Belagavi

ಭಾರತ ಬಂದ್ : ಪ್ರತಿಭಟನೆ ವೇಳೆ ಅಜ್ಜಿಯ ಮೈಯಲ್ಲಿ ಬಂದ ರೇಣುಕಾದೇವಿ… ಮಾಡಿದ್ದೇನು ಹೈಡ್ರಾಮಾ..?


ಬೆಳಗಾವಿ:  ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಅಜ್ಜಿಯೊಬ್ಬರು ಸವದತ್ತಿಯ ರೇಣುಕಾದೇವಿ ತನ್ನ ಮೈಮೇಲೆ ಬಂದಿದ್ದಾಳೆ ಎಂದು ಹೈಡ್ರಾಮಾ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ತೊಂದರೆ ಕೊಟ್ಟರೆ ನಿಮ್ಮನ್ನು ಬಿಡುವುದಿಲ್ಲ ಎಂದು ಅಜ್ಜಿ ಕಿರುಚಾಡಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳ ವಿರೋಧಿಸಿ ಇಂದು ಭಾರತ್ ಬಂದ್​ಗೆ ಕರೆ ನೀಡಲಾಗಿದ್ದು, ಇದಕ್ಕೆ ಬೆಂಬಲವಾಗಿ ವಿವಿಧ ಹಳ್ಳಿಗಳಿಂದ ಬಂದಿರುವ ರೈತರು ಇಂದು ಸೋಮವಾರ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ರೇಣುಕಾ ತಡಕೋಡ ಎಂಬ ವೃದ್ಧೆ ಕೈಯಲ್ಲಿ ರೈತ ಧ್ವಜ ಹಿಡಿದು ಹೋರಾಟಕ್ಕೆ ಆಗಮಿಸಿದ್ದರು. ಈ ವೇಳೆ ಸವದತ್ತಿಯ ರೇಣುಕಾದೇವಿ ತನ್ನ ಮೈಮೇಲೆ ಬಂದಿದ್ದಾಳೆ ಎಂದು ಹೈಡ್ರಾಮಾ ಮಾಡಿದ್ದಾರೆ.


Leave a Reply