Belagavi

ಭರತೇಶ ಶಿಕ್ಷಣ ಸಂಸ್ಥೆಯ ಚೇರ್ಮನ್ನರಾಗಿ ಡಾ. ಜಿನದತ್ತ ದೇಸಾಯಿ


ಬೆಳಗಾವಿ ೧೫- ಹಿರಿಯ ಕವಿ,£ವೃತ್ತ ಜಿಲ್ಲಾ ನ್ಯಾಯಾಧೀಶ , ಹಿಂದಿನ ಲೋಕ ಅದಾಲತ್ ಚೇರ್ಮನ್ ಶ್ರೀ ಜಿನದತ್ತ ದೇಸಾಯಿಯವರು ಬೆಳಗಾವಿಯ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಭರತೇಶ ಶಿಕ್ಷಣ ಸಂಸ್ಥೆಯ ಚೇರ್ಮನ್ನರಾಗಿ ಆಯ್ಕೆಗೊಂಡಿದ್ದಾರೆ.
ಈಗ ತಮ್ಮ ತೊಂಬತ್ತನೆಯ ಹರೆಯದಲ್ಲಿರುವ ಜಿನದತ್ತರು ಈವರೆಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಅದರ ಏಳ್ಗೆಯಲ್ಲಿ ಬಹಳ ಮಹತ್ವದ ಪಾತ್ರ £ರ್ವಹಿಸಿದ್ದಾರೆ. ಪ್ರತಿವರ್ಷ ಪ್ರಜಾರಾಜ್ಯೋತ್ಸವದ £ಮಿತ್ತ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಏರ್ಪಡಿಸುವದು, ಹಂಪಿ ಕನ್ನಡ ವಿವಿ ಸಹಕಾರದೊಡನೆ ಮಹಾನ್ ಸಂಶೋಧಕ ಡಾ. ಆ. ನೆ. ಉಪಾಧ್ಯೆ ವಿಸ್ತರಣಾ ಕೇಂದ್ರ ಸ್ಥಾಪನೆ ಮೊದಲಾದವು ಇದಕ್ಕೆ ಉದಾಹರಣೆಯಾಗಿವೆ.
ಕನ್ನಡದ ಚುಟುಕು ಕಾವ್ಯಕ್ಷೇತ್ರದಲ್ಲಿ ಅವರ ಹೆಸರು ಪ್ರಮುಖವಾದುದಾಗಿದೆ. ಅವರ ಸಾವಿರ ಚುಟುಕುಗಳ ಸಂಕಲನ “ಸಹಸ್ರಚಂದ್ರ” ಎಂಬ ಹೆಸರಲ್ಲಿ ಅವರ ೮೦ ನೇ ವರ್ಷದಲ್ಲಿ ಪ್ರಕಟಗೊಂಡಿದೆ.ಅವರ ಹದಿನೈದಕ್ಕೂ ಹೆಚ್ಚು ಕವನ,/ ಹ£ಗವನ ಸಂಕಲನಗಳು ಪ್ರಕಟಗೊಂಡಿದ್ದು ಜಿಲ್ಲಾ ಅಂಧ ಮಕ್ಕಳ ಮಾಹೇಶ್ವರಿ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ.
ಹಿರಿಯ ಕವಿ ಜಿನದತ್ತ ದೇಸಾಯಿ ಅವರನ್ನು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತ, ಹಾಸ್ಯಕೂಟ ಹಾಗೂ ಜಿಲ್ಲೆಯ ಸಾಹಿತ್ಯ ಬಳಗ ಇವರನ್ನು ಅಭಿನಂದಿಸಿವೆ.


Leave a Reply