Belagavi

ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ


ಮೂಡಲಗಿ: ಅಖಿಲ ಭಾರತೀಯ ವಿದ್ಯಾರ್ಥಿ ಷರಿಷತ ಮೂಡಲಗಿ ಶಾಖೆಯಿಂದ ವಿದ್ಯಾರ್ಥಿಗಳ ಬಸ್ ಪಾಸ್, ಹಾಸ್ಟೆಲ್, ಗ್ರಾಮೀಣ ಭಾಗಗಳಿಗೆ ಬಸ್ ವ್ಯವಸ್ಥೆ, ಶಿಷ್ಯ ವೇತನಕ್ಕೆ ಸಂಬAಧಪಟ್ಟ ಸಮಸ್ಯೆಗಳನ್ನು ಈಡೇರಿಸುವಂತೆ ಮೂಡಲಗಿ ತಹಶೀಲ್ದಾರ ಕಾರ್ಯಲಯದ ಪ್ರಥಮ ದರ್ಜೆ ಸಹಾಯಕ ವಾಯ್.ಎಮ್. ಉದ್ದನ್ನವರ ಮುಖಾಂತರ ಸಿಎಂ ಬಸವರಾಜ ಬೋಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ಬೆಳಗಾವಿ ವಿಭಾಗ ಸಹ ಸಂಚಾಲಕ ಮಲ್ಲು ಮುಕುಂದ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ವ್ಯಾಪಿಸಲಾರಂಭಿಸಿದ ಬಳಿಕ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಈಗ ಹಂತಹAತವಾಗಿ ಪುನರಾರಂಭಗೊAಡಿವೆ. ಭೌತಿಕ ತರಗತಿಗಳು ಆರಂಭಗೊAಡ ಬಳಿಕ ಬಸ್ ಸಂಚಾರ, ಬಸ್ ಪಾಸ್ ಹೀಗೆ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ. ಆದರಿಂದ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳ ಹಿತ್ತದೃಷ್ಠಿಯಿಂದ ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳನ್ನು ಕೂಡಲೇ ಸರಿ ಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖ ಬಸವರಾಜ ಜೋಡಟ್ಟಿ, ಸಾಗರ ಕುರಣಗಿ, ಸೂರಜ ರಬಕವಿ, ಗುರು ಹಿರೇಮಠ, ಕಿರಣ ಢವಳೇಶ್ವರ ಹಾಗೂ ಮತ್ತಿತರು ಇದ್ದರು.


Leave a Reply