Koppal

ಗಂಗಾವತಿ ಹಿಂದು ಜಾಗರಣ ವೇದಿಕೆ ಯಿಂದ ಅಕ್ರಮ ಕಸಾಯಿಖಾನೆ ತೆರವುಗೊಳಿಸಿ


ಗಂಗಾವತಿ

:ಗಂಗಾವತಿ ಹಿಂದು ಜಾಗರಣ ವೇದಿಕೆಯಿಂದ ಅಕ್ರಮ ಕಸಾಯಿಖಾನೆ ತೆರವು ಗೊಳಿಸಲು ನಿರ್ಲಕ್ಷ್ಯವಹಿಸಿದ ನಗರಸಭೆಗೆ ಮುತ್ತಿಗೆ ಹಾಕಿದರು

ಶ್ರೀಕಾಂತ್ ಹೇರೂರು ಅವರು ಮಾತನಾಡಿದರು ಗಂಗಾವತಿ ನಗರದ 2 ಕಡೆ ಅಕ್ರಮ ಕಸಾಯಿಖಾನೆಗಳಿಗೆ ಗಂಗಾವತಿ ನಗರದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ಮಾಡಿದಾಗ 2ಕಡೆ ಅಕ್ರಮ ಕಸಾಯಿಖಾನೆಯಲ್ಲಿ ಗೋ ಹತ್ಯೆ ಮಾಡಿರುವುದನ್ನು ಗಮನಿಸಿದ್ದೇನೆ

ಈ ಹಿಂದೆ 5 ನೇ ತಿಂಗಳು 20 ನೇ ತಾರೀಕಿನಲ್ಲಿ 24 ಗೋ ವನ್ನು ರಕ್ಷಣೆ ಮಾಡಿದ್ದೇವೆ ಅದರಲ್ಲಿ ಕಸಾಯಿಖಾನೆಯಲ್ಲಿ 6 ಗೋ ಹತ್ಯೆ ಮಾಡಿರುವುದನ್ನು ತಹಸೀಲ್ದಾರ್ ಪೊಲೀಸ್ ಅಧಿಕಾರಿಗಳು ನಗರಸಭೆ ಕಮಿಷನರ್ ಎಲ್ಲರೂ ಗಮನಿಸಿದ್ದಾರೆ ಈ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ

2020 ರ ಆ್ಯಕ್ಟ್ ಪ್ರಕಾರ ಕಸಾಯಿಖಾನೆ ಆ ಕಸಾಯಿಖಾನೆಗಳನ್ನು ತಕ್ಷಣ ನಗರಸಭೆ ತನ್ನ ವ್ಯಾಪ್ತಿಗೆ ತೆಗೆದುಕೊಂಡು ಮತ್ತು ಯಾರು ನಡೆಸುತ್ತಾರೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು

ನಗರಸಭೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಮಾನದಲ್ಲಿ ಗಂಗಾವತಿ ನಗರದಲ್ಲಿ ಹಿಂದು ಜಾಗರಣ ವೇದಿಕೆ ಉಗ್ರ ಹೋರಾಟ ಮಾಡುತ್ತೇವೆ ಇದು ನಗರಸಭೆಗೆ ಎಚ್ಚರಿಕೆ

ಈ ಸಂದರ್ಭದಲ್ಲಿ ಅಯ್ಯನಗೌಡ ಹೇರೂರು ..ನೀಲಕಂಠಪ್ಪ ನಾಗಶೆಟ್ಟಿ. ಶ್ರೀಕಾಂತ್ ಹೊಸ್ಕೇರಾ. ರವೀಂದ್ರ ಹುಲಿಗೇರಿ .ಶಿವು ಲಕ್ಷ್ಮಿಕ್ಯಾಂಪ್ .ಚಂದ್ರಶೇಖರ್ ಹಿರೇಮಠ್ ದೊಡ್ಡಯ್ಯಸ್ವಾಮಿ ಅನ್ವಾಳ ವೀರೇಶ ಹನುಮಂತರೆಡ್ಡಿ ಹಾಗೂ ಇನ್ನೂ ಅನೇಕ ಯುವಕರ ಇದ್ದರು ..

ಗಂಗಾವತಿ ವರದಿಗಾರ
(ಹನುಮೇಶ ಬಟಾರಿ)


Leave a Reply