Belagavi

ಸೆ.೧೭ ರಂದು ಕೋವಿಡ್-೧೯ ಉಚಿತ ಲಸಿಕಾಕರಣದ ಮೇಳ


ವಿಜಯಪುರ :ಸೆ.೧೫ (ಕ.ವಾ) : ಕೋವಿಡ್-೧೯ ಉಚಿತ ಲಸಿಕಾಕರಣದ ಮೇಳವನ್ನು ದಿನಾಂಕ: ೧೭-೦೯-೨೦೨೧ ರಂದು ಹಮ್ಮಿಕೊಂಡು ಜಿಲ್ಲೆಯಲ್ಲಿ ೧ ಲಕ್ಷ ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ಯಶಸ್ವಿಗೊಳಿಸಲು ಸರ್ಕಾರದ ನಿರ್ದೇಶನವಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬAಧಪಟ್ಟAತೆ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ದಿನಾಂಕ:೧೪-೦೯-೨೦೨೧ ರಂದು ವಿಡಿಯೋ ಸಂವಾದ ಸಭೆ ಜರುಗಿಸಿ ಈ ಉಚಿತ ಲಸಿಕಾಕರಣದ ಮೇಳದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಪಲಾನುಭವಿಗಳಿಗೆ ಲಸಿಕೆ ನೀಡುವಲ್ಲಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿರುತ್ತಾರೆ.
ಉಚಿತ ಲಸಿಕಾಕರಣ ಮೇಳದ ಪೂರ್ವ ತಯಾರಿ:
ವಿಜಯಪುರ ಜಿಲ್ಲೆಯಲ್ಲಿ ದಿನಾಂಕ:೧೭-೦೯-೨೦೨೧ ರಂದು ಕೋವಿಡ್-೧೯ ಉಚಿತ ಲಕ್ಷ ಲಸಿಕಾಕರಣದ ಮೇಳವನ್ನು ಯಶಸ್ವಿಗೊಳಿಸುವ ನಿಟ್ಟನಲ್ಲಿ ಸದರಿ ಉಚಿತ ಲಸಿಕಾಕರಣದ ಮೇಳದ ದಿನದಂದು ಜಿಲ್ಲೆಯಲ್ಲಿ ಒಟ್ಟು ೫೪೭ ಸ್ಥಳಗಳಲ್ಲಿ ಲಸಿಕೆಯನ್ನು ನೀಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ. ತಾಲ್ಲೂಕು / ನಗರ ಕೇಂದ್ರಗಳ ವಿವರ ಈ ಕೆಳಗಿನಂತಿರುತ್ತದೆ.
ವಿಜಯಪುರ ನಗರದಲ್ಲಿ ಲಸಿಕಾಕರಣದ ಕೇಂದ್ರಗಳ ಸಂಖ್ಯೆ : ೬೬, ವಿಜಯಪುರ ಗ್ರಾಮೀಣ : ೧೧೬, ಬ.ಬಾಗೇವಾಡಿಯಲ್ಲಿ ೯೫, ಮುದ್ದೇಬಿಹಾಳದಲ್ಲಿ ೮೪, ಇಂಡಿಯಲ್ಲಿ ೯೪, ಸಿಂದಗಿಯಲ್ಲಿ ೯೨ ಕೇಂದ್ರಗಳಿವೆ.
ಈ ದಿನದಂದು ಬೆಳಿಗ್ಗೆ ೭.೦೦ ಗಂಟೆಯಿAದ ರಾತ್ರಿಯವೆರಗೂ ಸದರಿ ಲಸಿಕಾಕರಣ ಕೇಂದ್ರದಲ್ಲಿ ೧೮ ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಉಚಿತ ಲಸಿಕೆಯನ್ನು ನೀಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ.
ಅದರಂತೆ, ದಿನಾಂಕ:೧೪-೦೯-೨೦೨೧ ರಂದು ಲಸಿಕಾಕರಣ ಸಂಬAಧಪಟ್ಟAತೆ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಾಧ ಆರೋಗ್ಯ , ಕಂದಾಯ , ಪಂಚಾಯತ್ ರಾಜ್ ಇಲಾಖೆ, ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಲಸಿಕಾಕರಣ ನೋಡಲ್ ಅಧಿಕಾರಿಗಳಿಗೆ ವಿಡಿಯೋ ಸಂವಾದ ಸಭೆ ಜರುಗಿಸಿ, ಪ್ರಸ್ತುತ ಉಚಿತ ಲಸಿಕಾಕರಣ ಸಂಬAಧಟ್ಟAತೆ ಅವರ ವ್ಯಾಪ್ತಿಯಲ್ಲಿ ಬರುವ ನಗರ / ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಚಾರ ಮಾಡುವ ಬಗ್ಗೆ ನಿರ್ದೇಶನ ನೀಡಲಾಗಿರುತ್ತದೆ. ಅದೇ ರೀತಿ ಉಪವಿಭಾಗ / ತಾಲ್ಲೂಕಿನ ಸಂಪೂರ್ಣ ಮೇಲ್ವಿಚಾರಣೆ ವಹಿಸಲು ಕ್ರಮವಾಗಿ ಆಯಾ ಉಪ ವಿಬಾಗಾಧಿಕಾರಿಗಳಿಗೆ / ತಹಶೀಲ್ದಾರರಿಗೆ ಸೂಚಿಸಲಾಗಿರುತ್ತದೆ. ಲಕ್ಷ ಲಸಿಕಾಕರಣ ಮೇಳಕ್ಕೆ ಈ ಕೆಳಗಿನಂತೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿರುತ್ತದೆ.
ಲಸಿಕೆಗಳನ್ನು ಹಾಗೂ ಲಸಿಕೆ ಹಾಕುವವರನ್ನು ಎಲ್ಲ ಲಸಿಕಾಕರಣ ಕೇಂದ್ರಗಳಿಗೆ ತಲುಪಿಸುವ ಬಗ್ಗೆ ಅಗತ್ಯ ವಾಹನ ವ್ಯವಸ್ಥೆ ಮಾಡಲಾಗಿದೆ.ಸ್ಥಾಪಿಸಲಾದ ಒಟ್ಟು ೫೪೭ ಉಚಿತ ಲಸಿಕಾಕರಣ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ವಿಜಯಪುರ ನಗರ ಬಿ.ಎಲ್.ಡಿ.ಈ ಹಾಗೂ ಆಲ್ ಅಮೀನ್ ಆಸ್ಪತ್ರೆ ಗಳಲ್ಲಿ ಸಹ ಜಿಲ್ಲಾಡಳಿತದಿಂದ ಉಚಿತ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಅಜೀಂ ಪ್ರೇಮ್ ಜೀ ಪೌಂಡೇಶನ್ ಪಾರ್ ಡೆವೆಲಪ್‌ಮೆಂಟ ಬೆಂಗಳೂರು ಹಾಗೂ ಸಂಭವ ಪೌಂಡೇಶನ್ ಬೆಂಗಳೂರು ಇವರು ಸದರಿ ದಿನದಂದು ಅವಶ್ಯಕತೆಗನುಗುಣವಾಗಿ ಮಾನವ ಸಂಪನ್ಮೂಲ ಒದಗಿಸಲು ಒಪ್ಪಿರುತ್ತಾರೆ.
ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ಬಿಲ್ ಕಲೆಕ್ಟರ್, ಗ್ರಾಮ ಲೆಕ್ಕಾಧಿಕಾರಿಗಳು ಒಳಗೊಂಡAತೆ ಮನೆ ಮನೆ ಭೇಟಿ ನೀಡಿ ಮೊದಲನೇ ಡೋಜ್ ಹಾಗೂ ಎರಡನೇ ಡೋಜ್ ಗೆ ಬಾಕಿ ಇರುವ (ಆue ಈoಡಿ ೨ಟಿಜ ಆose) ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅರಿವು ಮೂಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿರುತ್ತದೆ. ಇದರ ಜೊತೆಗೆ ಡಂಗುರ ಹಾಗೂ ಮೈಕ್ ಮೂಲಕ ಪ್ರಚಾರ ಮಾಡಲು ಸಂಬAಧಪಟ್ಟ ಇಲಾಖೆಗಳಿಗೆ ತಿಳಿಸಲಾಗಿರುತ್ತದೆ.
ದಿನಾಂಕ:೧೫-೦೯-೨೦೨೧ ರಂದು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ವಿಜಯಪುರ ಇವರು ದೇಹಿಪ್ಪರಗಿ( ಸಿಂದಗಿ & ದೇ.ಹಿಪ್ಪರಗಿ ತಾಲ್ಲೂಕು ಸಂಬAಧಪಟ್ಟAತೆ) ಹಾಗೂ ತಾಳಿಕೋಟಿ ( ತಾಳಿಕೋಟಿ & ಮುದ್ದೇಬಿಹಾಳ ತಾಲ್ಲೂಕು ಸಂಬAಧಪಟ್ಟAತೆ ) ಭೇಟಿ ನೀಡಿ ಲಸಿಕಾಕರಣಕ್ಕೆ ಸಂಬAಧಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳ ಜೊತೆ ಸಭೆ ಜರುಗಿಸಿ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸೂಚಿಸಿರುತ್ತಾರೆ. ಅದೇ ರೀತಿ ಬ.ಬಾಗೇವಾಡಿ ( ಬ.ಬಾಗೇವಾಡಿ, ಕೋಲ್ಹಾರ & ನಿಡಗುಂದಿ ತಾಲ್ಲೂಕು ಸಂಬAಧಪಟ್ಟAತೆ) ಇಂದು ಸಾಯಂಕಾಲ ಭೇಟಿ ನೀಡಿ ಲಸಿಕಾಕರಣಕ್ಕೆ ಸಂಬAಧಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳ ಜೊತೆ ಸಭೆ ಜರುಗಿಸಿ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ ಹಾಗೂ ದಿನಾಂಕ:೧೬-೦೯-೨೦೨೧ ರಂದು ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಜಯಪುರ, ತಿಕೋಟಾ ಮತ್ತು ಬಬಲೇಶ್ವರ ತಾಲ್ಲೂಕುಗಳ ಲಸಿಕಾಕರಣಕ್ಕೆ ಸಂಬAಧಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳ ಜೊತೆ ಸಭೆ ಜರುಗಿಸಿ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ
ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-೧೯ ಉಚಿತ ಲಸಿಕಾಕರಣದ ಮೇಳವನ್ನು ದಿನಾಂಕ:೧೭-೦೯-೨೦೨೧ ಮೇಳವನ್ನು ಜಿಲ್ಲಾ ಆಸ್ಪತ್ರೆ, ತಾಲ್ಲೂಕಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸ್ಥಾಪಿಸಲಾದ ಕೋವಿಡ್ ಲಸಿಕಾಕರಣ ಕೇಂದ್ರದಲ್ಲಿ ಆಯೋಜಿಸಿದ್ದು, ಸಂಭವನೀಯ ಕೋವಿಡ್-೧೯ ೩ನೇ ಅಲೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಲಸಿಕಾಕರಣಕ್ಕೆ ಮೊದಲನೇ ಡೋಜ್ ಹಾಗೂ ಎರಡನೇ ಡೋಜ್ ಗೆ ಬಾಕಿ ಇರುವ (ಆue ಈoಡಿ ೨ಟಿಜ ಆose) ಅರ್ಹ ಫಲಾನುಭವಿಗಳು ಅವರ ಸಮೀಪದ ಆರೋಗ್ಯ ಕೇಂದ್ರ / ಕೋವಿಡ್ ಲಸಿಕಾಕರಣ ಕೇಂದ್ರದಲ್ಲಿ ಲಸಿಕೆಯನ್ನು ಪಡೆದುಕೊಳ್ಳಬೇಕು.
ಜಿಲ್ಲೆಯಲ್ಲಿ ೩ನೇ ಸಂಭವನೀಯ ಅಲೆಯ ತಜ್ಞರ ಅಭಿಪ್ರಾಯದಂತೆ ಸಪ್ಟೆಂಬರ್/ಅಕ್ಟೋಬರ್ ಮಾಹೆಯಲ್ಲಿ ಸಂಭವನೀಯ ಕೋವಿಡ್-೧೯ ೩ನೇ ಅಲೆ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಒಟ್ಟಾರೆ ಮೊದಲನೇ ಡೋಸ್ ಪಡೆಯಲು ಬಾಕಿ ಇರುವ ಅರ್ಹ ಫಲಾನುಭವಿಗಳು ಹಾಗೂ ಎರಡನೇ ಡೋಸ್ ಸಂಬAಧಪಟ್ಟAತೆ ಅವಧಿ ಮುಗಿದ (ಆue ಈoಡಿ ೨ಟಿಜ ಆose) ಅರ್ಹವಿರುವ ಫಲಾನುಭವಿಗಳು ಅವರ ಸಮೀಪದ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Leave a Reply