Belagavi

ಸಮಾಜದಲ್ಲಿ ಗುರುವಿನ ಸ್ಥಾನ ದೊಡ್ಡದು. ಕುಲಕರ್ಣಿ


ಬೈಲಹೊಂಗಲ ೧೩ – ಪ್ರತಿಯೊಬ್ಬರ ಅಜ್ಞಾನವನ್ನು ತೊಲಗಿಸಿ ಒಳ್ಳೆಯ ಜ್ಞಾನ £Ãಡುತ್ತಿರುವ ಗುರುವಿಗೆ ಸಮಾಜದಲ್ಲಿ ದೊಡ್ಡ ಸ್ಥಾನವಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖ ಮುಕುಂದ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತಾಲೂಕು ಘಟಕದ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮಗೆಲ್ಲಾ ಒಳ್ಳೆಯ ಗುಣಗಳನ್ನು £Ãಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಗುರುಗಳನ್ನು ಸನ್ಮಾ£ಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಡಾ. ಚಂದ್ರಶೇಖರ ಗಣಾಚಾರಿ ಹಾಗೂ ಪತ್ರಕರ್ತ ಈಶ್ವರ ಹೋಟಿ ಮಾತನಾಡಿ ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು ಮಕ್ಕಳಿಗೆ ಜ್ಞಾನದಾಸೋಹ ಮಾಡಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶಿಕ್ಷಕರ ಪಾತ್ರ ಹಿರಿಯ ದಾಗಿದೆ ಎಂದು ನುಡಿದರು.
ವಿ, ಎಚ್, ಪಿ ತಾಲೂಕಾ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸಿ ಬಿ ಗಣಾಚಾರಿ, ಕಾಶೀನಾಥ ಬಿರಾದಾರ, ಈಶ್ವರ ಹೋಟಿ, ಬಿ, ಅಯ್ ಸಂಕನ್ನವರ, ಶಂಕರ ಯರಗಟ್ಟಿ, ಮಹಾಂತೇಶ ಹಿರೇಮಠ, ರಾಜು ಬಡಿಗೇರ, ಎಸ್ , ಜಿ, ಹಿರೇಮಠ, ಹೇಮಂತ
ಅರವಟಗಿಮಠ, ಗಿರೀಶ ಹರಕುಣಿ, ಸಚೀನ ಚೀಲದ, ಹಿರೇಮಠ ಹಾಗೂ ಸಾಲಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾ£ಸಲಾಯಿತು. ವಿ, ಎಚ್ , ಪಿಯ ವಿವೇಕ ಪೂಜೇರ, ದಯಾನಂದ ಗೆಜ್ಜಿ, ಅಶೋಕ ಸವದತ್ತಿ,, ಉಮೇಶ ಹಿರೇಮಠ, ಮಲ್ಲಿಕಾರ್ಜುನ ಎನಗಿಮಠ, ಸುದರ್ಶನ ಉಪಾದ್ಯೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಹಾಲಿಂಗ ಬಂಡಿವಡ್ಡರ ಸ್ವಾಗತಿಸಿದರು, ರಾಜು ಬಡಿಗೇರ ವಂದಿಸಿದರು.


Leave a Reply