Belagavi

ನಾಳೆಯಿಂದ ಯಲ್ಲಮ್ಮನ ದರ್ಶನಕ್ಕೆ ಮುಕ್ತ…


ಸವದತ್ತಿ : ಶ್ರೀ ರೇಣುಕಾ ಯಲ್ಲಮ್ಮನ ಸಾರ್ವಜನಿಕ ದರ್ಶನಕ್ಕೆ ನಾಳೆ ಬೆಳಿಗ್ಗೆ 08:00 ಗಂಟೆಯಿಂದ ಅವಕಾಶ ಕಲ್ಪಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಷರತ್ತು ಬದ್ದ ಆದೇಶ ಹೊರಡಿಸಿದ್ದಾರೆ.

ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಸುಕ್ಷೇತ್ರ ಸವದತ್ತಿಯ ರೇಣುಕಾ ಯಲ್ಲಮ್ಮನ ದೇವಸ್ಥಾನವು ಕೊರೊನಾ ಹಿನ್ನೆಲೆ 2020 ರ ಮಾರ್ಚ ನಿಂದ ಸಾರ್ವಜನಿಕ ದರ್ಶನವನ್ನು ನಿರ್ಬಂಧಿಸುತ್ತು ನಂತರ ಫೆಬ್ರವರಿ 1 ರಿಂದ ಸಾರ್ವಜನಿಕ ಅವಕಾಶಕ್ಕೆ ಪ್ರವೇಶ
ಕಲ್ಪಿಸಿತ್ತಾದರು ಅದನ್ನು ಕೇವಲ ಇಪ್ಪತ್ತು ದಿನಗಳಿಗೆ ಸೀಮಿತಗೊಳಿಸಿ ಮತ್ತೆ ಫೆಬ್ರವರಿ 20 ರಂದು ಸಾರ್ವಜನಿಕ ದರ್ಶನವನ್ನು ಮತ್ತೆ ನಿಷೇಧಿಸಿ ಆದೇಶ ಹೊರಡಿಸಿತ್ತು ನಂತರದಲ್ಲಿ 28 ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಸಾರ್ವಜನಿಕ ದರ್ಶನಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ:
* ದೇವಸ್ಥಾನದಲ್ಲಿ ಜನಸಂದಣಿ ಸೇರದಂತೆ. ವಿಷೇಶ ಉತ್ಸವ, ಜಾತ್ರೆಗೆ ಅವಕಾಶ ಇಲ್ಲ.
* ದೇವಸ್ಥಾನದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಪಾಲನೆ.
* ದೇವಾಲಯದ ಸುತ್ತಮುತ್ತಲಿನ ಆವರಣದಲ್ಲಿ 80 ಪೀಟ್ ರಸ್ತೆ ಹಾಗೂ ಬಳಿಗಾರ ಪೇಟೆಯಲ್ಲಿ ಅಂಗಡಿ ಮುಗ್ಗಟ್ಟುಗಳಿಗೆ ನಿರ್ಬಂಧಿಸಿ. ರಿಂಗ್ ರೋಡ್ ಪ್ರದೇಶದಲ್ಲಿ ಮಾತ್ರ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಿದೆ.
* ವಾಹನಗಳಿಗೆ ಚಕ್ ಪೋಸ್ಟ್ ಹತ್ತಿರದಲ್ಲಿ ನಿಗದಿಪಡಿಸಿದ ಪ್ರದೇಶದಲ್ಲಿ ಮಾತ್ರ ಪಾರ್ಕಿಂಗ್ ಮಾಡುವಂತೆ ಮತ್ತು
* ಸರ್ಕಾರ ಕೋವಿಡ್-19‌ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯ ಪಾಲಿಸುವಂತೆ ಆದೇಶಿಸಿದೆ.

ಜನಪ್ರತಿನಿಧಿ, ಮುಖಂಡರು ಹಾಗೂ ಭಕ್ತರ ಒತ್ತಾಯಕ್ಕೆ ಮನಿದ ಜಿಲ್ಲಾಡಳಿತ 18 ತಿಂಗಳ ಕಾಲದ ನಂತರ ಶ್ರೀ ರೇಣುಕಾ ಎಲ್ಲಮ್ಮನ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಯಲ್ಲಮ್ಮನ ಭಕ್ತರಿಲ್ಲಿ ಹರಷ ಉಂಟಾಗಿದೆ.


Leave a Reply