Koppal

ಕುಷ್ಟಗಿ ಎಪಿಎಮ್ ಸಿ ಅಧ್ಯಕ್ಷರ ಚುನಾವಣೆ


 

ಕುಷ್ಟಗಿ:  ಸೆಪ್ಟಂಬರ್ 14 ರಂದು ಕುಷ್ಟಗಿ ಪಟ್ಟಣದ ಎಪಿಎಂಸಿ ಯಲ್ಲಿ ನಡೆದ ಚುನಾವಣೆಯಲ್ಲಿ ಹನುಮಂತಪ್ಪ ಬಿಂಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಕುಷ್ಟಗಿ ತಾಲೂಕ ದಂಡಾಧಿಕಾರಿಗಳಾದ ಎಂ ಸಿದ್ದೇಶ್ ಅವರು ತಿಳಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹನುಮಂತಪ್ಪ ಬಿಂಗಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ನೂತನ ಅಧ್ಯಕ್ಷರಾದ ಹನುಮಂತಪ್ಪ ಬಿಂಗಿ ಅವರು ಮಾತನಾಡಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ಹಿರಿಯರಾದ ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರಿಗೆ , ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು ಅವರಿಗೆ ಮತ್ತು ನನ್ನ ಆಯ್ಕೆಗೆ ಸಹಕರಿಸಿದ ಎಪಿಎಂಸಿಯ ಎಲ್ಲ ಸದಸ್ಯರುಗಳಿಗೂ ಮತ್ತು ನಿರ್ದೇಶಕರುಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಬಿಜೆಪಿ ತಾಲೂಕ ಅಧ್ಯಕ್ಷರಾದ ಬಸವರಾಜ ಹಳ್ಳೂರ ಅವರು ಮಾತನಾಡಿ ಎಪಿಎಂಸಿಯಲ್ಲಿ ಬರುವ ಯೋಜನೆಗಳನ್ನು ಎಲ್ಲ ರೈತರಿಗೆ ಸರಿಯಾಗಿ ಮುಟ್ಟಿಸುವ ಜವಾಬ್ದಾರಿ ನೂತನ ಎಪಿಎಂಸಿ ಅಧ್ಯಕ್ಷರ ಮೇಲಿದ್ದು ಅದನ್ನು ಸರಿಯಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ನಮಗಿದೆ ಅಲ್ಲದೆ ಇದು ಕೊನೆ ಅವಧಿಯಾಗಿದ್ದು ಈ ಒಂದು ಅವಧಿಗೆ ಅಧ್ಯಕ್ಷರನ್ನಾಗಿ ಹನುಮಂತಪ್ಪ ಬಿಂಗಿ ಅವರನ್ನು ಎಲ್ಲಾ ಸದಸ್ಯರುಗಳು ಮತ್ತು ಮಾಜಿ ಶಾಸಕರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ದೊಡ್ಡಗೌಡ.ಎಚ್. ಪಾಟೀಲ್ ಅವರಿಗೂ ಮತ್ತು ಮಾಜಿ ಶಾಸಕರಾದ ಶರಣಪ್ಪ ವಕೀಲರು ಅವರಿಗೂ ಮತ್ತು ಪಕ್ಷದ ಎಲ್ಲಾ ಮುಖಂಡರುಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಮುಂಜಾಗೃತಾ ಕ್ರಮವಾಗಿ ಚುನಾವಣೆ ನಡೆಯುವ ಸ್ಥಳದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಚಂದ್ರಕಾಂತ ವಡಿಗೇರಿ , ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ ಬಿಜೆಪಿ ಮುಖಂಡರುಗಳಾದ ಮಲ್ಲಣ್ಣ ಪಲ್ಲೆದ, ವಿಜಯ್ ಕುಮಾರ್ ಹಿರೇಮಠ, ಸಂಗನಗೌಡ ಜೈನರ, ಪ್ರಭು ಶಂಕರಗೌಡ ಪಾಟೀಲ್, ಶರಣಪ್ಪ ಚೂರಿ ಶರದಂತೆ ಹಲವರು ಉಪಸ್ಥಿತರಿದ್ದರು

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply