Koppal

ಕರ್ನಾಟಕ ರಾಜ್ಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳ ಸಂಘ- ನೂತನ ಕುಷ್ಟಗಿ ತಾಲೂಕ ಘಟಕ ರಚನೆ.


ಕುಷ್ಟಗಿ: ಸೆಪ್ಟೆಂಬರ್ 18 ರಂದು ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳ ಸಂಘವನ್ನು ನೂತನವಾಗಿ ರಚನೆಯಾಯಿತು.

ತಾಲೂಕಿನ ಎಲ್ಲಾ PHCO ರವರ ಅಭಿಪ್ರಾಯದ ಮೇರೆಗೆ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನಮ್ಮ ಈ ನೂತನ ಸಂಘದ ವತಿಯಿಂದ ಈ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಉಧ್ಯೋಗಿಗಳಿಗೆ ಏನಾದರೂ ತೊಂದರೆ ಗಳಾದರೆ ಅಂತಹ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಸದಸ್ಯರು ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರನ್ನಾಗಿ ಪಿ ಸುಶೀಲಾ,ತಾಲೂಕ ಅಧ್ಯಕ್ಷರಾಗಿ ಪ್ರೇಮಲತಾ,ಉಪ ಅಧ್ಯಕ್ಷರಾಗಿ ಶಾರದಾ ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಸರಸ್ವತಿ ನಾಯಕರನ್ನು ರವರುಗಳನ್ನು ಆಯ್ಕೆ ಮಾಡಲಾಯಿತು.

ಶೇಖರ್ ಗೊರೇಬಾಳ
ಕುಷ್ಟಗಿ.


Leave a Reply