Belagavi

ಪಂಚಮಸಾಲಿ 2ಎ ಮೀಸಲಾತಿಗೆ ಸಿಎಂ ಸ್ಪಷ್ಠಿಕರಣ ನೀಡಬೇಕು : ಸ್ವಾಮೀಜಿ


ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕುಂದಾನಗರದಲ್ಲಿಂದು ಲಿಂಗಾಯತ ಪಂಚಮಸಾಲಿ ಸಮುದಾಯದ ವತಿಯಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಅಭಿಯಾನ ನಡೆಸಲಾಗಿದೆ ಎಂದು ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯಂಜಯ ಸ್ವಾಮೀಜಿ ಹೇಳಿದರು.

ಇಂದು ಮಾದ್ಯಮರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಸರ್ಕಾರಕ್ಕೆ ನೀಡಲಾದ ಗಡವು ಸೆಪ್ಟಂಬರ್ ೧೫ಕ್ಕೆ ಮುಗಿದಿದೆ. ಆದ್ರೆ, ಸೆಪ್ಟೆಂಬರ್ 15ರೊಳಗೆ ಮೀಸಲಾತಿ ಘೋಷಣೆ ಮಾಡ್ತೇವಿ ಅಂತಾ ಸರ್ಕಾರ ಹೇಳಿತ್ತು. ಆದರೆ, ಇಲ್ಲಿಯವರೆಗೂ ಸರ್ಕಾರ ಯಾವುದೇ ಸ್ಪಷ್ಠಿಕರಣ ನೀಡಿಲ್ಲ. ಬೆಂಗಳೂರಿನಲ್ಲಿ ಅಧಿವೇಶನವೂ ಸಹ ನಡೆದಿದೆ. ಅಧಿವೇಶನದಲ್ಲಾದರೂ ಸಿಎಂ ಅವರು ಸ್ಪಷ್ಠಿಕರಣ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಒತ್ತಾಯ ಮಾಡಿದರು.


Leave a Reply