Belagavi

ಮೂಡಲಗಿ ಪಟ್ಟಣ ಮತ್ತು ತಾಲುಕಿನಲ್ಲಿ ವಿವಿಧಡೆ ಗಣೇಶ ಪ್ರತಿಷ್ಠಾಪನೆ


ಮೂಡಲಗಿ: ಕೊರೋನಾ ಅರ್ಭಟಕ್ಕೆ ಕಂಗಾಲಾಗಿದ್ದ ಸಾರ್ವಜನಿಕರು ಪವಿತ್ರ ವಿಘ್ನ ನಿವಾರಕ ಗಣೇಶನನ್ನು ಬರಮಾಡಿಕೊಂಡು ಮಹಾಮಾರಿ ಕೊರೋನಾ ಅಲೆಗಳನ್ನು ಹಿಮ್ಮೆಟ್ಟಿಸುವಂತೆ ವಿಘ್ನ ನಿವಾರಕ ಗಣೇಶನಲ್ಲಿ ಪ್ರಾರ್ಥಿಸಿ ತಮ್ಮ ಮನೆಗಳಿಗೆ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ದೇವರ ಮೊರೆಹೋಗಿ ತಾಲೂಕಿನ ಜನತೆ ಸಂಭ್ರಮಿಸಿದರು.
ಶುಕ್ರವಾರದಂದು ಗಣೇಶ ಹಬ್ಬದ ಪ್ರಯುಕ್ತ ಮೂಡಲಗಿ ಹಾಗೂ ಸುತ್ತಲಿನ ಜನತೆ ಸರಳ ರೀತಿಯಲ್ಲಿ ಗೌರಿ ಗಣೇಶನನ್ನು ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶಾಸ್ತೊçÃಕ್ತವಾಗಿ ಪೂಜಿಸುವ ಮೂಲಕ ನಾಡಿನ ಜನತೆಗೆ ಒಳ್ಳೇಯದಾಗಲೆಂದು ಗಣೇಶನಲ್ಲಿ ಪ್ರಾರ್ಥಿಸಿದರು. ಕೊರೋನಾ ೩ ನೇ ಅಲೆಯ ಭೀತಿಯ ಹಿನ್ನೆಲೆ ಕಂಗಾಲಾಗಿರುವ ಸಂದರ್ಭದಲ್ಲಿ ಯಾವುದೇ ಮನರಂಜನೆ, ಹಬ್ಬ ಹರಿದಿನಗಳು, ಮದುವೆ ಮುಂಜಿ, ಗೃಹ ಪ್ರವೇಶ ಅಷ್ಟೇ ಅಲ್ಲದೆ ಶವ ಸಂಸ್ಕಾರಗಳಿಗೂ ಅಡ್ಡಿಯಾಗಿ ಪರಸ್ಪರ ಕೂಡುವಿಕೆಯಿಂದ ದೂರವಾಗಿ ಕಂಗಾಲಾಗಿದ್ದ ಜನತೆಗೆ ಗೌರಿ ಗಣೇಶ ಶುಭ ನೀಡಲೆಂದ ಆಶಾ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿತ್ತು.
ಹಬ್ಬದ ನಿಮಿತ್ಯ ಸಾರ್ವಜನಿಕರು ಹೂ, ಹಣ್ಣು, ಅಲಂಕಾರೀಕ ವಸ್ತುಗಳು, ಕಬ್ಬು, ತಳಿರು ತೋರಣ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಯಾವುದೇ ತರಹದ ಶಬ್ದ ಮಾಲಿನ್ಯಯಾಗದ ನಿಟ್ಟಿನಲ್ಲಿ ಗಣಪನಿಗೆ ಜೈಯಕಾರಗಳಷ್ಟೇ ಕಂಡು ಬಂದಿತ್ತು. ತುಂತುರು ಮಳೆಯಾಗಿ ಯುವಕರಿಗೆ ಸ್ಪೂರ್ತಿಯನ್ನು ನೀಡಿತು. ಯಾವುದೇ ತೆರನಾದ ಅಹಿತಕರ ಘಟನೆಗಳು ಜರುಗದೆ ಶಾಂತಿಯುತವಾಗಿ ಸರಳತೆಯಿಂದ ವಿಘ್ನ ನಿವಾರಕ ಗೌರಿ ಗಣೇಶನನ್ನು ಬರಮಾಡಿಕೊಂಡು ಸಂತಸ ಹಂಚಿಕೊAಡರು.
ಹೆಸ್ಕಾA ಕಛೇರಿಯಲಿ: ಗಣೇಶ ಚತುರ್ಥಿಯ ನಿಮಿತ್ಯವಾಗಿ ಮೂಡಲಗಿ ಹೆಸ್ಕಾಂ ಕಚೇರಿಯಲ್ಲಿ ವಿಘ್ನ ನಿವಾರಕ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಪುಣಿತರಾದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಎಸ್.ನಾಗನ್ನವರ, ಎಸ್.ಎಸ್ ಮುರಗೋಡ, ಶಾಖಾಧಿಕಾರಿಗಳಾದ ಪಿ.ಆರ್.ಯಡಹಳ್ಳಿ, ಶ್ರೀಧರ ಯಲಿಗಾರ, ಆರ್.ಪಿ.ಪಿಡಾಯಿ, ಬಿ.ವಾಯ್.ಕುರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Leave a Reply