Belagavi

ಬೆಳಕಾಯಿತು ಬಾಗಲಕೋಟೆ ಖ್ಯಾತಿಯ ಡಾ.ಪ್ರಕಾಶ ಖಾಡೆ ಅವರಿಗೆ ಸನ್ಮಾನ


ಬೈಲಹೊಂಗಲ ೧೩: ಇಂದಿಗೆ ೧೨೭ ಅತ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿ ಇನ್ನೂ ತೀರದ ಜ್ಞಾನದ ಹಸಿವನ್ನು ನೀಗಿಸಲು ಸರಣಿಯೋಪಾದಿಯಲ್ಲಿ ದಾಪುಗಾಲಿಕ್ಕುತ್ತಿರುವುದು ಡಾ. ಪ್ರಕಾಶ ಖಾಡೆಯವರ ಅಂತಃಸತ್ವದಲ್ಲಿ ಅಡಗಿರುವ ಉತ್ಸಾಹವನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ ಬಸನಗೌಡ ಪಾಟೀಲ ಅವರು ಹೇಳಿದರು.
ಕೇಂದ್ರ ಬಸವ ಸಮಿತಿ ಹಾಗೂ ಸಂಭ್ರಮ ಫೌಂಡೇಶನ್ ವತಿಯಿಂದ ‘ಬೆಳಕಾಯಿತು ಬಾಗಲಕೋಟೆ’ ಫೇಸ್‌ಬುಕ್ ಲೈವ್ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿ ಮನೆಮಾತಾದ ಡಾ. ಪ್ರಕಾಶ ಖಾಡೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಒಂದೊAದು ಕಾರ್ಯಕ್ರಮಕ್ಕೂ ವಿಭಿನ್ನವಾದ ವಿಷಯ ವಸ್ತುಗಳು ಅದರಂತೆ ನಾಡಿನಾದ್ಯಂತ ವಿಶೇಷ ಪರಿಣಿತಿ ಹೊಂದಿದAತಹ ಸಂಪನ್ಮೂಲ ವ್ಯಕ್ತಿಗಳು, ಸಾಹಿತಿಗಳು ತಮ್ಮ ಜ್ಞಾನ ಸುಧೆಯನ್ನು ಪಸರಿಸುವ ಕಾರ್ಯ ಖಾಡೆಯವರ ಸಾರಥ್ಯದಲ್ಲಿ ನಿರಂತರವಾಗಿ ಸಾಗುತ್ತಿರುವುದು ಅಭಿನಂದನಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
ಸಂಭ್ರಮ ಫೌಂಡೇಶನ್‌ದ ಅಧ್ಯಕ್ಷ ಕಿರಣ ಗಣಾಚಾರಿ ಮಾತನಾಡಿ ಆರಂಭದಲ್ಲಿ ಸ್ವಲ್ಪವೇ ಜನರನ್ನು ತಲುಪುತ್ತಿದ್ದ ಖಾಡೆಯವರ ಈ ವಿಶಿಷ್ಟ ಕಾರ್ಯಕ್ರಮ ಇಂದು ಟಿವಿಯಲ್ಲಿ ಬರುವ ಧಾರಾವಾಹಿಗಳಂತೆ ಧಾರಾಳವಾಗಿ ಹರಿಯುವ ಹಾಗೂ ಜನಮೆಚ್ಚಿದ ಕಾರ್ಯಸರಣಿಯಾಗಿದೆ ಎಂದರು. ವಿನೂತನ ವಿಷಯಗಳನ್ನು ಹೊತ್ತು ಕಾರ್ಯಕ್ರಮದ ವೇಳಾಪಟ್ಟಿ ಪ್ರಕಟವಾದಾಗ ರಸದೌತಣ ಸವಿಯಲು ಜಾತಕ ಪಕ್ಷಿಗಳಂತೆ ಕಾದು ನೋಡುವ ಸರದಿ ಎಲ್ಲ ಶ್ರೋತೃಗಳದ್ದಾಗಿರುತ್ತದೆ ಎಂದು ಅವರು ಹೇಳಿದರು.
ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಕೊರೊನ ಕಾಲಘಟ್ಟದಲ್ಲಿ ಜಗತ್ತಿನೆಲ್ಲೆಡೆ ಇರುವ ಕನ್ನಡಿಗರಿಗೆ ಅಖಂಡ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸಾಧಕರ ಪರಿಚಯ ಮಾಡಿಕೊಟ್ಟದ್ದು ಅಭಿನಂದನೀಯ ಕಾರ್ಯ ಎಂದು ಹೇಳಿದರು. ಪ್ರಬುದ್ಧ ಸಾಹಿತಿಗಳಾದ ಡಾ. ಪ್ರಕಾಶ ಖಾಡೆಯವರ ಈಗಾಗಲೇ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದು ಅವರ ಪ್ರಯತ್ನ ಮತ್ತು ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಡಂಗಿ ಉಪಸ್ಥಿತರಿದ್ದರು.


Leave a Reply