Belagavi

ಇಂದಿನಿಂದ ಯಲಮ್ಮ ದೇವಸ್ಥಾನ ಓಪನ್; ಜಾತ್ರೆ, ಉತ್ಸವಕ್ಕೆ ನಿರ್ಬಂಧ ; ಎಂ.ಜಿ.ಹಿರೇಮಠ


ಬೆಳಗಾವಿ: ಮಹಾಮಾರಿ ಕೊರೊನಾ ‌ಹಿನ್ನಲೆಯಲ್ಲಿ ಬಂದ್ ಆಗಿದ್ದ ಸವದತ್ತಿ ರೇಣುಕಾ ಯಲಮ್ಮ ದೇವಾಲಯ ಇಂದಿನಿಂದ ಓಪನ್ ಆಗಿದೆ. ರೇಣುಕಾ ಯಲ್ಲಮ್ಮ ದೇವಿ ದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಿರುವ ಜಿಲ್ಲಾಡಳಿತ, ಜನಸಂದಣಿ ಆಗುವಂತಹ ಯಾವುದೇ ಜಾತ್ರೆ, ಉತ್ಸವ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಾದ್ಯಮರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಮತ್ತು ಪಕ್ಕದ ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನಲೆ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರ ಜೊತೆಗೆ ಮಾತನಾಡಿ ಮತ್ತೆ ದೇವಸ್ಥಾನ ಓಪನ್ ಮಾಡಲಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಶುರುವಾಗಿದ್ದು, ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇನ್ನು ದೇವಿ ದರ್ಶನಕ್ಕೆ ಆಗಮಿವಂತ ಭಕ್ತಾಧಿಗಳಿಗೆ ಟೆಸ್ಟಿಂಗ್ ಮಾಡಲಾಗುತ್ತಿದೆ. ಜೊತೆಗೆ ವ್ಯಾಕ್ಸಿನೇಷನ್‌ ತೆಗೆದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.


Leave a Reply