Belagavi

ಇ-ಗ್ರಂಥಾಲಯ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ


ಬೆಳಗಾವಿ : ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ  ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು.

2.5 ರೂ.ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಇ-ಗ್ರಂಥಾಲಯ ಇದಾಗಿದ್ದು, ಕನ್ನಡ,‌ಇಂಗ್ಲೀಷ್, ಹಿಂದಿ, ಮರಾಠಿ ಹಾಗೂ ಉರ್ದು ಸೇರಿದಂತೆ ಒಟ್ಟು 5 ಭಾಷೆಗಳ ಸುಮಾರು 5000 ಡಿಜಿಟಲ್‌ ಪುಸ್ತಕಗಳನ್ನು  ಗ್ರಂಥಾಲಯ ಒಳಗೊಂಡಿದ್ದು ಏಕ ಮಾತ್ರದಲ್ಲಿ ಅನಿಯಮಿತ ಓದುಗರು ತಮ್ಮ ಮೂಬೈಲ್ ಮತ್ತು ಕಂಪ್ಯೂಟರ್ ಗಳಲ್ಲಿ ಡೌನಲೋಡ ಮಾಡಿ ಓದಬಹುದಾಗಿದೆ.

ಈ ಸಂದರ್ಭದಲ್ಲಿ ಸಚಿವರಾದ ಉಮೇಶ ಕತ್ತಿ,  ಗೋವಿಂದ ಕಾರಜೋಳ, ಬೈರತಿ ಬಸವರಾಜ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ,  ಶಾಸಕರಾದ ಅಭಯ್ ಪಾಟೀಲ್,  ಆನಂದ್ ಮಾಮನಿ, ಮಹಾಂತೇಶ ಕವಟಗಿಮಠ ,  ದುರ್ಯೋಧನ ಐಹೊಳೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಜನ‌ಪ್ರತಿನಿಧಿಗಳು ಉಪಸ್ಥಿತರಿದ್ದರು.


Leave a Reply