Koppal

ಗಂಗಾವತಿ ನಗರಸಭೆ ಆಸ್ತಿಯನ್ನು ಉಳಿಸಲು ಸದಸ್ಯರು ಒತ್ತಾಯ


ಗಂಗಾವತಿ:

ನಗರಸಭೆ ಸಾಮಾನ್ಯ ಸಭೆ ತಾಲ್ಲೂಕು ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ನಡೆಯಿತು ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷರಾದ ಮಾಲಾಶ್ರೀ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು ಗಂಗಾವತಿ ನಗರದ ಅಭಿವೃದ್ಧಿಗಾಗಿ ಇಪ್ಪತ್ತೈದು ವಿಷಯಗಳನ್ನು ಚರ್ಚೆ ಮಾಡಲಾಯಿತು ಈ ಸಂದರ್ಭದಲ್ಲಿ ಗಂಗಾವತಿಯ ನಗರಸಭೆಯ ಎಲ್ಲ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು .ಗಂಗಾವತಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ ಜಮೀನುಗಳನ್ನು ಅತಿಕ್ರಮಣವಾಗಿ ಭೂಗಳ್ಳರು ತಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಸೃಷ್ಟಿಸಿಕೊಂಡಿರುವ ಬಗ್ಗೆ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರಾದ ಉಸ್ಮಾನ್ ಬಿಚ್ಚುಗತ್ತಿ ಸರ್ಕಾರಿ ಆಸ್ತಿಯ ಬಗ್ಗೆ ಧ್ವನಿ ಎತ್ತಿ ತಕ್ಷಣವೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು .ಗಂಗಾವತಿ ನಗರಸಭೆಯ ನಾಲ್ಕನೇ ವಾರ್ಡಿನ ಸ್ವತಂತ್ರ ಅಭ್ಯರ್ಥಿ ಸರ್ಬೋ ಜಿ ರಾವ್ ಅವರು ಮಾತನಾಡುತ್ತಾ ಗಂಗಾವತಿ ನಗರಸಭೆಯಲ್ಲಿ ದುಡ್ಡು ಕೊಟ್ಟರೆ ಸುಳ್ಳು ದಾಖಲಾತಿ ನೀಡುವಂತಹ ಗ್ಯಾಂಗ್ ಇದ್ದು ಅಧಿಕಾರಿಗಳು ಕೂಡ ಇವರ ಜತೆಯಲ್ಲಿ ಶಾಮೀಲಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರೂ ಗಂಗಾವತಿ ನಗರದಲ್ಲಿ ಈ ಹಿಂದೆ ಇದ್ದಂತಹ ಪೌರಾಯುಕ್ತರು ತೀರಿಕೊಂಡು ವರ್ಷ ಆಗಲಿಕ್ಕೆ ಬಂತು ಅವರ ಹೆಸರು ಮೇಲೆ ಸುಳ್ಳು ದಾಖಲಾತಿ ನೀಡಿರುವುದು ಬೆಳಕಿಗೆ ಬಂದಿದೆ ಸೆಪ್ಟೆಂಬರ್ 2ತಾರೀಕಿನಂದು ದಾಖಲಾತಿ ನೀಡಿರುವುದು ಬೆಳಕಿಗೆ ಬಂದಿದ್ದು ತಕ್ಷಣವೇ ಸುಳ್ಳು ದಾಖಲೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿರುವ ಸಹ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಮುಂದಾಗಬೇಕು ಮತ್ತು ಗಂಗಾವತಿ ನಗರಸಭೆಯಲ್ಲಿ ಬಹಳಷ್ಟು ಅಕ್ರಮಗಳು ಕಂಡು ಬರುತ್ತಿರುವುದು ವಿಪರ್ಯಾಸ ತಕ್ಷಣವೇ ಜಿಲ್ಲಾಡಳಿತ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಬಿಜೆಪಿ ನಗರಸಭೆ ಸದಸ್ಯ ಪರಶುರಾಮ ಮಡ್ಡೇರ್ ಆರೋಪ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ಉಪ್ಪಿನಮಳಿ ಕ್ಯಾಂಪಿನಲ್ಲಿ ಅಕ್ರಮವಾಗಿ ಗಂಗಾವತಿ ನಗರಸಭೆಗೆ ಸೇರಿರುವಂತಹ ಆಸ್ತಿಯನ್ನು ಖಾಸಗಿ ವ್ಯಕ್ತಿ ತನ್ನ ಹೆಸರಿಗೆ ನಮೂದಿಸಿಕೊಂಡು ಅಕ್ರಮವಾಗಿ ಲೆವಿಟ್ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ತಕ್ಷಣವೇ ಅಧಿಕಾರಿಗಳು ಸರ್ಕಾರದ ಆಸ್ತಿಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ ಗಂಗಾವತಿ ನಗರಸಭೆಯ ಬಹುತೇಕ ಆಸ್ತಿಗಳನ್ನು ಅಕ್ರಮವಾಗಿ ಲೇಔಟ್ ಗಳನ್ನು ಮಾಡಿ ತಮ್ಮ ಹೆಸರಿಗೆ ನಮೂದಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ ತಕ್ಷಣವೇ ಅಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಮುಂದಾಗಬೇಕು

ಗಂಗಾವತಿ ವರದಿಗಾರ
(ಹನಮೇಶ ಬಟಾರಿ)
9901465990


Leave a Reply