Belagavi

ಬಿಜೆಪಿಗೆ ಇಕ್ಕಟ್ಟು ತಂದ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ


ಬೆಳಗಾವಿ ಬಿಜೆಪಿಗೆ ಸೇರುವ ಮುನ್ನ ನನಗೆ ಹಣದ ಆಫರ್ ಕೊಟ್ಟಿದ್ದು ನಿಜ ಎಂದು ಹೇಳುವ ಮೂಲಕ ವಲಸಿಗ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಬಿಹೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಹಣದ ಆಫರ್ ಕೊಟ್ಟರೂ ನಾನು ಬೇಡ ಎಂದಿದ್ದೆ. ಯಾವುದೇ ಹಣ ನನಗೆ ಬೇಡ, ಒಳ್ಳೆಯ ಸ್ಥಾನ-ಮಾನ ಬೇಕು ಎಂದಿದ್ದೆ. ಹಣದ ಬದಲು ನನ್ನ ಕ್ಷೇತ್ರದ ಜನರಿಗೆ ಒಳ್ಳೆಯ ಸೇವೆ ಮಾಡುವ ನಿಟ್ಟಿನಲ್ಲಿ ಯೋಗ್ಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ 17 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಕುಮಾರಸ್ವಾಮಿ ನೇತೃತದ ಮೈತ್ರಿ
ತ್ರಿ ಸರ್ಕಾರ ಪತಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.ಈ ವೇಳೆ ಕಾಂಗ್ರೆಸ್ ಮುಖಂಡರು ವಲಸಿಗ ಶಾಸಕರಿಗೆ ಬಿಜೆಪಿ 30 ಕೋಟಿ ಆಫರ್ ನೀಡಿದೆ ಆರೋಪಿಸಿತ್ತು.ವಿಧಾನಸಭೆ ಅಧಿವೇಶನ ಸಮೀಪ ಇದ್ದು, ಈಗ ಶ್ರೀಮಂತ ಪಾಟೀಲ ಹೇಳಿಕೆ ಪ್ರತಿಪಕ್ಷಗಳ ಕೈಗೆ ಹೊಸ ಅಸ್ತ್ರ ಒದಗಿಸಿದ್ದು ಬಿಜೆಪಿಗೆ ತಲೆನೋವು ತಂದಿದೆ.
ಮುಂದುವರಿದು ಮಾತನಾಡಿದ ಶಾಸಕ ಪಾಟೀಲ,
ಈಗ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಈ ವಿಚಾರದಲ್ಲಿ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಬರುವ ಸಂಪುಟ ವಿಸ್ತರಣೆಯಲ್ಲಿ ಖಂಡಿತವಾಗಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರತಿಪಕ್ಷಗಳಿಗೆ ಪ್ರಬಲ‌ ಅಸ್ತ್ರ ಲಭಿಸಿಂತಾಗಿದೆ. ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಷಯ ಹಿಡಿದು ಸರ್ಕಾರದ ಮೇಲೆ‌ ಮುಗಿಬೀಳುವ, ರಾಜ್ಯಪಾಲರ ಮೊರೆ ಹೋಗುವ ಸಾಧ್ಯತೆ ಇದೆ.


Leave a Reply