Belagavi

ಸಕ್ಕರೆ ಕಾರ್ಖಾನೆ ಮಾಲಿಕರು ಸರಕಾರದಷ್ಟು ದೊಡ್ಡವರಲ್ಲ: ಬೇಸರ ವ್ಯಕ್ತ ಪಡಿಸಿದ ಸಚಿವ ಹೆಬ್ಬಾರ


ಬೆಳಗಾವಿ: ಸರಕಾರದ ಸಲಹೆ ಮತ್ತು ಆದೇಶಗಳನ್ನು ಸಕ್ಕರೆ ಕಾರ್ಖಾನೆ ಮಾಲಿಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರಕಾರದಷ್ಟು ನೀವು ದೊಡ್ಡವರಲ್ಲಾ ಎಂಬ ಅರಿವಿರಲಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಗಾವಿ ಸುವರ್ಣಸೌಧದಲ್ಲಿ ಹಮ್ಮಿಕೊಂಡಿದ್ದ ಸಕ್ಕರೆ ಇಲಾಖೆ, ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಕ್ಕರೆ ಕಾರ್ಖಾನೆಯವರಿಗೆ ಸರಕಾರ ಹಾಗೂ ಕಾರ್ಮಿಕ ಇಲಾಖೆಯ ಬಗ್ಗೆ ಅಸಡ್ಡೆತನದಿಂದ ಸರಕಾರ ಒಂದು ನಿರ್ಣಯಕ್ಕೆ ಬರಬೇಕಾಗಿದೆ. ಸುಮಾರು ಐದು ಸಭೆಯಗಳಲ್ಲಿ ಕಾರ್ಖಾನೆ ಮಾಲಿಕರು ಗೈರಾಗಿದ್ದಾರೆ. ಈ ರೀತಿಯ ನಿರ್ಲಕ್ಷ್ಯ ಸಲ್ಲದು ಎಂದು ಬೇಸರ ವ್ಯಕ್ತಪಡಿಸಿದರು.

ಬಳಿಕ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲಿಕರು ಸರಕಾರದ ಆದೇಶಗಳಿಗೆ ಮನ್ನಣೆ ಕೊಡತ್ತಿಲ್ಲ ಎಂದು ತಿಳಿದು ಬಂದಿದೆ. ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ. ಕಾರ್ಮಿಕರಿಗೆ ಹಾಗೂ ರೈತರಿಗೆ ಅನ್ಯಾಯವಾಗದಂತೆ ಸರಕಾರದ ಅಭಿಪ್ರಾಯವನ್ನು ಕಾರ್ಮಿಕ ಸಚಿವರು ನಿರ್ಧಾರ ಕೈಗೊಳ್ಳಲು ಸಕ್ಕರೆ ಇಲಾಖೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದರು.


Leave a Reply