬೇಕೆಂದು ಲೋಕಸಭಾ ಸದಸ್ಯೆ  ಮಂಗಳಾ  ಅಂಗಡಿಯವರಲ್ಲಿ ಗ್ರಾಮಸ್ಥರು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ,  ಜಿ  ಪಂ ಸದಸ್ಯ

ಬಸವರಾಜ  ಬಂಡಿವಡ್ಡರ ತಾಲೂಕಾ  ಬಿ ಜೆ  ಪಿ  ಕಾರ್ಯದರ್ಶಿ

ಲಕ್ಕಪ್ಪ  ಕಾರಗಿ ಹಾಗೂ  ಕಾರಿಮನಿ

ಗ್ರಾಮದ  ಮುಖಂಡರಾದ ಶಿವಾನಂದ ಪೂಜೇರಿ, ಮಲ್ಲಯ್ಯ  ಪೂಜೇರಿ, ವಿರೂಪಾಕ್ಷಯ್ಯ ಪೂಜೇರಿ, ಬಸಪ್ಪ  ಕಾರಿಮನಿ, ಈರಯ್ಯ  ಮುಸ್ಸೇನ್ನವರ, ಈರಯ್ಯ

ಪೂಜೇರಿ, ವಿರೂಪಾಕ್ಷಯ್ಯ  ಗುಡದೂರ, ಪರಯ್ಯಾ  ಮುದಕೈನವರ ಸೇರಿದಂತೆ  ಅನೇಕರು  ಈ  ಸಂದರ್ಭದಲ್ಲಿ  ಉಪಸ್ಥಿತರಿದ್ದರು.

 


Leave a Reply