Belagavi

ಮೇಯರ್, ಉಪಮೇಯರ್ ಇನ್ನೂ ಫೈನಲ್ ಆಗಿಲ್ಲ: ಅಭಯ ಪಾಟೀಲ


ಬೆಳಗಾವಿ: ಮಹಾನಗರ ಪಾಲಿಕೆಗೆ ಬಿಜೆಪಿ ಅಭ್ಯರ್ಥಿಗಳೇ ಮೇಯರ್ ಮತ್ತು ಉಪಮೇಯರ್ ಆಗಲಿದ್ದಾರೆ.ಆಯೋಗದ ಮೇಯರ್ ಸ್ಥಾನದ ಕುರಿತು ನೋಟಿಫಿಕೇಶನ್​ ಹೊರಡಿಸಿದ ನಂತರ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಪಾಲಿಕೆ ನೂತನ ಸದಸ್ಯರೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾಲ್ಕೈದು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‌ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್​ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದೇವೆ. ಬೆಳಗಾವಿ ಪಾಲಿಕೆಗೆ ಮೇಯರ್ ಸ್ಥಾನದ ವಿಚಾರ ಪ್ರಸ್ತಾಪ ಮಾಡಿಲ್ಲ. ಯಾವ ಸಮುದಾಯಕ್ಕೆ ಕೊಡಬೇಕು ಎಂಬುವುದರ ಬಗ್ಗೆಯೂ ಚರ್ಚೆ ಆಗಿಲ್ಲ.ಇದೆಲ್ಲವೂ ಬರೀ ಊಹಾಪೋಹಗಳಷ್ಟೆ ಎಮನದರು.
ನಾನು ಮತ್ತು ಉತ್ತರ ಕ್ಷೇತ್ರದ ಶಾಸಕ ಬೆನಕೆ ಬೆಳಗಾವಿ ಅಭಿವೃದ್ಧಿ ಮಾಡುವ ಅಜೆಂಡಾ ಹೊಂದಿದ್ದೇವೆ. ಮಹಾನಗರ ಜನರ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಮ್ಮ ವಿರೋಧಿಗಳಿಗೆ ಅಭಿವೃದ್ಧಿ ಮೂಲಕ ಉತ್ತರ ಕೊಡುತ್ತೇವೆ ಎಂದರು.


Leave a Reply