Belagavi

ಸೆಪ್ಟೆಂಬರ್ ಮಾಹೆಯ ಪಡಿತರಧಾನ್ಯ ಬಿಡುಗಡೆ


ಬೆಳಗಾವಿ, ಸೆ.೧೭ : ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ರಾಷ್ಟಿöçÃಯ ಆಹಾರ ಭದ್ರತಾ ಕಾಯ್ದೆ ಅನುಸಾರ ಸಾರ್ವಜನಿಕ ವಿತರಣಾ ಪದ್ಧತಿಯಡಿ ೨೦೨೧ರ ಸೆಪ್ಟೆಂಬರ್ ಮಾಹೆಯ ಧಾನ್ಯಗಳನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
ಕೋವಿಡ್-೧೯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂತ್ಯೋದಯ ಪಡಿತರ ಚೀಟಿ(ಓಈSಂ)ದಾರರಿಗೆ ಅಕ್ಕಿ ೩೫ ಕೆಜಿ, (Pಒಉಏಂಙ) ಪ್ರತಿ ಸದಸ್ಯರಿಗೆ ೫ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.
ಬಿಪಿಎಲ್(ಆದ್ಯತಾ) ಪಡಿತರ ಚೀಟಿ(ಓಈSಂ)ದಾರರಿಗೆ ಪ್ರತಿ ಸದಸ್ಯರಿಗೆ ೫ ಕೆಜಿ, (Pಒಉಏಂಙ) ಪ್ರತಿ ಸದಸ್ಯರಿಗೆ ೫ ಕೆಜಿ ಅಕ್ಕಿ, (ಓಈSಂ) ಪ್ರತಿ ಪಡಿತರ ಚೀಟಿಗೆ ೨ ಕೆಜಿ ಗೋಧಿಯನ್ನು ಉಚಿತವಾಗಿ ನೀಡಲಾಗುವುದು.
ಎಪಿಎಲ್ ಪಡಿತರ ಚೀಟಿ ಆದ್ಯತೇತರ ಒಪ್ಪಿಗೆ ನೀಡಿದ ಪಡಿತರ ಚೀಟಿಗೆ ಏಕ ಸದಸ್ಯನಿಗೆ ೫ ಕೆಜಿ ಅಕ್ಕಿ, ೨ ಮತ್ತು ಹೆಚ್ಚಿನ ಸದಸ್ಯರಿಗೆ ೧೦ ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ ೧೫ ರೂ.ಯಂತೆ ನೀಡಲಾಗುವುದು.
ಕೋವಿಡ್-೧೯ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಬೆಳಿಗ್ಗೆ ೭:೦೦ ಗಂಟೆಯಿAದ ರಾತ್ರಿ ೯:೦೦ ಗಂmಯವೆರೆಗೆೆ ತಿಂಗಳ ಅಂತ್ಯದವರೆಗೆ ಊಟದ ಸಮಯವನ್ನು ಹೊರತುಪಡಿಸಿ ಪಡಿತರ ವಿತರಣೆ ಕಾರ್ಯ ನಡೆಸಬೇಕು.
ಅಲ್ಲದೇ, ಪ್ರತಿ ಮಂಗಳವಾರ ರಜೆಯ ದಿನವನ್ನು ಹಿಂದೆ ಪಡೆದು, ರಾಷ್ಟಿöçÃಯ ರಜೆಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ಮಾಡುವಂತೆ ನ್ಯಾಯಬೆಲೆ ಅಂಗಡಿಕಾರರಿಗೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿAದ ತೊಂದರೆ ಉಂಟಾದಲ್ಲಿ, ೧೯೬೭ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ಪ್ರತಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ವಿತರಣೆ ಮಾಡಬಾರದು ಹಾಗೂ ಯಾವುದೇ ಕಾರಣಕ್ಕೂ ಪಡಿತರ ಚೀಟಿದಾರರಿಂದ ಇಂಟರ್ನೆಟ್ ಚಾರ್ಜರ್ಸ್ ವಸೂಲಿ ಮಾಡಿದ ದೂರು ಬಂದಲ್ಲಿ ಆಯಾ ತಾಲೂಕಿನ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೆ ನೇರ ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಂತರರಾಜ್ಯ/ಅAತರ ಜಿಲ್ಲೆ ಪೋರ್ಟೆಬಿಲಿಟಿ ಜಾರಿ ಇರುವುದರಿಂದ ಯಾವುದೇ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಸ್ತುಗಳನ್ನು ಪಡೆಯುವುದು ಕಡ್ಡಾಯವಾಗಿದೆ.


Leave a Reply