Belagavi

ಎತ್ತಿನ ಗಾಡಿಯಲ್ಲಿ ತೆರಳಿ ತೈಲಬೆಲೆ ಹೆಚ್ಚಳದ ವಿರುದ್ಧ ಸದನದಲ್ಲಿ ಧ್ವನಿ ಎತ್ತುವೆ: ಡಿ.ಕೆ.ಶಿವಕುಮಾರ್


ಬೆಳಗಾವಿ:ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಆಕಾಶಕ್ಕೆ ಏರುತ್ತಿದೆ.ಜನರು ಜೀವನ ನಡೆಸುವುದು ಕಷ್ಟವಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಾನು ನಾಳೆ ಎತ್ತಿನ ಗಾಡಿಯಲ್ಲಿ ಅಧಿವೇಶನಕ್ಕೆ ಹೋಗುತ್ತೇವೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಆಗಮಿಸಿದ ಅವರು, ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಪಾಲಿಕೆಯ ಚುನಾವಣೆಯಲ್ಲಿ ಪಕ್ಷದ ಸಾಧನೆ ತೃಪ್ತಿ ತಂದಿಲ್ಲ.
ಸೋಲಿನ ಬಗ್ಗೆ ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಸೋಲಿನ ಅಧ್ಯಯನ ಮಾಡಲು ಎಐಸಿಸಿಯಿಂದ ಸತ್ಯಶೋಧನೆಗೆ ಬರುತ್ತಿದೆ. ಮೊದಲಿಗೆ ಬೆಳಗಾವಿ ಅನಂತರ ಉಳಿದ ಪಾಲಿಕೆ ಫಲಿತಾಂಶದ ಬಗ್ಗೆ ಅಧ್ಯಯನ ಮಾಡಲಿದೆ. ಚುನಾವಣೆ ಆಯೋಗದವರು ನಮ್ಮ ಅಭ್ಯರ್ಥಿಗೆ ಒಂದು ವೋಟರ್ ಲಿಸ್ಟ್, ಬಿಜೆಪಿಯವರಿಗೆ ಬೇರೊಂದು ವೋಟರ್ ಲಿಸ್ಟ್ ಕೊಟ್ಟಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ಬಿಜೆಪಿಯಿಂದ ನನಗೆ ಹಣದ ಆಫರ್ ಬಂದಿತ್ತು ಎಂಬ ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ಶ್ರೀಮಂತ ಪಾಟೀಲ ಸತ್ಯ ಹೇಳಿದ್ದಾರೆ. ಒಬ್ಬ ಶಾಸಕರಾಗಿ, ಮಾಜಿ ಮಂತ್ರಿಯಾಗಿ ಮಾತನಾಡಿದ್ದಾರೆ. ಎಸಿಬಿಯವರು ಸ್ವಯಂ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಗುಜರಾತ್ ಸಿಎಂ ಬದಲಾವಣೆಗೆ ಪ್ರತಿಕ್ರಿಯಿಸಿ, ಕೊರೊನಾ ಪರಿಸ್ಥಿತಿ ಸರಿಯಾಗಿ ನಿಭಾಯಿಸಲು ಆಗಲಿಲ್ಲ ಎಂದು ದೇಶದ ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ, ರಾಜ್ಯದಲ್ಲಿ ಎಲ್ಲ ಕಡೆ ಪಜ್ಷದ ಆಡಳಿತವೇ ಸರಿ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಹೇಳಿದರು.


Leave a Reply