Koppal

ಬ್ಯಾಂಕ್ ‌ನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆ ಕೊಡಲು ಒತ್ತಾಯ


ಕುಷ್ಟಗಿ:ಭಾರತದ ಒಕ್ಕೂಟದ ಸರಕಾರವು ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ನಮ್ಮ ತೆರಿಗೆ ಹಣದಲ್ಲಿ “ಹಿಂದಿ ದಿವಸ” ಆಚರಣೆ ನಡೆಸುತ್ತಾ ಬಂದಿದೆ. ಕೇವಲ ಹಿಂದಿ ದಿವಸವೊಂದು ಆಚರಿಸುವ ಮೂಲಕ ದೇಶದ ಎಲ್ಲಾ ಭಾಷೆಗಳನ್ನು ಕಡೆಗಣಿಸಿ ಹಿಂದಿಯೊಂದನ್ನೇ ಪ್ರತಿವರ್ಷ ಮೆರೆಸುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ನಾರಾಯಣಗೌಡರ ನೇತೃತ್ವದಲ್ಲಿರುವ ಇದನ್ನು ಇಪ್ಪತ್ತು ವರ್ಷದಿಂದಲೂ ತೀವ್ರವಾಗಿ ವೀರೋಧಿಸುತ್ತಾ ಬಂದಿದೆ. ಹಾಗಾಗಿ ಈವರ್ಷವು ಕೂಡ ಸೆಪ್ಟೆಂಬರ್14 ರಂದು ರಾಜ್ಯದ ಎಲ್ಲಾ ಜಿಲ್ಲೆ,ತಾಲೂಕ,ಹೋಬಳಿ,ಮತ್ತು ಹಳ್ಳಿಗಳಲ್ಲಿ, ರಾಷ್ಟ್ರೀಕೃತ , ಗ್ರಾಮೀಣ ಬ್ಯಾಂಕ್ ಗಳ ಮುಂಭಾಗ ಸಾವಿರಾರು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ತಮ್ಮ ಬ್ಯಾಂಕ್ ಮುಂದೆಯೂ ಪ್ರತಿಭಟನೆ ನಡೆಸುತ್ತಿದ್ದೇವೆ.

ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಕೇಳಿಬರುತ್ತಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದೆಗೆಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಹಿಂದಿ ಹೇರಿಕೆಯ ಈ ಅನ್ಯಾಯಗಳನ್ನು ಗ್ರಾಹಕರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

1) ಬ್ಯಾಂಕಿನಲ್ಲಿ ಸೇವೆಗಳನ್ನು ಕನ್ನಡದಲ್ಲಿ ನೀಡಬೇಕು.ಕನ್ನಡ ದಲ್ಲೇ ಬ್ಯಾಂಕ್ ನ ವ್ಯವಹಾರ ನಡೆಸಲು ಸುಲಭವಾಗುವಂತೆ ಕರ್ನಾಟಕ ದವರನ್ನೇ ಬ್ಯಾಂಕ್ ನ ಉದ್ಯೋಗಿಗಳನ್ನಾಗಿ ನೇಮಿಸಬೇಕು.

2)ಕನ್ನಡ ಬಾರದ ಸಿಬ್ಬಂದಿಗಳನ್ನು ಈ ಕೂಡಲೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಲಭಿಸಬೇಕು.

3)ಚಲನ್ ಗಳು,ಖಾತೆ ಪುಸ್ತಕ,ಚೆಕ್,ಮತ್ತು ಎಲ್ಲಾ ಅರ್ಜಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು.

4)ಹಿಂದೀ ದಿವಸ ಹಿಂದಿ ಸಪ್ತಾಹ ,ಭಾಷಾ ವಿರೋಧಿ ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು ಇನ್ನು ಮುಂದೆ ಆಚರಣೆಗಳನ್ನು ನಿಲ್ಲಿಸಬೇಕು.ಇನ್ನು ಮುಂದೆ ಈ ಆಚರಣೆಗಳು ನಮ್ಮ ಬ್ಯಾಂಕ್ ನಲ್ಲಿ ನಡೆಯಬಾರದು.

5)ಬ್ಯಾಂಕಿನ ನಾಮಫಲಕ ಸೂಚನಾ ಫಲಕಗಳಲ್ಲಿ ಶೇಕಡಾ 60 ರಷ್ಟು ಭಾಗ ಕನ್ನಡ ಭಾಷೆ ಬಳಸಬೇಕು.
ಹೀಗೆ ಹಲವಾರು ರೀತಿಯ ಸಮಸ್ಯೆ ಆಗುತ್ತಿರುವ ನಮ್ಮ ಕನ್ನಡ ಭಾಷೆಗೆ ಅನ್ಯಾಯ ವಾಗದಂತೆ ನೋಡಿ ಕೊಳ್ಳುವುದು ಬ್ಯಾಂಕ್ ನವರ ಕರ್ತವ್ಯ. ಎಂದು ಜಾಹೀದ್ ಕರವೇ ಅಧ್ಯಕ್ಷರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾದ ಬಸವರಾಜ, ಕರವೇ ಮುಖಂಡರಾದ ಮುತ್ತಪ್ಪ,ಪರಶುರಾಮ,ಶಿವಾನಂದ ಗೊಲ್ಲರ್,ಮುತ್ತಣ್ಣ ವಿ ಬರಗೂರು,ಶರಣಪ್ಪ ಕಾಟಾಪೂರ,ಬಸವರಾಜ ಮಲ್ಕಾಪೂರ,ಪರಸಪ್ಪ ಅಳ್ಳಳ್ಳಿ,ಶೇಖಪ್ಪಬ್ಯಾಳಿ,ಶಶಿಧರ ನಾಯಕ,ಚಂದ್ರಪ್ಪ,ಮನೋಹರ ಬಡಿಗೇರ,ಮಲ್ಲಿಕಾರ್ಜುನ ಶಾಡಲಗೇರಿ,ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply