Koppal

ವೈಷ್ಣವ ರುದ್ರಭೂಮಿಗೆ ಮೂಲಸೌಕರ್ಯ ಒದಗಿಸಲು ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ


 

ಕುಷ್ಟಗಿ:  ಪಟ್ಟಣದ ಹೊರವಲಯ ಎನ್ ಎಚ್ -50 ಕ್ಕೆ ಹೊಂದಿಕೊಂಡಿರುವ ವೈಷ್ಣವ(ಜನಿವಾರ) ಸಮುದಾಯಗಳ ರುದ್ರಭೂಮಿ ಇದ್ದು ,ಸದರಿ ರುದ್ರಭೂಮಿಗೆ ಹೋಗಲು ಸರಿಯಾದ ರಸ್ತೆ ಇರುವದಿಲ್ಲ.ಹಾಗಾಗಿ ಸಿಸಿ ರಸ್ತೆ ನಿರ್ಮಿಸಬೇಕು.ನಮ್ಮ ಸಮುದಾಯಗಳ ಸಂಪ್ರದಾಯಗಳಂತೆ ಶವಸಂಸ್ಕಾರ ನಡೆದ ನಂತರ ರುದ್ರಭೂಮಿ ಜಾಗಕ್ಕೆ ತೆರಳಿ ಸ್ನಾನ ಮಾಡಿ ಮಡಿಯಾಗಿ 11ದಿನ ಕಾಲ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಹೀಗಾಗಿ ಇಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರು ಸಂಗ್ರಹಿಸಲು ಸಿಸ್ಟರ್ನ್ ಅಳವಡಿಸಬೇಕು.ರಾತ್ರಿ ವೇಳೆಯಲ್ಲೂ ಕೆಲ ಸಲ ಶವ ಸಂಸ್ಕಾರ ಮಾಡಬೇಕಾದ ಸಂದರ್ಭದಲ್ಲಿ ಕತ್ತಲೆಯಿಂದ ತೊಂದರೆ ಯಾಗುತ್ತಿದೆ.ವಿದ್ಯುತ್ ದೀಪವನ್ನು ಅಳವಡಿಸಿದರೆ ಅನುಕೂಲವಾಗುತ್ತದೆ.ರುದ್ರಭೂಮಿ ಒಳಾವರಣದಲ್ಲಿ ಜಾಲಿ ಕಂಟಿಗಳು ಬೆಳೆದಿದ್ದು ಜಂಗಲ್ ಕಟಿಂಗ್ ಮಾಡಿಸಬೇಕು.ಶವ ಸಂಸ್ಕಾರ ಮಾಡುವ ಜಾಗವನ್ನು ಬಿಟ್ಟು ರುದ್ರಭೂಮಿ ಯ ಆವರಣದಲ್ಲಿ ಸಿಸಿ ಬೆಡ್ ಅಳವಡಿಸಬೇಕು.ಹಾಗಾಗಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಅಧ್ಯಕ್ಷರಾದ ಜಿ.ಕೆ ಹಿರೇಮಠ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೈಷ್ಣವ ಸಮಾಜದ ಹಲವಾರು ಜನರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply