Belagavi

ದುರ್ಗಾದೇವಿ  ದೇವಸ್ಥಾನದಲ್ಲಿ  ಮೂಕ  ದಂಪತಿಗಳಿಗೆ  ಸನ್ಮಾನ


ಬೈಲಹೊಂಗಲ 16 – ಇಲ್ಲಿಯ ಮುರುಗೋಡ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನೂತನ ಮೂಕ ದಂಪತಿಗಳನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಪಟ್ಟಣದ ಕಿವುಡ ಮತ್ತು ಮೂಕರ ಸಂಘದ ತಾಲೂಕಾ  ಅಧ್ಯಕ್ಷರಾಗಿರುವ ಮಹೇಶ ಹಾಗೂ ಮೇಘಾ  ಇವರು ಕಳೆದ ತಿಂಗಳು ಮದುವೆಯಾಗಿದ್ದರು. ಈ ದಂಪತಿಗಳನ್ನು ದುರ್ಗಾದೇವಿ ದೇವಸ್ಥಾನದ ವತಿಯಿಂದ  ದೇವಿಯ ಆರಾಧಕ ವೇದಮೂರ್ತಿ ಡಾ. ಮಹಾಂತೇಶ  ಶಾಸ್ತ್ರಿಗಳು ಸನ್ಮಾನಿಸಿ ನೂತನ ದಂಪತಿಗಳ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆತು ಉತ್ತಮ ಭವಿಷ್ಯ ಹೊಂದಿ ಉತ್ತಮ ಸಂಸ್ಕಾರದಿಂದ ಒಳ್ಳೆಯ ಬದುಕು ಸಾಗಿಸಲು  ದೇವಿ ಅನುಗ್ರಹಿಸಲಿ ಎಂದು ನೂತನ ದಂಪತಿಗಳಿಗೆ ಶುಭ ಹಾರೈಸಿದರು.

 


Leave a Reply