Belagavi

ಬಿಜೆಪಿಯ ಭದ್ರ ಬುನಾದಿಯಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಕೊಡುಗೆ ಅವಿಸ್ಮರಣೀಯ


ಬೈಲಹೊಂಗಲ ೨೭: ಭಾರತೀಯ ಜನತಾ ಪಕ್ಷ ಬೈಲಹೊಂಗಲ ಮಂಡಲ ವತಿಯಿಂದ ಸುಕ್ಷೇತ್ರ ಸೊಗಲದ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಜನಸಂಘದ ಪ್ರಮುಖ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ೧೦೫ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ ಅಂತ್ಯೋದಯ ಪರಿಕಲ್ಪನೆಯನ್ನು ಸಾರಿದ ಮಹಾನ್ ವ್ಯಕ್ತಿ, ಏಕಾತ್ಮ ಮಾನವತಾವಾದ ಪರಿಕಲ್ಪನೆ ಹರಿಕಾರ, ಜನಸಂಘದ ಸಂಸ್ಥಾಪಕರಲ್ಲಿ ಪ್ರಮುಖರು, ಆದರ್ಶ ರಾಷ್ಟç ಸೇವಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸೇವೆ, ಕಾರ್ಯ ದೇಶಕ್ಕೆ ಅವಿಸ್ಮರಣೀಯವಾದದ್ದು, ಅವರ ಜೀವನ ಮೌಲ್ಯ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಭಾರತೀಯ ಜನತಾ ಪಕ್ಷವು ಇಂದು ವಿಶ್ವಮಟ್ಟಕ್ಕೆ ಹೊರಹೊಮ್ಮಲು ದೀನದಯಾಳ್ ಉಪಾಧ್ಯಾಯ ಅವರಂತಹ ಮಹ£Ãಯರ ಕೊಡುಗೆ ಪಕ್ಷಕ್ಕೆ ಬಹುಮುಖ್ಯವಾಗಿದೆ ಹಾಗಾಗಿ ಅವರ ಸವಿನೆನಪಿಗಾಗಿ ಇವತ್ತು ಸೊಗಲ ಕ್ಷೇತ್ರದಲ್ಲಿ ಅವರ ೧೦೫ನೇ ಜನ್ಮದಿನೋತ್ಸವ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮಂಡಲ ಉಪಾಧ್ಯಕ್ಷ ಸುಭಾಷ ತುರಮರಿ ವಹಿಸಿಕೊಂಡಿದ್ದರು, ಬಿಜೆಪಿ ಹಿರಿಯ ಮುಖಂಡ ಗುರುಪಾದ ಕಳ್ಳಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ ಗುರು ಮೆಟಗುಡ್ಡ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಬೂದಿಹಾಳ, £ಕಟಪೂರ್ವ ಜಿಪಂ ಸದಸ್ಯ ಬಸವರಾಜ ಬಂಡಿವಡ್ಡರ, ತಾಪಂ ಸದಸ್ಯರಾದ ಸುರೇಶ ಮ್ಯಾಕಲ, ಹನುಮಂತ ತಳವಾರ, ಸುಣ್ಣ ಬಾರಿಗಿಡದ, ಬಿಜೆಪಿ ಜಿಲ್ಲಾಮಾಧ್ಯಮ ವಕ್ತಾರ ಎಫ್ ಎಸ್ ಸಿದ್ದನಗೌಡ್ರ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಜಗದೀಶ ಮೇಟಿ, ಯುವ ಮೋರ್ಚಾ ಜಿಲ್ಲಾ ಕೋಶಾಧ್ಯಕ್ಷ ಸಚಿನ ಕಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜೇರ, ಯುವ ಮೋರ್ಚಾ ತಾಲೂಕ ಉಪಾಧ್ಯಕ್ಷ ಗೌಡಪ್ಪ ಹೊಸಮ£, ಬಿಜೆಪಿ ತಾಲೂಕ ಕಾರ್ಯದರ್ಶಿ ನಾಮದೇವ ಸಿಂಗಣ್ಣವರ, ರಾಜು ಹೊಂಗಲ, ತಾಲೂಕ ಮಾಧ್ಯಮ ವಕ್ತಾರ ದಯಾನಂದ ಪರಾಳಶೆಟ್ಟರ, ಸಿದ್ದಪ್ಪ ಕಾರಿಮ£ ಹಾಗೂ ಮುರಗೋಡ ಹೊಸೂರ ಭಾಗದ ವಿವಿಧ ಹಳ್ಳಿಗಳ ಮುಖಂಡರು ಬೂತ್ ಮಟ್ಟದ ಅಧ್ಯಕ್ಷರು, ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಕುರಿತು ಮಲ್ಲು ಬೆಳಗಾವಿ ವಿವರಿಸಿದರು ಕಾರ್ಯಕ್ರಮವನ್ನು ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಡಪದ £ರೂಪಿಸಿದರು ಯುವ ಮೋರ್ಚಾ ತಾಲೂಕ ಅಧ್ಯಕ್ಷ ಈರಣ್ಣ ಬಿಡಿ ಸ್ವಾಗತಿಸಿ ವಂದಿಸಿದರು.


Leave a Reply