Belagavi

ಶಾಲೆಯನ್ನು ದೇವರಗುಡಿ ಎಂದು ಭಾವಿಸಬೇಕು : ಪೃಥ್ವಿಸಿಂಗ್


ಬೆಳಗಾವಿ: ಸಮಾಜದಲ್ಲಿ ಒಬ್ಬ ವ್ಯಕ್ತಿ ಒಳ್ಳೆಯದನ್ನು ಕಲೆಯಕಾದರೆ ಮೊದಲು ಶಾಲೆಯಲ್ಲಿ ಮಾತ್ರ. ಆ ಶಾಲೆಯನ್ನು ದೇವರಗುಡಿ ಎಂದು ಭಾವಿಸಬೇಕು ಎಂದು ಸಮಾಜ ಸೇವಕ ಪೃಥ್ವಿಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿ ತಾಲೂಕಿನ ಸಾರಥಿ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ “ಸಾಮಾಜಿಕ ನ್ಯಾಯ ದಿನ” ಕಾರ್ಯಕ್ರಮದ ನಿಮಿತ್ತವಾಗಿ ಮುಖ್ಯೋಪಾಧ್ಯಾ ರಾಜು ಕೋಲಕಾರ ಹಾಗೂ ಎಸ್ಸಿ, ಎಸ್ಟಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶಿಕ್ಷಕರಿಗೆ ಅಭಿನಂದನೆ ಮತ್ತು ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಶಾಲೆಯನ್ನು ದೇವರಗುಡಿ ಎಂದು ಭಾವಿಸಬೇಕು. ಈ ದೇವರಗುಡಿಯೊಳಿಗ ಸರಸ್ವತಿ ದೇವಿಗೆ ಕೈ ಜೋಡಿಸಿ ನಮಸ್ಕರಿಸಬೇಕು. ಜೊತೆಗೆ ಶಾಲಾ ಶಿಕ್ಷಕರನ್ನು ನಮ್ಮ ದೇವರೆಂದು ತಿಳ್ಕೊಂಡ ಪಾಠ ಕಲಿಯಬೇಕು. ಇಂತಹ ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡಮಕ್ಕಳು ಮುಂದಿನದಿನಗಳಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಪೃಥ್ವಿಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಮಯದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ವೀಣಾ ವಿಜಯಪುರೇ ಮಾತನಾಡಿ, ಸಂವಿಧಾನದ ಗುರಿ, ದ್ಯೆಯ, ನೈತಿಕ ಹಕ್ಕು ಮತ್ತು ಜವಾಬ್ದಾರಿ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕಾಗಿದೆ. ಯಾಕೆಂದರೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಆದ್ದರಿಂದ ಸಮಾಜಕ್ಕೆ ಒಳ್ಳೆಯದು ಮಾಡಬೇಕಾದರೆ ಮಕ್ಕಳು ಒಳ್ಳೆಯದನ್ನೆ ಕಲಿಯಬೇಕು ಎಂದರು.

ನಂತರ ಮಾತನಾಡಿದ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ರಾಹುಲ್ ಮೇತ್ರಿ ಅವರು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಭಾರತಕ್ಕೆ ಕೊಟ್ಟಂತಹ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಎಂಬ ಅಂಶ ಇದೆ. ಇದರ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಸಬೇಕಾಗಿದೆ ಎಂದು ಹೇಳಿದರು.

ಇದೇ ವೇಳೆ 2021-22ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಬೆಳಗಾವಿ ನಗರದ ಶಿಕ್ಷಕರಾದ ಹೇಮಾ ಅಂಗಡಿ, ಸುಮಾ ಹೊಸಮನಿ, ವೀಣಾ ಕುಲಕರ್ಣಿ, ಸುಮಿತ್ರಾ ಮೊಡರ, ಭಾರತಿ ಪಾಟೀಲ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಬಳಿಕ ಸರ್ಕಾರ ಸರಬರಾಜು ಮಾಡಿದ ಉಚಿತ ಪಠ್ಯ ಪುಸ್ತಕಗಳನ್ನು ಮಕ್ಕಳ ಪಾಲಕರಿಗೆ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇತ್ರಾ ಅಂಬಿಗೇರ ವಹಿಸಿದ್ದರು. ಗ್ರಾಪಂ ಸದಸ್ಯೆ ಜನಾಬಾಯಿ ಗುಡಗೆನಟ್ಟಿ, ಸಮಾಜ ಸೇವಕ ಸಾಗರ ಚೌಗಲೆ, ಎಸ್ ಡಿ ಎಂಸಿ ಉಪಾಧ್ಯಕ್ಷ ಆಶಿಫ್ ಮುಲ್ಲಾ, ಶಿಕ್ಷಣ ತಜ್ಞ ಉದಯ ಇಡಗಲ್ಲ, ಸಮಾಜ ಸೇವಕ ಜಸ್ವಂತ ಸಿಂಹ, ಗೀತಾ ಜಮಖಂಡಿ, ಎಸ್.ವಿ.ಕೆಳಗೇರಿ, ಸತೀಶ ಗುಡಗೆನಟ್ಟಿ, ಶಶಿಕಾಂತ ಸಿಂಗೆನ್ನವರ ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕ ಮತ್ತು ದೂರದರ್ಶನ ಕಲಾವಿದ ನಾಮದೇವ ಹತ್ತಿ ನಿರೂಪಿಸಿದರು. ಸುಮಾ ದೊಡಮನಿ ವಂದಿಸಿದರು.


Leave a Reply